ಮಾನಸಿಕವಾಗಿ ಮಹಿಳೆಯರು ಸದೃಢರಾಗಬೇಕು

| Published : Apr 04 2024, 01:03 AM IST

ಮಾನಸಿಕವಾಗಿ ಮಹಿಳೆಯರು ಸದೃಢರಾಗಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಇಂದು ಮಹಿಳೆ ಸಾಮಾಜಿಕ, ಕ್ರೀಡೆ, ರಾಜಕೀಯ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ತನ್ನದೆ ಆದ ಛಾಪು ಮೂಡಿಸುತ್ತಿದ್ದಾಳೆ. ಸಮಾಜದ ಮುನ್ನೆಲೆಗೆ ಬಂದು ದೇಶದ ಪ್ರಗತಿಗೆ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಿದ್ದಾಳೆ.

ಕನ್ನಡಪ್ರಭ ವಾರ್ತೆ ಇಳಕಲ್ಲ

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಹಿಳೆಯರು ಮಾನಸಿಕವಾಗಿ ಸದೃಢರಾದಾಗ ಮಾತ್ರ ಪ್ರತಿಯೊಂದು ಕ್ಷೇತ್ರಗಳಲ್ಲು ಸಾಧನೆ ಮಾಡಲು ಸಾಧ್ಯ ಎಂದು ನಗರದ ಶ್ಯಾವಿ ಸಂಜೀವಿನ ಆಸ್ಪತ್ರೆ ವೈದ್ಯೆ ಡಾ.ಶೋಭಾ ವಿಠ್ಠಲ ಶ್ಯಾವಿ ಹೇಳಿದರು.

ನಗರದ ಬಸವನಗರ ಬಡಾವಣೆಯ ಅಯ್ಯಪ್ಪಸ್ವಾಮಿ ದೇವಸ್ಥಾನದ ಆವರಣದಲ್ಲಿ ಶ್ರೀದೇವಿ ಲಲಿತಾ ಮಹಿಳಾ ಬಳಗದಿಂದ ಹಮ್ಮಿಕೊಳ್ಳಲಾದ ವಿಶ್ವ ಮಹಿಳಾ ದಿನಾಚರಣೆ ಕಾರ‍್ಯಕ್ರಮದ ಮುಖ್ಯ ಅತಿಥಿಳಾಗಿ ಮಾತನಾಡಿದ ಅವರು, ಮಹಿಳೆಯರು ಹಿಂದಿನ ಹಾಗೇ ನಾಲ್ಕು ಗೋಡೆಗಳ ಮಧ್ಯ ಜೀವನ ಸಾಗಿಸುತ್ತಿಲ್ಲ. ಸಮಾಜದ ಮುನ್ನೆಲೆಗೆ ಬಂದು ಸಮಾಜಕ್ಕೆ ಸದುಪಯೋಗವಾಗುವಂತ ಕಾರ್ಯಗಳನ್ನು ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಹೇಳಿದರು.

ಇಂದುಮತಿ ಪುರಾಣಿಕ ಮಾತನಾಡಿ, ಇಂದು ಮಹಿಳೆ ಸಾಮಾಜಿಕ, ಕ್ರೀಡೆ, ರಾಜಕೀಯ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ತನ್ನದೆ ಆದ ಛಾಪು ಮೂಡಿಸುತ್ತಿದ್ದಾಳೆ. ಸಮಾಜದ ಮುನ್ನೆಲೆಗೆ ಬಂದು ದೇಶದ ಪ್ರಗತಿಗೆ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಿದ್ದಾಳೆ. ಇವತ್ತಿನ ಸಮಾಜದಲ್ಲಿ ನಮ್ಮ ಮಹಿಳೆಯರು ಮಾಡುತ್ತಿರುವ ಸಾಧನೆಗಳು ಪ್ರತ್ಯಕ್ಷ ಸಾಕ್ಷಿಯಾಗಿವೆ. ಸುಧಾ ಮೂರ್ತಿಯಂತ ಸರಳ ಸಜ್ಜನಿಕೆ ಸ್ವಭಾವದ ಮಹಿಳೆ ಸಂಸತ್ ಪ್ರವೇಶಿಸಿರುವುದು ಮಹಿಳೆಯರ ಸ್ಥಾನಮಾನಕ್ಕೆ ತಕ್ಕ ಗೌರವ ಎಂದು ಹೇಳಿದರು.ಈ ವೇಳೆ ಶ್ರೀದೇವಿ ಮಹಿಳಾ ಬಳಗದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕ್ರೀಡಾಕೂಟದಲ್ಲಿ ವಿಜೇತ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು. ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ.ಶೋಭಾ ಶ್ಯಾವಿ, ಸಾಹಿತಿ ಇಂದುಮತಿ ಪುರಾಣಿಕ, ಲೀಲಾವತಿ ಸಾಲಿಮಠ, ಶ್ರೀದೇವಿ ಹರ್ತಿ ಅವರನ್ನು ಸನ್ಮಾನಿಸಲಾಯಿತು.ಕಾರ‍್ಯಕ್ರಮದಲ್ಲಿ ಹಿರಿಯರಾದ ಗೌರಮ್ಮ ಬಿಜ್ಜಲ, ಸುಲೋಚನ ನೀಲಿ, ವಾಣಿ ಗಜೇಂದ್ರಗಡ, ಬೇಬಿ ರಾಠೋಡ, ದ್ರಾಕ್ಷಾಯಿಣಿ ರಾಂಪೂರ, ಅನಿತಾ ಹಾಲಾಪೂರ, ಪಾರ್ವತಿ ಹಿರೇಮಠ, ಪ್ರಭಾವತಿ ಬೀಳಗಿ, ಸೇರಿದಂತೆ ಇತರರು ಇದ್ದರು. ಸವಿತಾ ಗೌಡರ ಸ್ವಾಗತಿಸಿದರು. ಮಾಲತಿ ಜೋಗಿನ ಹಾಗೂ ಪವಿತ್ರ ಹಿರೇಮಠ ನಿರೂಪಿಸಿದರು. ಸುವರ್ಣ ಓತಗೇರಿ ವಂದಿಸಿದರು.