ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ: ಅಸಹಾಯಕರಿಗೆ, ಬಡ ಮಹಿಳೆಯರಿಗೆ, ಆರ್ಥಿಕವಾಗಿ ಹಿಂದುಳಿದ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ್ ಶ್ರಮಿಸುತ್ತಿದೆ ಎಂದು ಬ್ಯಾಂಕ್ ಅಧ್ಯಕ್ಷೆ ಡಾ.ಮಲ್ಲಮ್ಮ ಯಾಳವಾರ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ: ಅಸಹಾಯಕರಿಗೆ, ಬಡ ಮಹಿಳೆಯರಿಗೆ, ಆರ್ಥಿಕವಾಗಿ ಹಿಂದುಳಿದ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ್ ಶ್ರಮಿಸುತ್ತಿದೆ ಎಂದು ಬ್ಯಾಂಕ್ ಅಧ್ಯಕ್ಷೆ ಡಾ.ಮಲ್ಲಮ್ಮ ಯಾಳವಾರ ಹೇಳಿದರು.
ತಿಕೋಟ ಪಟ್ಟಣದಲ್ಲಿ ಬ್ಯಾಂಕ್‌ನ 8ನೇ ಶಾಖೆಯ ಉದ್ಘಾಟನೆ ವೇಳೆ ಮಾತನಾಡಿ, ಆರಂಭದಲ್ಲಿ ಅಲ್ಪ ಬಂಡವಾಳದಲ್ಲಿ ಪ್ರಾರಂಭಿಸಿದ ಈ ಸಹಕಾರಿ ಬ್ಯಾಂಕ್ ಪ್ರಸ್ತುತ 8 ಶಾಖೆಗಳನ್ನು ಹೊಂದಿದೆ. ಇನ್ನೂ 3 ಶಾಖೆ ಪ್ರಾರಂಭಿಸಲು ಆರ್‌ಬಿಐ ಅನುಮತಿ ನೀಡಿದೆ. ಶೀಘ್ರದಲ್ಲಿ ಪ್ರಾರಂಭಿಸಲಾಗುವುದು. ಬ್ಯಾಂಕ್ ಪ್ರಸುತ್ತ ಒಟ್ಟು 11,548 ಸದಸ್ಯರನ್ನು ಹೊಂದಿದ್ದು ₹ 200 ಕೋಟಿ ದುಡಿಯುವ ಬಂಡವಾಳದ ಮೂಲಕ ₹ 770 ಕೋಟಿ ವಾರ್ಷಿಕ ವಹಿವಾಟು ನಡೆಸುತ್ತಿದ್ದು, ₹ 1.36ಕೋಟಿ ಲಾಭ ಗಳಿಸಿದೆ ಎಂದರು.ವಿರಕ್ತಮಠದ ಮ.ನಿ.ಪ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಅತಿಥಿಗಳಾಗಿ ಗ್ರಾಪಂ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ, ಪಿಕೆಪಿಎಸ್ ನಿರ್ದೇಶಕಿ ಭಾಗೀರಥಿ ತೇಲಿ, ಬ್ಯಾಂಕ್ ಉಪಾಧ್ಯಕ್ಷೆ ಶೋಭಾ ಗಿಡದಮನಿ, ನಿವೃತ ಲೆಕ್ಕಪರಿಶೋಧಕ ಶಂಕರ ಕಡಿಬಾಗಿಲ ಹಾಗೂ ಸಿ.ಎ.ಚಂದ್ರಕಾಂತ ಕಪಟಕರ ಭಾಗವಹಿಸಿದರು. ಗ್ರಾಹಕರಾದ ಶಶಿಕಾಂತ ಕಪಟಕರ, ಸಿದ್ದಪ್ಪ ಮಾಳಿ, ಗುರುಶಾಂತ ಕೋರಿ, ಸುನೀತಾ ಕುರ್ಪಿ ಇತರರನ್ನು ಸನ್ಮಾನಿಸಲಾಯಿತು. ಬ್ಯಾಂಕ್ ಪ್ರಧಾನ ವ್ಯವಸ್ಥಾಪಕಿ ಲಕ್ಷ್ಮೀ ಬಳಗೊಂಡ ಸ್ವಾಗತಿಸಿದರು. ವ್ಯವಸ್ಥಾಪಕಿ ಮೈತ್ರಾ ಬಾಗೇವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಕುಮಾರ ಬಾಗೇವಾಡಿ ಕಾರ್ಯಕ್ರಮ ನಿರೂಪಿಸಿದರು. ರೇಣುಕಾ ದೇಸಾಯಿ ವಂದಿಸಿದರು.
ಕಾರ್ಯಕ್ರಮದಲ್ಲಿ ಬ್ಯಾಂಕ್ ಸಿಬ್ಬಂದಿ, ಸದಸ್ಯರು, ಗ್ರಾಹಕರು ಹಾಗೂ ತಿಕೋಟ ಜನತೆ ಭಾಗವಹಿಸಿದ್ದರು.