ಯಾವುದೇ ಪಕ್ಷದ ಪರವಾಗಿರದೆ ಪ್ರಮಾಣಿಕವಾಗಿ ಕೆಲಸ ಮಾಡಿ: ಶಿವಮೂರ್ತಿ

| Published : Mar 18 2024, 01:50 AM IST

ಯಾವುದೇ ಪಕ್ಷದ ಪರವಾಗಿರದೆ ಪ್ರಮಾಣಿಕವಾಗಿ ಕೆಲಸ ಮಾಡಿ: ಶಿವಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಚುನಾವಣೆಗೆ ನೇಮಕಗೊಂಡ ಸಿಬ್ಬಂದಿ ಪ್ರಾಮಣಿಕವಾಗಿ ಕರ್ತವ್ಯ ನಿರ್ವಹಿಸಿ, ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡಿ ಕೆಟ್ಟ ಹೆಸರು ತಂದುಕೊಳ್ಳದಿರಿ, ಅಲ್ಲದೆ ಜವಾಬ್ದಾರಿಯುತವಾಗಿ ನಿಮ್ಮ ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಿ ಎಂದು ಉಪವಿಭಾಗಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಶಿವಮೂರ್ತಿ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಚುನಾವಣೆಗೆ ನೇಮಕಗೊಂಡ ಸಿಬ್ಬಂದಿ ಪ್ರಾಮಣಿಕವಾಗಿ ಕರ್ತವ್ಯ ನಿರ್ವಹಿಸಿ, ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡಿ ಕೆಟ್ಟ ಹೆಸರು ತಂದುಕೊಳ್ಳದಿರಿ, ಅಲ್ಲದೆ ಜವಾಬ್ದಾರಿಯುತವಾಗಿ ನಿಮ್ಮ ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಿ ಎಂದು ಉಪವಿಭಾಗಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಶಿವಮೂರ್ತಿ ಹೇಳಿದರು.

ತಾಪಂ ಸಭಾಂಗಣದಲ್ಲಿ ಕರೆಯಲಾಗಿದ್ದ ಲೋಕಸಭಾ ಚುನಾವಣಾ ಸಂಬಂಧ ಕಂದಾಯ ಇಲಾಖಾ ಸಿಬ್ಬಂದಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೆ ಪಕ್ಷದ ಪರವಾಗಿ ಚುನಾವಣೆಗೆ ನೇಮಕಗೊಂಡವರು ಕೆಲಸ ನಿರ್ವಹಿಸಕೂಡದು, ನಿಷ್ಪಕ್ಷಪಾತವಾಗಿ ಚುನಾವಣಾ ಸಿಬ್ಬಂದಿ ಕರ್ತವ್ಯ ನಿರ್ವಹಿಸುವ ಮೂಲಕ ಲೋಕಸಭಾ ಚುನಾವಣೆ ಯಶಸ್ವಿಗೆ ಸಹಕರಿಸಿ ಎಂದರು.

ಜನರೇ ಸಿಸಿಟಿವಿ ಕ್ಯಾಮರಾದಂತೆ ಹಾಗಾಗಿ ಜನರ ಕಂದಾಯ ಇಲಾಖೆಯ ಕೆಲಸವನ್ನು ಸೂಕ್ಷ್ಮವಾಗಿ ಗಮನಿಸುತ್ತಲೆ ಇರುತ್ತಾರೆ ಎಂಬುದನ್ನ ಎಲ್ಲರೂ ಅರಿಯಬೇಕಿದೆ. ಹಾಗಾಗಿ ಜನರೆಂಬ ಸಿಸಿಟಿವಿ ಕ್ಯಾಮರಾ ಕಣ್ಣಿಗೆ ಬೀಳದೆ, ಪ್ರಮಾಣಿಕವಾಗಿ ಕೆಲಸ ಮಾಡಿ ಎಂದು ಸೂಚಿಸಿದರು.

ಕಟ್ಟುನಿಟ್ಟಾಗಿ ಚುನಾವಣಾ ಕತ೯ವ್ಯ ನಿರ್ವಹಿಸಿ, ಆಗಿಂದಾಗ್ಗೆ ಚೆಕ್ ಪೋಸ್ಟ್ ಗೆ ಭೇಟಿ ನೀಡಿ ಪರಿಶೀಲಿಸಬೇಕು, ನಮ್ಮ ಕೆಲಸವನ್ನು ಮಾಧ್ಯಮದವರು ಗಮನಿಸುತ್ತಿದ್ದಾರೆ ಎಂಬ ಸತ್ಯ ಅರಿತು ಬದ್ಧತೆಯಿಂದ ಕರ್ತವ್ಯ ನಿರ್ವಹಿಸಿ, ಕರ್ತವ್ಯ ನಿರತ ಸಿಬ್ಬಂದಿ ಮೇಲೆ ದೂರುಗಳು ಸರ್ವೆ ಸಾಮಾನ್ಯ, ಆದರೆ ತಪ್ಪು ಮಾಡಿ ಸಿಬ್ಬಂದಿ ಸಿಕ್ಕಿ ಬಿದ್ದರೆ ನಾವಂತೂ ರಕ್ಷಣೆಗೆ ನಿಲ್ಲಲು ಸಾಧ್ಯವಿಲ್ಲ, ಈ ಹಿನ್ನೆಲೆ ಯಾವುದೇ ಪಕ್ಷದ ಪರ ಕೆಲಸ ಮಾಡದೆ ಪ್ರಮಾಣಿಕತೆಯಿಂದ ಕೆಲಸ ಮಾಡಿ ಎಂದರು.

ಪ್ರತಿ ಚುನಾವಣೆಯೂ ನಮಗೆ ಪಾಠವಿದ್ದಂತೆ:

ಪ್ರತಿ ಚುನಾವಣೆಯೂ ನಮಗೆ ಹೊಸದೇ ಅದು ನಮಗೆ ಪಾಠವಿದ್ದಂತೆ ಎಂಬ ವಾಸ್ತವ ಅರಿತು ಕಟ್ಟುನಿಟ್ಟಾಗಿ ಕೆಲಸ ಮಾಡಿ, ನೀವೆಲ್ಲರೂ ಜಾಗೃತರಾಗಿ ಮೈಮರೆಯದೆ ಕೆಲಸ ಮಾಡಿ, 24 ಗಂಟೆಯೂ ಕರ್ತವ್ಯ ನಿರ್ವಹಿಸಿ, ಚುನಾವಣಾ ಕರ್ತವ್ಯದಲ್ಲಿ ಯಾವುದೇ ಲೋಪವಾಗದಂತೆ ನನ್ನೊಟ್ಟಿಗೆ ಸಹಕರಿಸಿ, ಈ ಚುನಾವಣೆ ನಮಗೆಲ್ಲರಿಗೂ ಕಲಿಕೆಗೆ ಪೂರಕ, ಹೊಸದು ಎಂದೆ ಕೆಲಸ ನಿರ್ವಹಿಸಿ ಎಂದು ಸಲಹೆ ನೀಡಿದರು.

ಸಭೆಯಲ್ಲಿ ತಹಸೀಲ್ದಾರ್ ಮಂಜುಳಾ, ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉಪತಹಸೀಲ್ದಾರ್ ಶಿರೆಸ್ತದಾರ್, ಗ್ರಾಮ ಆಡಳಿತಾಧಿಕಾರಿ, ರಾಜಸ್ವ ನಿರೀಕ್ಷಕರು ಇನ್ನಿತರಿದ್ದರು.