ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಆದ್ಯತೆ ಸಿಕ್ಕಿದೆ: ಎಚ್.ಸಿ.ಜಯಮ್ಮ

| Published : Mar 07 2024, 01:45 AM IST

ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಆದ್ಯತೆ ಸಿಕ್ಕಿದೆ: ಎಚ್.ಸಿ.ಜಯಮ್ಮ
Share this Article
  • FB
  • TW
  • Linkdin
  • Email

ಸಾರಾಂಶ

ನರೇಂದ್ರ ಮೋದಿಯವರ ಆಶಯದಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೂಚನೆಯಂತೆ ರಾಷ್ಟ್ರಮಟ್ಟದಲ್ಲಿ ಮಹಿಳೆಯರ ಸಾಂಘಿಕ ಶಕ್ತಿ ಗುರುತಿಸುವ ಕೆಲಸವಾಗಿದೆ. ಮಹಿಳೆಯರ ಸಂಪರ್ಕ ಮತ್ತು ಜಾಗೃತಿ, ಬಿಜೆಪಿ ಸರ್ಕಾರ ಮಹಿಳೆಯರಿಗಾಗಿ ನೀಡಿದ ಜನಪರ ಯೋಜನೆ, ಮೀಸಲಾತಿ, ಸ್ವಚ್ಛ ಭಾರತ, ಉಜ್ವಲ, ಆಯುಷ್ಮಾನ್ ಭಾರತ್ ಇತ್ಯಾದಿ ಕಾರ್ಯಕ್ರಮಗಳ ಅಭಿಯಾನ ಒಳಗೊಂಡಿತ್ತು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಪ್ರಧಾನಿ ನರೇಂದ್ರ ಮೋದಿ ರಕ್ಷಣಾ ಕ್ಷೇತ್ರ, ಆರ್ಥಿಕ ಸಬಲೀಕರಣ ಹೀಗೆ ಎಲ್ಲದರಲ್ಲೂ ಮಹಿಳೆಯರಿಗೆ ಪ್ರಾತಿನಿಧ್ಯ ಕೊಟ್ಟಿದ್ದಾರೆ. ವಿಶೇಷವಾಗಿ ಮಹಿಳೆಯರಿಗೆ ಅನೇಕ ಯೋಜನೆಗಳ ಜಾರಿಗೆ ತಂದಿದ್ದಾರೆ ಎಂದು ನಾರಿಶಕ್ತಿ ವಂದನಾ ಕಾರ್ಯಕ್ರಮದ ಜಿಲ್ಲಾ ಉಸ್ತುವಾರಿ ಎಚ್.ಸಿ.ಜಯಮ್ಮ ತಿಳಿಸಿದರು.

ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಬುಧವಾರ ಬಿಜೆಪಿ ಮಹಿಳಾ ಮೋರ್ಚಾದಿಂದ ಆಯೋಜಿಸಿದ ನಾರಿಶಕ್ತಿ ವಂದನಾ ಕಾರ್ಯಕ್ರಮದ ಸಮಾರೋಪದ ಪ್ರಯುಕ್ತ ನಡೆದ ಮಹಿಳಾ ಸಮಾವೇಶದಲ್ಲಿ ಮಾತನಾಡಿ, ಹಿಂದಿನ 60 ವರ್ಷಗಳಿಗಿಂತಲೂ ಕಳೆದ 10 ವರ್ಷಗಳ ನರೇಂದ್ರ ಮೋದಿಯವರ ಆಡಳಿತದಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ಸಿಕ್ಕಿದೆ ಎಂದರು.

ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾಗ್ಯ ಪಿಸಾಳೆ ಮಾತನಾಡಿ, ನರೇಂದ್ರ ಮೋದಿಯವರ ಆಶಯದಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೂಚನೆಯಂತೆ ರಾಷ್ಟ್ರಮಟ್ಟದಲ್ಲಿ ಮಹಿಳೆಯರ ಸಾಂಘಿಕ ಶಕ್ತಿ ಗುರುತಿಸುವ ಕೆಲಸವಾಗಿದೆ. ಮಹಿಳೆಯರ ಸಂಪರ್ಕ ಮತ್ತು ಜಾಗೃತಿ, ಬಿಜೆಪಿ ಸರ್ಕಾರ ಮಹಿಳೆಯರಿಗಾಗಿ ನೀಡಿದ ಜನಪರ ಯೋಜನೆ, ಮೀಸಲಾತಿ, ಸ್ವಚ್ಛ ಭಾರತ, ಉಜ್ವಲ, ಆಯುಷ್ಮಾನ್ ಭಾರತ್ ಇತ್ಯಾದಿ ಕಾರ್ಯಕ್ರಮಗಳ ಅಭಿಯಾನ ಒಳಗೊಂಡಿತ್ತು. ವಿಕಸಿತ ಭಾರತದ ಕನಸು ನನಸಾಗಿಸಲು ಮಹಿಳಾ ಶಕ್ತಿಯನ್ನು ಬಳಸಿಕೊಳ್ಳಲು ಅಭಿಯಾನ ಸಹಕಾರಿಯಾಗಿದೆ ಎಂದು ತಿಳಿಸಿದರು.

ಮಹಿಳಾ ಮೋರ್ಚಾದ ಇನ್ನೋರ್ವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಷ್ಪಾ ವಾಲಿ ಮಾತನಾಡಿ, ಮಹಿಳೆಯರ ಸಣ್ಣಪುಟ್ಟ ವಿಷಯಗಳನ್ನು ಅರಿತು, ಅವರ ಏಳಿಗೆಗಾಗಿ ಹಗಲಿರುಳೂ ಚಿಂತಿಸುವ ಮಾತೃಹೃದಯಿ ನರೇಂದ್ರ ಮೋದಿಯವರು. ಪಶ್ಚಿಮ ಬಂಗಾಳದ ಬರ್ಸಾತ್‌ನಲ್ಲಿ ನಡೆದ ರಾಷ್ಟ್ರಮಟ್ಟದ ನಾರಿಶಕ್ತಿ ವಂದನಾ ಸಮಾರೋಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿ, ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಸ್ಥೈರ್ಯ ತುಂಬಿದ್ದಾರೆ. ಮಹಿಳಾ ದೌರ್ಜನ್ಯ ತಡೆಗಟ್ಟಿದ ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಳಿ ಅಧಿಕಾರ ಇರಬಹುದು. ಆದರೆ ನಮ್ಮೊಂದಿಗೆ ದೇಶದ ಪ್ರಧಾನಿಯೇ ಇದ್ದಾರೆ ಎಂಬ ವಿಶ್ವಾಸ ನರೇಂದ್ರ ಮೋದಿಯವರು ಮಹಿಳೆಯರಲ್ಲಿ ಮೂಡಿಸಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಹಿಳಾ ಮೋರ್ಚಾ ಪ್ರಮುಖರಾದ ಭಾರತಿ ಜಂಬಗಿ, ನೀತು ನಂದೀಶ್, ಮಂಜುಳಾ ಗದ್ದಿಗೇಶ್, ಕಲ್ಲಮ್ಮ, ಉಮಾ, ಸವಿತಾ, ಸುಮಾ, ಸುಮಂಗಲ, ರೇಖಾ, ಜಯಲಕ್ಷ್ಮಿ, ಎಂ.ರೇಣುಕಾ, ಸರಸ್ವತಿ, ರೇಣುಕಾ ಬಣಕಾರ್, ಸಾವಿತ್ರಮ್ಮ, ಮಂಜುಳ, ಭಾಗ್ಯ ಮತ್ತಿತರರಿದ್ದರು.

ಕಾರ್ಯಕ್ರಮದ ಮೊದಲು ಪಶ್ಚಿಮ ಬಂಗಾಳದಲ್ಲಿನ ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ ಖಂಡಿಸಿ ಜಿಲ್ಲಾ ಮಹಿಳಾ ಮೋರ್ಚಾದಿಂದ ಜಯದೇವ ವೃತ್ತದವರೆಗೆ ಮ್ಯಾರಥಾನ್ ನಡೆಸಲಾಯಿತು. ನಂತರ ಪಕ್ಷದ ಕಚೇರಿಯಲ್ಲಿ, ಪಶ್ಚಿಮ ಬಂಗಾಳದ ಬರ್ಸಾತ್‌ನಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತರಿದ್ದ ಕಾರ್ಯಕ್ರಮದ ನೇರಪ್ರಸಾರ ವೀಕ್ಷಿಸಲಾಯಿತು.

........