ಸಾರ್ಥಕ ಬದುಕಿಗೆ ಮಹಿಳೆಯರ ಕೊಡುಗೆ ಅಪಾರ: ಜಿ.ಎಂ. ಪ್ರಕಾಶ್

| Published : Mar 11 2025, 12:46 AM IST

ಸಾರ್ಥಕ ಬದುಕಿಗೆ ಮಹಿಳೆಯರ ಕೊಡುಗೆ ಅಪಾರ: ಜಿ.ಎಂ. ಪ್ರಕಾಶ್
Share this Article
  • FB
  • TW
  • Linkdin
  • Email

ಸಾರಾಂಶ

ಅಜ್ಜಂಪುರ, ಪ್ರತಿಯೊಬ್ಬ ಮನುಷ್ಯನ ಸಾರ್ಥಕ ಬದುಕಿನಲ್ಲಿ ಒಂದಲ್ಲ ಒಂದು ರೀತಿ ಮಹಿಳೆಯ ಕೊಡುಗೆ ಇರುತ್ತದೆ ಎಂದು ಅಜ್ಜಂಪುರ ಲಯನ್ಸ್ ಕ್ಲಬ್ ಅಧ್ಯಕ್ಷ ಜಿ.ಎಂ. ಪ್ರಕಾಶ್ ತಿಳಿಸಿದರು.

ಅಜ್ಜಂಪುರದಲ್ಲಿ ಲಯನ್ಸ್ ಕ್ಲಬ್ ನಿಂದ ಮಹಿಳಾ ದಿನ

ಕನ್ನಡಪ್ರಭ ವಾರ್ತೆ, ಅಜ್ಜಂಪುರ

ಪ್ರತಿಯೊಬ್ಬ ಮನುಷ್ಯನ ಸಾರ್ಥಕ ಬದುಕಿನಲ್ಲಿ ಒಂದಲ್ಲ ಒಂದು ರೀತಿ ಮಹಿಳೆಯ ಕೊಡುಗೆ ಇರುತ್ತದೆ ಎಂದು ಅಜ್ಜಂಪುರ ಲಯನ್ಸ್ ಕ್ಲಬ್ ಅಧ್ಯಕ್ಷ ಜಿ.ಎಂ. ಪ್ರಕಾಶ್ ತಿಳಿಸಿದರು.

ಶನಿವಾರ ಅಜ್ಜಂಪುರದಲ್ಲಿ ಲಯನ್ಸ್ ಕ್ಲಬ್ ನಿಂದ ಮಹಿಳಾ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ದಾದಿಯರಾದ ಸುನಂದ ಹಾಗೂ ಕಮಲಮ್ಮ ರವರನ್ನು ಅಭಿನಂದಿಸಿ ಮಾತನಾಡಿದರು. ಮಹಿಳೆ ಅಬಲೆಯಲ್ಲ ಸಬಲೇ ಎನ್ನುವುದನ್ನು ಮಹಿಳೆಯರು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ನಿರೂಪಿಸಿದ್ದಾರೆ ಎಂದರು.

ಈ ನಿಟ್ಟಿನಲ್ಲಿ ತಮ್ಮ ವೃತ್ತಿ ಜೀವನದ ಮೂಲಕ ಬೇರೆಯವರಿಗೆ ಮಾದರಿಯಾದ ಇಂತಹ ಮಹಿಳೆಯರನ್ನು ಅಭಿನಂದಿ ಸುತ್ತಿರುವುದು ನಿಜಕ್ಕೂ ಸಾರ್ಥಕತೆ ತಂದಿದೆ ಎಂದರು.

ಉಪಾಧ್ಯಕ್ಷ ಶಿವಮೂರ್ತಿ ಮಾತನಾಡಿ ದೈವ ಸ್ವರೂಪಿ ಮಹಿಳೆಗೆ ಬೇಕಾದ ಗುರುತು, ಗೌರವ, ರಕ್ಷಣೆ ವಿದ್ಯೆ ಸ್ಥಾನಮಾನಗಳು ಸದಾ ಸಿಗಲಿ ಈ ಮೂಲಕ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಂತಾಗ ಬೇಕು ಎಂದರು.

ಲಯನ್ಸ್ ಕ್ಲಬ್ ಕಾರ್ಯದರ್ಶಿ ಸತೀಶ್ ಮಾತನಾಡಿ ಮಾತೃ ಶಕ್ತಿ, ವಾತ್ಸಲ್ಯ, ಸಹನೆ, ಪ್ರೀತಿ, ತಾಳ್ಮೆ , ಆರೈಕೆ ಸತ್ಕಾರ ಗುಣಗಳನ್ನು ತನ್ನ ಹುಟ್ಟಿನಿಂದಲೇ ಮೈಗೂಡಿಸಿಕೊಂಡು ಜೀವನದಲ್ಲಿ ಹಲವಾರು ಪಾತ್ರ ನಿರ್ವಹಿಸಿ ಬದುಕಿಗೆ ರೂಪು ನೀಡುತ್ತಿರುವ ಸಮಸ್ತ ಮಹಿಳೆಯರಿಗೆ ಅಂತಾರಾಷ್ಟ್ರೀಯ ಮಹಿಳಾ ದಿನದ ಶುಭಾಶಯ ತಿಳಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕಮಲಮ್ಮ ಇಂದಿನ ಅಭಿಮಾನ ನಿಜಕ್ಕೂ ನಮ್ಮ ಸೇವೆಗೆ ಸಿಕ್ಕ ಗೌರವ ಇಂತಹ ಪುರಸ್ಕಾರಗಳಿಂದ ಇನ್ನಷ್ಟು ಸೇವಾ ಮನೋಭಾವ ಎಚ್ಚಲಿದೆ ಎಂದರು. ಲಯನ್ಸ್ ಕ್ಲಬ್ ಸದಸ್ಯರಾದ ಮಾಲತಿ. ನಾಗಭೂಷಣ್ , ಪರಮೇಶ್ವರಪ್ಪ, ಉಪಾಧ್ಯಕ್ಷರಾದ ಶಿವಮೂರ್ತಿ, ಖಜಾಂಚಿ ಸುರೇಶ್, ವಿಶ್ವನಾಥ್ , ಮಲ್ಲಿಕಾರ್ಜುನ, ಗಿರೀಶ್ , ಚನ್ನಾಪುರ, ಸಿದ್ದೇಗೌಡ, ಮಂಜುನಾಥ್, ಇಂದ್ರಮ್ಮ ಸೇರಿದಂತೆ ಲಾನ್ಸ್ ಕ್ಲಬ್ ಸದಸ್ಯರು ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಡಾ.ಮಂಜುನಾಥ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.