ಮಹಿಳೆಯರು ದಿನಬಳಕೆ ವಸ್ತುಗಳ ತಯಾರಿಯಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಸ್ವಾವಲಂಬಿಯಾಗಬೇಕು ಎಂದು ಪೊಮ್ಮಕ್ಕಳ ಕೂಟದ ಅಧ್ಯಕ್ಷ ಬಡ್ಡಿರ ನಳಿನಿ ಪೂವಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಮಹಿಳೆಯರು ದಿನಬಳಕೆ ವಸ್ತುಗಳ ತಯಾರಿಯಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಸ್ವಾವಲಂಬಿಯಾಗಬೇಕು ಎಂದು ಪೊಮ್ಮಕ್ಕಳ ಕೂಟದ ಅಧ್ಯಕ್ಷ ಬಡ್ಡಿರ ನಳಿನಿ ಪೂವಯ್ಯ ಹೇಳಿದರು.

ಸಮೀಪದ ಚೇರಂಬಾಣೆ ಬೆಂಗನಾಡು ಕೊಡವ ಸಮಾಜದಲ್ಲಿ ಮೊಮ್ಮಕ್ಕಳ ಕೂಟವು ಮಹಿಳೆಯರಿಗಾಗಿ ಆಯೋಜಿಸಿದ್ದ ಗೃಹ ಬಳಕೆ ವಸ್ತುಗಳ ತಯಾರಿ ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ವಿವಿಧ ಸಂಸ್ಥೆಗಳು ಮಹಿಳೆಯರ ಅಭಿವೃದ್ಧಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ. ಮಹಿಳೆಯರು ಆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರ

ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದರು.

ಕೊಡವ ಸಮಾಜದ ಸಭಾಂಗಣದಲ್ಲಿ ಮಹಿಳೆಯರಿಗಾಗಿ ಆಯೋಜಿಸಲಾಗಿದ್ದ ಪ್ರಾತ್ಯಕ್ಷಿಕೆಯಲ್ಲಿ ಬಾಳೆದಿಂಡು ನಿಂಬೆಹಣ್ಣು ಕಾಳುಮೆಣಸು ಶುಂಠಿ, ಕ್ಯಾರೆಟ್ ಮಾವಿನ

ಮಿಡಿ ಹಲಸಿನ ಮಿಡಿ ಇತ್ಯಾದಿಗಳಿಂದ ವರ್ಷಾನುಗಟ್ಟಲೆ ಸಂರಕ್ಷಿಸಿ ಇಡಬಹುದಾದ ವಿವಿಧ ಬಗೆಯ ಜಾಮ್ ತಯಾರಿಸುವ ಪ್ರಾತ್ಯಕ್ಷಿಕೆಯನ್ನು ನಡೆಸಲಾಯಿತು.

ಪಟ್ರ ಪಂಡ ಡಿಂಪಲ್‌ ಅಯ್ಯಪ್ಪ ಕಾರ್ಯಾಗಾರದ ಪ್ರಾತ್ಯಕ್ಷಿಕೆ ನೀಡಿದರು. ವೈವಿಧ್ಯಮಯ ತಿನಿಸುಗಳ ತಯಾರಿಕೆಯ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಾಗಾರದಲ್ಲಿ ಕುಂಟೆಟ್ಟಿರ ಶಿಲ್ಪ ಪ್ರಾರ್ಥಿಸಿದರು. ಕಾರ್ಯದರ್ಶಿ ಪಟ್ಟಮಾಡ ಜಯಂತಿ ಚಂಗಪ್ಪ ಸ್ವಾಗತಿಸಿದರು. ತೇಲಪಂಡ ಸುನಿತಾ ವಂದಿಸಿದರು.

ಕಾರ್ಯಕ್ರಮದಲ್ಲಿ ಮೊಮ್ಮಕ್ಕಳ ಕೂಟದ ನಿರ್ದೇಶಕರು ಸದಸ್ಯರು ಪಾಲ್ಗೊಂಡಿದ್ದರು.