ಸಾರಾಂಶ
ಕಟ್ಟಡದಲ್ಲಿನ ತರಗತಿಗಳು ಮಳೆ ನೀರು ಸೋರಿಕೆಯಿಂದ ಅಪಾಯ ಸ್ಥಿತಿಯಲ್ಲಿ ಇರುವುದನ್ನು ಮನಗಂಡು ಜಿಲ್ಲಾಧಿಕಾರಿ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದರು. ಭೇಟಿ ನೀಡಿದ ದಿನದಂದೇ ಡಯಟ್ ಕಟ್ಟಡ, ಟಿಸಿಡಬ್ಲ್ಯೂ ಕಾಲೇಜ ಕಟ್ಟಡ ಮತ್ತು ಕವಿವಿ ಯುಪಿಎಸ್ ಶಾಲಾ ಕಟ್ಟಡಗಳನ್ನು ಪರಿಶೀಲಿಸಿದ್ದರು.
ಧಾರವಾಡ:
ಮಳೆ ನೀರು ಸೋರಿಕೆಯ ಸಮಸ್ಯೆಯಿಂದ ಬಳಲುತ್ತಿದ್ದ ಇಲ್ಲಿಯ ಆರ್.ಎನ್. ಶೆಟ್ಟಿ ಕ್ರೀಡಾಂಗಣದ ಬಳಿ ಇದ್ದ ಸರ್ಕಾರಿ ಮಹಿಳಾ ಕಾಲೇಜನ್ನು ಜಿಲ್ಲಾಧಿಕಾರಿ ಭೇಟಿ ನೀಡಿದ ಮರು ದಿನವೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಇಷ್ಟೊಂದು ಶೀಘ್ರವಾಗಿ ಕಾಲೇಜು ಸ್ಥಳಾಂತರದಿಂದ ವಿದ್ಯಾರ್ಥಿನಿಯರು ಜಿಲ್ಲಾಧಿಕಾರಿ ದಿವ್ಯಪ್ರಭು ಅವರಿಗೆ ಗೌರವಾರ್ಪಣೆ ಮಾಡಿದರು.ಕಟ್ಟಡದಲ್ಲಿನ ತರಗತಿಗಳು ಮಳೆ ನೀರು ಸೋರಿಕೆಯಿಂದ ಅಪಾಯ ಸ್ಥಿತಿಯಲ್ಲಿ ಇರುವುದನ್ನು ಮನಗಂಡು ಜಿಲ್ಲಾಧಿಕಾರಿ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದರು. ಭೇಟಿ ನೀಡಿದ ದಿನದಂದೇ ಡಯಟ್ ಕಟ್ಟಡ, ಟಿಸಿಡಬ್ಲ್ಯೂ ಕಾಲೇಜ ಕಟ್ಟಡ ಮತ್ತು ಕವಿವಿ ಯುಪಿಎಸ್ ಶಾಲಾ ಕಟ್ಟಡಗಳನ್ನು ಪರಿಶೀಲಿಸಿದರು. ನಂತರ ಕವಿವಿ ಯುಪಿ ಶಾಲಾ ಕಟ್ಟಡಕ್ಕೆ ಹಾಗೂ ಡಯಟ್ ಆವರಣದ ಕಟ್ಟಡಗಳಿಗೆ ಹಾಗೂ ಆಲೂರು ಸರ್ಕಲದಲ್ಲಿರುವ ಟಿಸಿಡಬ್ಲ್ಯೂ ಕಟ್ಟಡಗಳಿಗೆ ಭೇಟಿ ನೀಡಿ, ಅಲ್ಲಿನ ಮುಖ್ಯಸ್ಥರೊಂದಿಗೆ ಚರ್ಚಿಸಿ, ಕೊಠಡಿ ಲಭ್ಯತೆ ಬಗ್ಗೆ ಮಾಹಿತಿ ಪಡೆದರು.
ನಂತರ ಕವಿವಿ ಕುಲಪತಿ, ಕುಲಸಚಿವರೊಂದಿಗೆ ಚರ್ಚಿಸಿ, ಯುಪಿಎಸ್ ಶಾಲೆ ಆವರಣದ ಕೊಠಡಿಗಳಿಗೆ ಸ್ಥಳಾಂತರ ಮಾಡಲು ನಿರ್ಧರಿಸಲಾಯಿತು. ಅದರಂತೆ ಆರ್.ಎನ್. ಶೆಟ್ಟಿ ಕ್ರೀಡಾಂಗಣದ ಹತ್ತಿರದ ಕಟ್ಟಡದಲ್ಲಿ ಸೋರಿಕೆಯಿಂದ ಸಮಸ್ಯೆ ಆಗುತ್ತಿದ್ದ ಎಲ್ಲ ಬೋಧನಾ ವರ್ಗಗಳನ್ನು ಇಂದು ಯುಪಿಎಸ್ ಶಾಲೆ ಕಟ್ಟಡದಲ್ಲಿ ಮಂಗಳವಾರದಿಂದ ಆರಂಭಿಸಲಾಯಿತು.ವಿದ್ಯಾರ್ಥಿಗಳ ಆಹ್ವಾನದ ಮೇರೆಗೆ ಜಿಲ್ಲಾಧಿಕಾರಿಗಳು ಮಂಗಳವಾರ ಬೆಳಗ್ಗೆ ಭೇಟಿ ನೀಡಿ ಉತ್ತಮವಾಗಿ ಓದಲು ತಿಳಿಸಿದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿ, ವಿದ್ಯಾರ್ಥಿಗಳು ತಮ್ಮ ಪ್ರತಿಭೆಗೆ ತಕ್ಕಂತೆ ಶ್ರಮ ಹಾಕಬೇಕು. ಓದುವ ಸ್ಥಳದಲ್ಲಿ ಬೆಳಕು, ಗಾಳಿ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಕಲ್ಪಿಸಲು ಕ್ರಮವಹಿಸಲಾಗುತ್ತಿದೆ ಎಂದರು.ಕಾಲೇಜು ಪ್ರಾಚಾರ್ಯರಾದ ಡಾ. ಎಸ್.ಎಸ್. ಅಂಗಡಿ, ಡಾ. ಸರಸ್ವತಿ ಹಾಗೂ ಉಪನ್ಯಾಸಕಿಯರು ಇದ್ದರು.