ಸಾರಾಂಶ
ಜಿಲ್ಲಾಡಳಿತದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಕನ್ನಡಪ್ರಭ ವಾರ್ತೆ ಹಾಸನ
ಮಹಿಳೆಯರು ಎಲ್ಲ ರಂಗದಲ್ಲೂ ಭಾಷಾವಾರು, ಸಾಂಸ್ಕ್ರತಿಕ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರ ಸೇರಿದಂತೆ ಎಲ್ಲೆಡೆ ಸಾಧನೆ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿ ಸಿ ಸತ್ಯಭಾಮ ತಿಳಿಸಿದ್ದಾರೆ.ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಬುಧವಾರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಸನ ಸಹಯೋಗದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಹಿಳೆಯರು ರಾಜಕೀಯ, ಸಾಮಾನ್ಯ, ಆರ್ಥಿಕ ಧ್ವನಿಯಾಗಿದ್ದಾರೆ. ಅವರ ನೋವುಗಳನ್ನು ಹೋಗಲಾಡಿಸುವ ಸಂಬಂಧ ಮಹಿಳಾ ದಿನಾಚರಣೆ ಆಚರಿಸಲಾಗುತ್ತದೆ. ಇನ್‌ಸ್ಪೈರ್ ಇನ್‌ಕ್ಲೂಷನ್ ಥೀಮ್ ಪ್ರೇರಣೆಯಾಗಿ ಎಲ್ಲರಿಗೂ ತಿಳಿಸುವಂತಹ ಧ್ವನಿ ಆಗಬೇಕು.ಆರ್ಥಿಕ ಸ್ವಾವಲಂಬನರಾಗಿ ಮಾಡಲು ಆರ್ಥಿಕ, ಸಾಮಾಜಿಕ ಎಲ್ಲಾ ರೀತಿಯಲ್ಲಿಯೂ ಸ್ವಾವಲಂಬಿಯಾಗಿ ಇರಬೇಕು ಎಂದು ಹೇಳಿದರು.
ಹೆಣ್ಣು ಮಕ್ಕಳಿಗೆ ಸಂವಿಧಾನದಲ್ಲಿ ಎಲ್ಲಾ ರೀತಿಯ ಸಮಾನತೆ ಹಕ್ಕುಗಳನ್ನು ನೀಡಿದ್ದಾರೆ. ಮಹಿಳೆಯರಿಗೆ ಸಮಸ್ಯೆಗಳು ಇದ್ದರೂ ಅವುಗಳನ್ನು ಹೋಗಲಾಡಿಸಿ ಬೆಳಕನ್ನು ಪಡೆದುಕೊಳ್ಳುವ ಎಲ್ಲಾ ಸಮರ್ಥ್ಯ ಹೊಂದುಕೊಳ್ಳಬೇಕು. ಮಹಿಳೆಯರು ಎಲ್ಲಾ ರಂಗದಲ್ಲೂ ಕರ್ತವ್ಯ ಪ್ರಗತಿ ಪಡೆದಿದ್ದಾರೆ ಎಂದು ತಿಳಿಸಿದರು.ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ ಕೆ ರವಿಕಾಂತ್ ಮಾತನಾಡಿ, ಮಹಿಳೆಯರಿಗೆ ಸಾಕಷ್ಟು ಕಾನೂನುಗಳು ಇವೆ. ಎಲ್ಲಾ ಸಂರಕ್ಷಣೆ ಮಾಡುವುದಕ್ಕೆ ಮಹಿಳಾ ಭದ್ರತೆಗಾಗಿ ಕಾನೂನುಗಳನ್ನು ದುರುಪಯೋಗ ಮಾಡಿಕೊಳ್ಳಬಾರದು. ಕಾನೂನನ್ನು ಸರಿಯಾಗಿ ತಿಳಿಯದೆ ಬಳಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಸಮರ್ಪಕವಾಗಿ ಕಾನೂನನ್ನು ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜೇತಾ ಮಾತನಾಡಿ, ಹೆಣ್ಣು ಮಕ್ಕಳು ಒಂದು ವ್ಯಾಪ್ತಿಗೆ ಸೀಮಿತವಾಗಿರಬಾರದು, ಒಬ್ಬರ ಮೇಲೆ ಸೀಮಿತವಾಗಬಾರದು, ಹೊಸದಾದ ರೀತಿಯಲ್ಲಿ ಹೊಸ ಕೆಲಸ ಕಾರ್ಯಗಳನ್ನು ನಡೆಸಬೇಕು ಎಂದು ತಿಳಿಸಿದರು.ಅಪರ ಜಿಲ್ಲಾಧಿಕಾರಿ ಶಾಂತಲಾ ಕೆ.ಟಿ ಮಾತನಾಡಿ, ಪುರುಷರು, ಮಹಿಳೆಯರು ಎಲ್ಲರೂ ಸಮಾನವಾಗಿ ಯಾವುದೇ ಕೆಲಸ ಮಾಡುವಂತ ಸಾಧನೆ ಮಾಡಬೇಕು. ಗಂಡು ಮತ್ತು ಹೆಣ್ಣು ಮಕ್ಕಳಿಗೆ ಆಕಾಶಕ್ಕೆ ಏಣಿ ಹಾಕುವುದನ್ನು ಸಹ ತಿಳಿಸಬೇಕು. ಇನ್‌ಸ್ಪೈರ್ ಇನ್‌ಕ್ಲೂಷನ್ ಥೀಮ್ ಇದರ ಮಹತ್ವ ತಿಳಿಯಬೇಕು ಎಂದು ತಿಳಿಸಿದರು.
ಮಹಿಳಾ ಚಿಂತಕಿ ರೂಪ ಹಾಸನ್, ಪ್ರಸ್ತುತ ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಬಗ್ಗೆ ತಿಳಿಸಿದರು ಮಹಿಳೆಯರು ಹೊರಗೆ ಬಂದು ಉತ್ತಮವಾದ ಸ್ಥಾನ ಹೊಂದಿಕೊಂಡಿದ್ದಾರೆ. ಸ್ವ ಸಹಾಯ ಗುಂಪುಗಳನ್ನು ಉತ್ತೇಜಿಸಲು ಸಂಸ್ಥೆ ಯಾವುದೇ ಸಕ್ರಿಯ ಹಸ್ತಕ್ಷೇಪವಿಲ್ಲದೆಯೇ ಬ್ಯಾಂಕುಗಳು ಹಣವನ್ನು ಒದಗಿಸುತ್ತವೆ. ಬಡ ಕುಟುಂಬ ಮಹಿಳೆಯರಿಗೆ ಮೈಕ್ರೋ ಫೈನಾನ್ಸಿಂಗ್ ಗ್ರಾಮೀಣ ಕುಟುಂಬಗಳ ಲಾಭದಾಯಕತೆಯನ್ನು ಹೆಚ್ಚಿಸುವ ದುರ್ಬಲ ಬಂಡವಾಳ ಕಡಿಮೆ ಉತ್ಪಾದನೆ, ಕಡಿಮೆ ಆದಾಯ ಮತ್ತು ಉಳಿತಾಯ ಮತ್ತು ಬಡತನದಲ್ಲಿ ಸಿಲುಕಿರುವ ಜನರು ಸಾಮಾಜಿಕ ಆರ್ಥಿಕ ಅಂಶಗಳಲ್ಲಿನ ಹಿಂದುಳಿದಿದ್ದಾರೆ. ಮಹಿಳೆಯರು ಯಾವ ಸಮಸ್ಯೆಗಳಿಗೆ ಒಳಗಾಗದಂತೆ ಅವುಗಳನ್ನು ಸರಿದೂಗಬೇಕು ಎಂದು ತಿಳಿಸಿದರು.ಮಹಿಳಾ ಸಾಹಿತಿಗಳು ಹಾಗೂ ವಕೀಲರಾದ ಭಾನು ಮುಷ್ತಾಕ್ ಅವರು ಮಹಿಳಾ ದಿನಾಚರಣೆ ಮಹತ್ವವನ್ನು ತಿಳಿಸಿದರು. ಮಹಿಳೆಯರು
ಮುಖ್ಯ ಕಾರ್ಯನಿರ್ವಾಹಕಧಿಕಾರಿ ಬಿ.ಆರ್ ಪೂರ್ಣಿಮಾ, ಜಂಟಿ ನಿರ್ದೇಶಕಿ ರಾಜಾಸುಲೋಚನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಪ್ರದೀಪ್ ಸಿಂಹ, ಜಿಲ್ಲಾ ಅಂಕಿ ಸಂಖ್ಯೆ ಅಧಿಕಾರಿ ಸಜಿಯಾ, ಖಜಾನೆ ಇಲಾಖೆಯ ಉಪನಿರ್ದೇಶಕಿ ಕವಿತಾ, ಜಿಲ್ಲಾ ವಿಶೇಷ ವಿಕಲಚೇತನ ಅಧಿಕಾರಿ ಅನುಪಮ, ಜಿಲ್ಲಾ ಕಾರ್ಮಿಕ ಅಧಿಕಾರಿ ಯಮುನಾ ಇದ್ದರು. ಹಾಸನ ಜಿಲ್ಲಾಡಳಿತದಿಂದ ಬುಧವಾರ ಕಲಾಭವನದಲ್ಲಿ ಏರ್ಪಡಿಸಲಾಗಿದ್ದ ಮಹಿಳಾ ದಿನಾಚರಣೆಯನ್ನು ಡಿಸಿ, ಎಸ್ಪಿ, ಸಿಇಒ ಸೇರಿದಂತೆ ವಿವಿಧ ಮಹಿಳಾ ಮುಖಂಡರು ಉದ್ಘಾಟಿಸಿದರು.