ಸಾರಾಂಶ
ಬೆಂಗಳೂರಿನ ಕರಿಯಮ್ಮನ ಅಗ್ರಹಾರದ ಪಟೇಲ್ ಲಾ ಕಾಲೇಜ್ ಹಾಗೂ ಬಿಹಾರ ಅಕ್ವಿಟಾಸ್ ವಿಕ್ಟೋರಿಯಾ ಸಂಶೋಧನಾ ಕೇಂದ್ರದ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಮಹದೇವಪುರ
ಬೆಂಗಳೂರಿನ ಕರಿಯಮ್ಮನ ಅಗ್ರಹಾರದ ಪಟೇಲ್ ಲಾ ಕಾಲೇಜ್ ಹಾಗೂ ಬಿಹಾರ ಅಕ್ವಿಟಾಸ್ ವಿಕ್ಟೋರಿಯಾ ಸಂಶೋಧನಾ ಕೇಂದ್ರದ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಲಾ ಕಾಲೇಜ್ ಆವರಣದಲ್ಲಿ ಸ್ತ್ರೀಯರಿಗೂ ಸಮಾನ ಹಕ್ಕು ಎಂಬ ಪರಿಕಲ್ಪನೆಯಡಿ ಅಂತಾರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಂಡಿದ್ದು, ದೇಶದ ಹಲವು ಭಾಗಗಳ ಕಾನೂನು ವಿದ್ಯಾರ್ಥಿಗಳು ಭಾಗಿಯಾಗಿ ಆನ್ ಲೈನ್ ಹಾಗೂ ಆಪ್‌ಲೈನ್ ಮೂಲಕ 80ಕ್ಕೂ ಹೆಚ್ಚು ಸಂಶೋಧಕರು ಪ್ರಬಂಧ ಮಂಡಿಸಿದರು. ಮಹಿಳೆಯರಿಗೆ ಗೌರವ ಸಲ್ಲಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಈ ವೇಳೆ ಮಾರತಹಳ್ಳಿ ಎಸಿಪಿ ವಿಜಯಲಕ್ಷ್ಮಿ, ಕರ್ನಾಟಕ ರಾಜ್ಯ ಲಾ ವಿಶ್ವವಿದ್ಯಾಲಯದ ಹುಬ್ಬಳ್ಳಿಯ ಸಹಾಯಕ ಪ್ರಾಧ್ಯಾಪಕ ಡಾ.ರಂಗಸ್ವಾಮಿ, ಪಿಸಿಎ ಡೀನ್ ಕೆ.ಶರತ್ ಚಂದ್ರಕುಮಾರ್, ಪಟೇಲ್ ಕಾನೂನು ಕಾಲೇಜ್‌ನ ಪ್ರೊ.ಕೆ.ಮೈಯಿಲ್ ಸಾಮಿ ಸೇರಿದಂತೆ ಹಲವಾರು ಭಾಗಿಯಾಗಿದ್ದರು.