ಸಾರಾಂಶ
ಕನ್ನಡಪ್ರಭ ವಾರ್ತೆ ಹೊನ್ನಾಳಿ/ ದಾವಣಗೆರೆ
ಕುಟುಂಬದಲ್ಲಿ ಹೆಣ್ಣು, ತಾಯಿಯಾಗಿ, ಮಡದಿಯಾಗಿ, ಸಹೋದರಿಯಾಗಿ, ಮಗಳಾಗಿ ಪಾತ್ರಗಳನ್ನ ನಿರ್ವಹಿಸಿ ಕುಟುಂಬದ ನಿರ್ವಹಣೆಯನ್ನು ಮಾಡುತ್ತಾಳೆ. ಹೀಗೆ ಹೆಣ್ಣು, ಕುಟುಂಬವಲ್ಲದೇ ಸಮಾಜದ ಕಣ್ಣಾಗಬೇಕು ಎಂದು ಸಾಸ್ವೆಹಳ್ಳಿ ಉಪ ತಹಸಿಲ್ದಾರ್ ಚಂದ್ರಪ್ಪ ತಿಳಿಸಿದರು.ಅವರು ಸಾಸ್ವೆಹಳ್ಳಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ವತಿಯಿಂದ ಶ್ರೀ ಆಂಜನೇಯ ಸಮುದಾಯ ಭವನದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರವನ್ನು ವಿತರಿಸಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮಹಿಳೆ ಯರು ಪುರಷರ ಸರಿಸಮಾನ ವಾಗಿ, ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದು, ಹೆಣ್ಣು ಸಾಹಿತ್ಯ, ರಾಜಕೀಯ, ವಿಜ್ಞಾನ ತಂತ್ರಜ್ಞಾನ, ಸರ್ಕಾರಿ ಉನ್ನತ ಉದ್ಯೋಗಗಳಲ್ಲಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿ ಉನ್ನತ ಸ್ಥಾನಗಳನ್ನು ಅಲಂಕರಿಸಿರುವ ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ ಎಂದರು.ಎಂ.ಸಿ.ಮೋಹನ್ ವಕೀಲರು ಮಾತನಾಡಿ, ಮಹಿಳೆಯರ ಸಾಧನೆಗಳನ್ನು ಸ್ಮರಿಸಲು, ಲಿಂಗ, ಪಕ್ಷಪಾತದ ವಿರುದ್ಧ ಜಾಗೃತಿ ಮೂಡಿಸಲು ಮತ್ತು ಸಮಾನತೆಗಾಗಿ ಮಹಿಳಾ ದಿನವನ್ನು ಆಚರಿಸಲಾಗುತ್ತದೆ ಎಂದರು. ಸಂಸ್ಥೆಯ ಅಧ್ಯಕ್ಷರಾದ ಬಾಬು ಸಂಗ್ರಾಮ್, ಸುರೇಖಾ, ಸಾಸ್ವೆಹಳ್ಳಿ ಪೋಲಿಸ್ ಠಾಣೆಯ ಎ.ಎಸ್.ಐ ಹರೀಶ್. ಸಂತೋಷ್ ಕುಮಾರ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಬೇರ ಆರ್.ವಹಿಸಿದ್ದರು. ಗ್ರಾಪಂ ಮಾಜಿ ಅಧ್ಯಕ್ಷೆ ಸವಿತಾ, ಜಯಮ್ಮ ದೇವಿರಮ್ಮ, ತಿಪ್ಪೋಜಿರಾವ್ ಹಾಗೂ ರಘು ಕುಳಗಟ್ಟೆ, ಪವರ್ ಪುಟ್ಟಸ್ವಾಮಿ, ಹೋಬಳಿಯ ಗ್ರಾಮಗಳಾದ ಹನಗವಾಡಿ, ಸಾಸ್ವೆಹಳ್ಳಿ, ಲಿಂಗಾಪುರ, ರಾಂಪುರ ಗ್ರಾಮಗಳ ಸುಮಾರು ನೂರಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದರು. ವಚನಾಮೃತ ಬಳಗದಿಂದ ಮಹಿಳಾ ದಿನ ಆಚರಣೆದಾವಣಗೆರೆ: ವಚನಾಮೃತ ಬಳಗದಿಂದ ಶುಕ್ರವಾರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಇಲ್ಲಿನ ವನಿತಾ ಸಮಾಜದ ಅಂಗ ಸಂಸ್ಥೆಯಾದ ಹಿರಿಯ ವನಿತೆಯರ ಆನಂದ ಧಾಮದಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷೆ ಸೌಮ್ಯ ಸತೀಶ್ ಮಾತನಾಡಿ, ವನಿತಾ ಸಮಾಜದ ಗೌರವಾಧ್ಯಕ್ಷರಾದ ಡಾ.ನಾಗಮ್ಮ ಕೇಶವಮೂರ್ತಿ ಮಹಿಳೆಯರಿಗೆ ನೀಡಿದ ಪ್ರಾಮುಖ್ಯತೆಯನ್ನು ನೆನೆದು ಅವರು ನಡೆದು ಬಂದ ಹಾದಿ ಮತ್ತು ಮಾರ್ಗದರ್ಶನವನ್ನು ನೆನಪಿಸಿದರು.ಈ ಸಂದರ್ಭದಲ್ಲಿ ಆನಂದ ಧಾಮದ ಉಪಾಧ್ಯಕ್ಷೆ ಸುಷ್ಮಾ, ಮಮತಾ ನಾಗರಾಜ, ರೇಖಾ ಬೇತೂರು, ಸರೋಜಮ್ಮ ಮಹಿಳಾ ದಿನಾಚರಣೆ ಕುರಿತು ಮಾತನಾಡಿ ದರು.
ಬಳಗದ ಮಧುಮತಿ ಗಿರೀಶ, ಕವಿತಾ ಕೊಟ್ರಬಸಪ್ಪ, ತಜುಜಾ ಬೆಳ್ಳುಳ್ಳಿ, ಜ್ಯೋತಿ ಬೆಳಗಾವಿ, ಸುಮ ಬೇತೂರು, ಶಿಲ್ಪ ಅಜ್ಜಂಪುರ, ರಾಜಶ್ರೀ, ಹಿರಿಯ ವನಿತೆಯರಾದ ಕಸ್ತೂರಮ್ಮ ಕಾಶಮ್ಮ, ನಿರ್ಮಲಮ್ಮ, ನಿರ್ಮಲ, ಲತಾ, ಸರಸ್ವತಮ್ಮ ಸರೋಜಮ್ಮ ಇತರರು ಇದ್ದರು. ಹಿರಿಯ ವನಿತೆಯರಿಗೆ ವಿವಿಧ ಕ್ರೀಡೆಗಳನ್ನು ಆಡಿಸಿ ಬಹುಮಾನ ವಿತರಿಸಲಾಯಿತು.