ಭಾರತಕ್ಕೆ ಮಹಿಳಾ ವಿಶ್ವಕಪ್: ನಾಗರಿಕ ಸಮಿತಿಯಿಂದ ವಿಜಯೋತ್ಸವ

| Published : Nov 05 2025, 03:15 AM IST

ಭಾರತಕ್ಕೆ ಮಹಿಳಾ ವಿಶ್ವಕಪ್: ನಾಗರಿಕ ಸಮಿತಿಯಿಂದ ವಿಜಯೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದ ಮಹಿಳಾ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಸೋಮವಾರ ನಗರದ ಸಿಟಿ ಬಸ್ ನಿಲ್ದಾಣದ ಅಶ್ವತ್ಥಮರದ ಬಳಿ ವಿಜಯೋತ್ಸವ ನಡೆಸಿತು.

ಕನ್ನಡಪ್ರಭ ವಾರ್ತೆ ಉಡುಪಿ

ಭಾರತದ ಮಹಿಳಾ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಸೋಮವಾರ ನಗರದ ಸಿಟಿ ಬಸ್ ನಿಲ್ದಾಣದ ಅಶ್ವತ್ಥಮರದ ಬಳಿ ವಿಜಯೋತ್ಸವ ನಡೆಸಿತು.

ಸಮಿತಿ ಸಂಚಾಲಕ ನಿತ್ಯಾನಂದ ಒಳಕಾಡು ಆಯೋಜಿಸಿದ್ದ, ಈ ಕಾರ್ಯಕ್ರಮದಲ್ಲಿ ಕ್ರಿಕೆಟ್ ಪ್ರೇಮಿಗಳು ಪಟಾಕಿ ಸಿಡಿಸಿ ಭಾರತೀಯ ತಂಡದ ಗೆಲುವನ್ನು ಸಂಭ್ರಮಿಸಿದರು.ಉಡುಪಿ ಪ್ರಸಿದ್ಧ ಸಿಹಿತಿಂಡಿ ತಯಾರಕರಾದಾ ಜಹಾಂಗೀರ್ ಭಟ್ಟ, ಸ್ಥಳದಲ್ಲಿಯೇ 2500ಕ್ಕೂ ಹೆಚ್ಚು ಬಿಸಿ ಜಿಲೇಬಿ ಮತ್ತು ಬರ್ಫಿಯನ್ನು ತಯಾರಿಸಿ ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಿ ಭಾರತದ ತಂಡದ ಗೆಲುವಿನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.ಕಾರ್ಯಕ್ರಮವನ್ನು ಎಸ್.ಎಂ.ಎಸ್. ಕಾಲೇಜಿನ ಕ್ರಿಕೆಟ್ ತಂಡದ ಆಟಗಾರ್ತಿ ತೃಪ್ತಿ ಉದ್ಘಾಟಿಸಿದರು. ಅತಿಥಿಗಳಾಗಿದ್ದ ನಗರಸಭಾ ಸದಸ್ಯೆ ಅಮೃತಾ ಕೃಷ್ಣಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಭಾರತದ ಮಹಿಳಾ ತಂಡದ ವಿಜಯ ಇಡೀ ದೇಶದ ಮಹಿಳೆಯರ ವಿಜಯ, ಇದು ಮಹಿಳೆ ಎಲ್ಲ ಕ್ಷೇತ್ರಗಳಲ್ಲಿಯೂ ಸಮಾನಳು ಎಂಬುದು ಸಂಕೇತ ಎಂದು ಸಂತಸ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಸೇವಾ ಸಮಿತಿಯ ಪ್ರಮುಖರಾದ ನಾಗೇಶ್ ಹೆಗ್ಡೆ, ಬಾಲ ಗಂಗಾಧರ್, ಯುವಜನ ಸೇವಾ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಷನ್ ಕುಮಾರ್ ಶೆಟ್ಟಿ, ಪತ್ರಕರ್ತೆಯರಾದ ಅನಿತಾ, ನಿಖಿತಾ ಮುಂತಾದವರಿದದ್ದರು.