ಸ್ತ್ರೀಯರು ಆರೋಗ್ಯದತ್ತ ಗಮನಹರಿಸಿ: ಡಾ. ಮಂಜುಶ್ರೀ ಪೈ

| Published : Apr 22 2025, 01:51 AM IST

ಸ್ತ್ರೀಯರು ಆರೋಗ್ಯದತ್ತ ಗಮನಹರಿಸಿ: ಡಾ. ಮಂಜುಶ್ರೀ ಪೈ
Share this Article
  • FB
  • TW
  • Linkdin
  • Email

ಸಾರಾಂಶ

ಪಿಸಿಒಎಸ್‌ ಸಮಸ್ಯೆಗಳ ಬಗ್ಗೆ ಮಹಿಳೆಯರು ಹೆಚ್ಚಿನ ಗಮನಹರಿಸಬೇಕಿದೆ. ಇತ್ತೀಚೆಗೆ ಈ ರೀತಿಯ ಪ್ರಕರಣಗಳು ಆಸ್ಪತ್ರೆಗಳಲ್ಲಿ ಹೆಚ್ಚುತ್ತಿವೆ.

ಕನಕಪುರ: ಪಿಸಿಒಎಸ್‌ ಸಮಸ್ಯೆಗಳ ಬಗ್ಗೆ ಮಹಿಳೆಯರು ಹೆಚ್ಚಿನ ಗಮನಹರಿಸಬೇಕಿದೆ. ಇತ್ತೀಚೆಗೆ ಈ ರೀತಿಯ ಪ್ರಕರಣಗಳು ಆಸ್ಪತ್ರೆಗಳಲ್ಲಿ ಹೆಚ್ಚುತ್ತಿವೆ. ಹಾಗಾಗಿ ಪ್ರತಿಯೊಬ್ಬರೂ ಜಾಗೃತರಾಗಬೇಕಿದೆ ಎಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ. ಮಂಜುಶ್ರೀ ಪೈ ಹೇಳಿದರು. ನಗರದ ರೂರಲ್ ಪದವಿ ಕಾಲೇಜಿನಲ್ಲಿ ಐಕ್ಯೂಎಸಿ, ಮಹಿಳಾ ಸಮಿತಿ ಮತ್ತು ಎನ್‌ಎಸ್‌ಎಸ್ ಹಾಗೂ ಲಿಯೋ, ಲಯನ್ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪಿಸಿಒಎಸ್ ಮತ್ತು ಹೆಣ್ಣಿನ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಋತುಚಕ್ರದ ಸಂದರ್ಭದಲ್ಲಿ ಸಮಸ್ಯೆಗಳು, ಗರ್ಭಕೊರಳಿನ ಕ್ಯಾನ್ಸರ್‌ಗಳು, ಹೃದಯ ಸಂಬಂಧಿ ಕಾಯಿಲೆಗಳು ಕೂಡ ಹರಡುತ್ತವೆ. ಇದರಿಂದ ಗರ್ಭಧಾರಣೆಯ ಸಮಸ್ಯೆಗಳು ಮತ್ತು ಥೈರಾಯ್ಡ್ ಸಮಸ್ಯೆಗಳು ಉಲ್ಭಣವಾಗುತ್ತವೆ ಎಂದರು. ಸ್ತ್ರೀಯರು ಆದಷ್ಟು ಮಟ್ಟಿಗೆ ಜಂಕ್ ಫುಡ್ ನಿರಾಕರಿಸಿ ಸುರಕ್ಷಿತ ಆಹಾರ ಸೇವಿಸುವುದರ ಬಗ್ಗೆ ಗಮನ ಹರಿಸಬೇಕಿದೆ. ಕೂದಲು ಉದುರುವಿಕೆ, ಹೊಟ್ಟೆನೋವು, ತೂಕದಲ್ಲಿ ಭಾರಿ ಬದಲಾವಣೆ, ತಲೆ ಸುತ್ತುವುದು, ನಿಶ್ಶಕ್ತಿ, ರಕ್ತಹೀನತೆಯಂತಹ ಲಕ್ಷಣಗಳನ್ನು ಕಾಣಬಹುದು. ಅಸಮರ್ಪಕ ಮುಟ್ಟು ಅನುಭವಿಸುವ ಸ್ತ್ರೀಯರು ಒಮ್ಮೆ ಪರೀಕ್ಷೆಗೆ ಒಳಪಡುವುದು ಉತ್ತಮ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಎಂ ಟಿ ಬಾಲಕೃಷ್ಣ, ಉಪ ಪ್ರಾಂಶುಪಾಲ ದೇವರಾಜು, ಲಯನ್ ಸಂಸ್ಥೆಯ ಅಧ್ಯಕ್ಷ ಎ ಟಿ ರವಿ, ಲಿಯೋ ಸಂಸ್ಥೆಯ ಅಧ್ಯಕ್ಷ ಜೀವನ್ ಮತ್ತು ಕಾಲೇಜಿನ ಮಹಿಳಾ ಸಮಿತಿಯ ಸಂಚಾಲಕಿ ವಾಣಿ, ಎ.ಪಿ. ಪ್ರಕಾಶ್, ಡಾ. ಹನುಮಂತರಾಜು ಮೋಹನ್ ಕುಮಾರ್ ಹಾಗೂ ವಿದ್ಯಾರ್ಥಿನಿಯರು ಹಾಜರಿದ್ದರು.