ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಮಹಿಳೆಗೆ ಸಮಾನತೆ, ಪುರಸ್ಕಾರ, ಎಲ್ಲೆಡೆ ಗೌರವ ಸಲ್ಲಬೇಕೆಂಬ ಉದ್ದೇಶದಿಂದ ವಿಶ್ವ ಮಹಿಳಾ ದಿನಾಚರಣೆ ಆರಂಭ ವಾಯಿತು ಎಂದು ಕರ್ನಾಟಕ ಮಹಿಳಾ ಸಹಕಾರ ಬ್ಯಾಂಕ್ ಅಧ್ಯಕ್ಷೆ ಕುಮಾರಿ ಬಿ.ಸಿ ಗೀತಾ ಹೇಳಿದರು.ಜಯನಗರ ಬಲಮುರಿ ಗಣಪತಿ ದೇವಾಲಯದ ಆವರಣದಲ್ಲಿ ಸ್ನೇಹಮಿಲನ ಮಹಿಳಾ ಸಂಘ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಮತ್ತು 7ನೇ ವರ್ಷದ ವಾರ್ಷಿಕೋತ್ಸವ ಹಾಗೂ ಯುಗಾದಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ವಿಶ್ವ ಮಹಿಳಾ ದಿನಾಚರಣೆಯನ್ನು ಕೇವಲ ಮಾ.8 ಕ್ಕೆ ಸೀಮಿತಗೊಳಿಸದೇ ಮಹಿಳೆಯರಿಗೆ ಸಂಬಂಧಿಸಿದ ಕಾರ್ಯಕ್ರಮಗಳು ವರ್ಷವಿಡೀ ನಡೆಯಬೇಕು. ಜತೆಗೆ ಮಹಿಳೆಗೆ ಸೂಕ್ತ ಸ್ಥಾನಮಾನ, ಗೌರವ ಲಭಿಸಬೇಕು. ಮಹಿಳೆಯರಲ್ಲಿರುವ ಸುಪ್ತ ಪ್ರತಿಭೆ ಗಳು ಹೊರಬರಲು ಇಂತಹ ವೇದಿಕೆಗಳು ಸಹಕಾರಿಯಾಗಲಿ ಎಂಬ ಆಶಯ ವ್ಯಕ್ತಪಡಿಸಿದರು.ಯುಗಾದಿ ಹಬ್ಬದಂದು ಬೇವು-ಬೆಲ್ಲ ತಿಂದು ಜೀವನದಲ್ಲಿ ಕಷ್ಟ-ಸುಖ ಸಮಾನವಾಗಿ ಹಂಚಿಕೊಳ್ಳಬೇಕೆನ್ನುವುದು ಇದರ ಉದ್ದೇಶ. ಮಹಿಳೆಯರಿಗೆ ವರ್ಷವಿಡೀ ಕಷ್ಟ-ಸುಖಗಳನ್ನೆದುರಿಸುವ ಶಕ್ತಿ ಕೊಡಲಿ ಎಂದು ಹಾರೈಸಿದರು.ಮಹಿಳೆ ಅನೇಕ ರೀತಿ ಹೋರಾಟಗಳ ಮೂಲಕ ಸಮಾಜದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾಳೆ. ಸಮಾನತೆ ಪಡೆಯಲು ಸತತ ಪ್ರಯತ್ನದ ಫಲವಾಗಿ ಇಂದು ಒಂದು ಹಂತ ತಲುಪಿದ್ದೇವೆ ಎಂದು ಶ್ಲಾಘಿಸಿದರು.
ಈ ವೇಳೆ ನಗರಸಭಾಧ್ಯಕ್ಷೆ ಶೀಲಾ ದಿನೇಶ್, ನ್ಯಾಯಾಧೀಶರಾಗಿ ಆಯ್ಕೆಯಾದ ಎಚ್.ಇ.ಶ್ವೇತಾ ಅವರನ್ನು ಅಭಿನಂದಿಸಲಾಯಿತು.ಸ್ನೇಹಮಿಲನ ಮಹಿಳಾ ಸಂಘದ ಅಧ್ಯಕ್ಷೆ ಮೋಹನ್‌ಕುಮಾರಿ, ಉಪಾಧ್ಯಕ್ಷೆ ವಿನೋದ ದೊಡ್ಡೇಗೌಡ, ಸಹ ಕಾರ್ಯದರ್ಶಿ ಸುಧಾಜುಂಜೇಗೌಡ, ಖಜಾಂಚಿ ಸವಿತಾಈಶ್ವರ್, ಸಂಘಟನಾಗಾತಿ ಕಾಂತಮಣಿ, ಉಪಸ್ಥಿತರಿದ್ದರು.