ಮಹಿಳೆಯರು ಜವಾಬ್ದಾರಿಗಳ ಅಚ್ಚುಕಟ್ಟಾಗಿ ನಿರ್ವಹಿಸುವರು: ಎ.ವಾಸೀಂ

| Published : Mar 15 2024, 01:19 AM IST

ಮಹಿಳೆಯರು ಜವಾಬ್ದಾರಿಗಳ ಅಚ್ಚುಕಟ್ಟಾಗಿ ನಿರ್ವಹಿಸುವರು: ಎ.ವಾಸೀಂ
Share this Article
  • FB
  • TW
  • Linkdin
  • Email

ಸಾರಾಂಶ

ನಾಗರಿಕ ಸಮಾಜದಲ್ಲಿ ಮಹಿಳೆಯರಿಗೆ ಪುರುಷರಷ್ಟೆ ಸರಿ-ಸಮಾನವಾದ ಅವಕಾಶಗಳ ಕೊಡಿಸುವಲ್ಲಿ 12ನೇ ಶತಮಾನದ ಬಸವೇಶ್ವರರ ಪಾತ್ರ ಮಹತ್ವದ್ದಾಗಿದ್ದು 12ನೇ ಶತಮಾನದಿಂದ 21ನೇ ಶತಮಾನದ ವರೆಗಿನ ಹೋರಾಟದ ಪ್ರತಿಫಲವಾಗಿ ಇಂದು ಮಹಿಳೆಯರಿಗೆ ಎಲ್ಲಾ ತರಹದ ಉದ್ಯೋಗಗಳಲ್ಲಿ ಮೀಸಲಾತಿಗಳು ದೊರೆಯುತ್ತಿವೆ.

ಕನ್ನಡಪ್ರಭ ವಾರ್ತೆ ಚನ್ನಗಿರಿ

ಪ್ರಸ್ತುತ ದಿನಮಾನಗಳಲ್ಲಿ ನಾಗರಿಕ ಸಮಾಜ ಪ್ರಗತಿಯತ್ತ ಸಾಗುತ್ತಿದ್ದಂತೆಯೇ ಮಹಿಳೆಯರಿಗೆ ಸ್ಥಾನಮಾನಗಳು ಹೆಚ್ಚುತ್ತಾ ಸಾಗುತ್ತಿದ್ದು ಮಹಿಳೆಯರಿಗೆ ಸಿಗುವ ಅವಕಾಶಗಳ ಬಳಸಿ ಉತ್ತಮ ಸಾಧನೆ ಮಾಡಬೇಕಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಎ.ವಾಸೀಂ ಹೇಳಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಮಹಿಳಾ ಪೌರಕಾರ್ಮಿಕರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ ಮಹಿಳೆಯು ಎಲ್ಲಾ ತರಹದ ಕೆಲಸಗಳ ಅಚ್ಚುಕಟ್ಟಾಗಿ ನಿರ್ವಹಿಸುವ ಶಕ್ತಿಯಿದ್ದು ಮಹಿಳೆಯರಿಗೆ ಯಾವುದೇ ಜವಾಬ್ದಾರಿಗಳ ನೀಡಿದರೂ ಆ ಕೆಲಸ ಅಚ್ಚುಕಟ್ಟಾಗಿ ನಿರ್ವಹಿಸಿ ಸೈ ಎನ್ನಿಸಿಕೊಳ್ಳುವರು ಎಂದರು.

ನಾಗರಿಕ ಸಮಾಜದಲ್ಲಿ ಮಹಿಳೆಯರಿಗೆ ಪುರುಷರಷ್ಟೆ ಸರಿ-ಸಮಾನವಾದ ಅವಕಾಶಗಳ ಕೊಡಿಸುವಲ್ಲಿ 12ನೇ ಶತಮಾನದ ಬಸವೇಶ್ವರರ ಪಾತ್ರ ಮಹತ್ವದ್ದಾಗಿದ್ದು 12ನೇ ಶತಮಾನದಿಂದ 21ನೇ ಶತಮಾನದ ವರೆಗಿನ ಹೋರಾಟದ ಪ್ರತಿಫಲವಾಗಿ ಇಂದು ಮಹಿಳೆಯರಿಗೆ ಎಲ್ಲಾ ತರಹದ ಉದ್ಯೋಗಗಳಲ್ಲಿ ಮೀಸಲಾತಿಗಳು ದೊರೆಯುತ್ತಿವೆ ಎಂದರು.

ಇತ್ತೀಚಿನ ದಿನಮಾನಗಳಲ್ಲಿ ರಾಜಕೀಯ ಕ್ಷೇತ್ರದಲ್ಲಿಯೂ ಮಹಿಳೆಯರು ತಮ್ಮದೇ ಆದ ಛಾಪು ಮೂಡಿಸುತ್ತಿದ್ದು ತೊಟ್ಟಿಲನ್ನು ತೂಗುವ ಕೈಗಳು ದೇಶವನ್ನು ಆಳುತ್ತವೆ ಎಂಬ ಮಾತು ಮಹಿಳೆಯರು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ಪುರಸಭೆಯ ಹಿರಿಯ ಮಹಿಳಾ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಶಿವರುದ್ರಪ್ಪ, ಸದಸ್ಯರಾದ ಪಟ್ಲಿನಾಗರಾಜ್, ಪಾರಿಪರಮೇಶ್, ಮೊಟ್ಟೆಚಿಕ್ಕಣ್ಣ, ಕಮಲಾ ಹರೀಶ್, ಸವಿತಾರಾಘವೇಂದ್ರ, ಜಯಲಕ್ಷ್ಮಿ, ಸರ್ವಮಂಗಳಮ್ಮ, ಸೈಯ್ಯದ್ ಗೌಸ್ ಪೀರ್. ಗಾದ್ರಿರಾಜು, ತನ್ವೀರ್. ಜಿ.ನಿಂಗಪ್ಪ, ಲತಾ, ಜರೀನಾಭಿ, ಸಿ.ಆರ್.ಅಣ್ಣಯ್ಯ, ಲಕ್ಷ್ಮೀದೇವಮ್ಮ, ಅಭಿಯಂತರ ಹಾಲೇಶಪ್ಪ ಸೇರಿ ಕಚೇರಿ ಸಿಬ್ಬಂದಿ ಹಾಜರಿದ್ದರು.