ಪರೀಕ್ಷೆಗಳಲ್ಲಿ ಒಳ್ಳೆಯ ಸಾಧನೆಗೆ ಶ್ರಮ: ನಾಗೇಶ ವಿಶ್ವಾಸ

| Published : Oct 29 2024, 12:52 AM IST

ಸಾರಾಂಶ

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಳ್ಳೆಯ ಸಾಧನೆ ಮಾಡುವ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಸದಾ ಶ್ರಮಿಸುತ್ತದೆ. ಅದರ ಪ್ರಯೋಜನ ಪಡೆಯಿರಿ ಎಂದು ಎಕ್ಸಪರ್ಟ್ ಪಿಯು ಕಾಲೇಜು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ನಾಗೇಶ ದಂಡಾಪೂರೆ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಳ್ಳೆಯ ಸಾಧನೆ ಮಾಡುವ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಸದಾ ಶ್ರಮಿಸುತ್ತದೆ. ಅದರ ಪ್ರಯೋಜನ ಪಡೆಯಿರಿ ಎಂದು ಎಕ್ಸಪರ್ಟ್ ಪಿಯು ಕಾಲೇಜು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ನಾಗೇಶ ದಂಡಾಪೂರೆ ಸಲಹೆ ನೀಡಿದರು.

ನಗರದ ಹೆಸರಾಂತ ಎಕ್ಸಪರ್ಟ್ ಪಿಯು ಕಾಲೇಜ್ ಬಳಗದ ವತಿಯಿಂದ 2024ನೇ ಸಾಲಿನ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮತ್ತು ನೀಟ್ ಪರೀಕ್ಷೆ ಪಾಸಾಗಲು ಶ್ರಮಿಸಿದ ಶಿಕ್ಷಕ ಬಳಗದವರಿಗೆ ನಡೆದ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನುರಿತ ಶಿಕ್ಷಕರ ತಂಡದಿಂದ ವಿದ್ಯಾರ್ಥಿಗಳಿಗೆ ಒಳ್ಳೆಯ ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ಹೇಳಿದರು.

2024ನೇ ಸಾಲಿನ ನೀಟ್ ಪರೀಕ್ಷೆಯಲ್ಲಿ 720ಕ್ಕೆ 671 ಅಂಕಗಳಿಸಿ ಪಾಸಾಗಿ ಎಂಬಿಬಿಎಸ್ ಸೀಟ್ ಪಡೆದ ವಿದ್ಯಾರ್ಥಿನಿಗೆ ಸಮೃದ್ಧಿ ಮೋರೆ ಸನ್ಮಾನ ಸ್ವೀಕರಿಸಿ ಮಾತನಾಡಿ, ಪಿಯುಸಿ ಆದ ನಂತರ ಸಾಧಾರಣವಾಗಿದ್ದ ನಮ್ಮ ಶೈಕ್ಷಣಿಕ ಯೋಜನಾ ಸ್ಥಿತಿ ನಿರಂತರವಾದ ಅತೀ ಸರಳ ರೂಪದಲ್ಲಿ ಎಲ್ಲ ವಿಷಯಗಳ ಬೋಧನೆ ಮಾಡುವುದರೊಂದಿಗೆ ನಮ್ಮನ್ನು ಅತ್ಯಂತ ವ್ಯವಸ್ಥಿತವಾಗಿ ಪ್ರತಿ ಹಂತದಲ್ಲಿ ತಿದ್ದುವ ಮೂಲಕ ನಮ್ಮನ್ನು ತಯಾರಿಗೊಳಿಸಿದ್ದಾರೆ ಎಂದು ಧನ್ಯವಾದಗಳನ್ನು ತಿಳಿಸಿದರು.

ಮೈಲಾರ ತೆನಗಿ ಕಾಲೇಜು ಕಾರ್ಯ ನಿರ್ವಹಿಸುತ್ತಿರುವ ವಿವಿಧ ಚಟುವಟಿಕೆಗಳ ಬಗ್ಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ವತಿಯಿಂದ ನೀಟ್ ಪರೀಕ್ಷೆಯ ನುರಿತ ತಜ್ಞ ಶಿಕ್ಷಕರನ್ನು ಕಾಲೇಜಿನ ಬಳಗದವರು ಸನ್ಮಾನಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಗಜೇಂದ್ರ ಕುರಿ ಸ್ವಾಗತಿಸಿದರು. ಸಂಜೀವ ಕರವಿನಕೊಪ್ಪ ನಿರೂಪಿಸಿದರು. ನಾಗಯ್ಯ ಗುರುವಯ್ಯನವರ ವಂದಿಸಿದರು.

ನೀಟ್ ಪರೀಕ್ಷೆ ತೇರ್ಗಡೆಗೆ ತಯಾರಿಗೊಳಿಸಿದ ಶಿಕ್ಷಣ ಸಂಸ್ಥೆ:

ಸಾಧಾರಣ ಮಟ್ಟದ ವಿದ್ಯಾರ್ಥಿಗಳನ್ನು ಸಹ ತೆಗೆದುಕೊಂಡು ಅತೀ ಕಟ್ಟುನಿಟ್ಟಿನ ಕೋಚಿಂಗ್ ಕೊಡುವುದರ ಮೂಲಕ ಮೂಲ ಹಂತದಿಂದ ಆ ವಿದ್ಯಾರ್ಥಿಗಳನ್ನು ತಯಾರುಗೊಳಿಸಿ ಪ್ರತಿಷ್ಠಿತ ನೀಟ್ ಪರೀಕ್ಷೆ ತೇರ್ಗಡೆಯಾಗುವುದರ ಮಟ್ಟಿಗೆ ತಯಾರಿಗೊಳಿಸಿದ ಹೆಸರಾಂತ ಶಿಕ್ಷಣ ಸಂಸ್ಥೆಗಳಲ್ಲಿ ಕೋಚಿಂಗ್ ನೀಡಿದ ಅನುಭವವನ್ನು ಹೊಂದಿರುವ ಸ್ಯಾಮುಯೆಲ್ ಠಾಕೂರ, ಸಚಿನ್ ಪಂಡರ ಪೂರಕರ, ಅಮರೀಶ ಕುಮಾರ ಮತ್ತು ರೂಪೇಶ್ ಪಾಟೀಲ ಮತ್ತು ಅವರ ತಂಡ ಎಕ್ಸಪರ್ಟ್‌ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಈಗ ವಿದ್ಯಾರ್ಥಿಗಳ ಪಿಯುಸಿ ಹಂತದಲ್ಲಿಯೇ ನಿಖರವಾದ ನೀಟ್ ತರಬೇತಿ ನಿರಂತರವಾಗಿ ಎಕ್ಸಪರ್ಟ್‌ ಪಿಯುಸಿ ಕಾಲೇಜಿನಲ್ಲಿ ಒದಗಿಸುತ್ತಿದ್ದಾರೆ. ಸಾಧಾರಣ ಮಟ್ಟದ ವಿದ್ಯಾರ್ಥಿಗಳು ಸಹ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಾವು ತೇರ್ಗಡೆ ಹೊಂದಬಹುದು ಎಂಬ ಆಶಾಭಾವನೆಯೊಂದಿಗೆ ಕಠಿಣ ಪರಿಶ್ರಮವಹಿಸಿ ಅಭ್ಯಾಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಈಗ ಬೆಂಗಳೂರು, ಮಂಗಳೂರು ಅರಸುವ ಬದಲು ಇಲ್ಲಿಯೇ ಬೆಳಗಾವಿಯ ಎಕ್ಸಪರ್ಟ್‌ ಕಾಲೇಜಿನಲ್ಲಿ ಮಾರ್ಗದರ್ಶನ ಮಾಡುತ್ತಿರುವ ಸ್ಯಾಮುಯೆಲ್ ಠಾಕೂರ, ಸಚಿನ್ ಪಂಡರಪುರಕರ, ಅಮರೀಶ ಕುಮಾರ ಮತ್ತು ಪ್ರಾಚಾರ್ಯ ರೂಪೇಶ್ ಪಾಟೀಲ ಮತ್ತು ತಂಡದ ಮಾರ್ಗದರ್ಶನ ಪಡೆದಿದ್ದೆಯಾದರೇ ಸಾಧಾರಣ ಮಟ್ಟದ ನಮ್ಮಂತಹ ವಿದ್ಯಾರ್ಥಿಗಳು ನೀಟ್‌ನ ಕನಸನ್ನು ನನಸಾಗಿಕೊಳ್ಳಬಹುದು. ಆ ನಿಟ್ಟಿನಲ್ಲಿ ಬೆಳಗಾವಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೇಳಿ ಮಾಡಿಸಿದಂತಿರುವ ಇಂತಹ ಮಾರ್ಗದರ್ಶಿ ಶಿಕ್ಷಕರಿರುವ ಎಕ್ಸಪರ್ಟ್‌ ಕಾಲೇಜಿನ ಪ್ರಯೋಜನ ಬೆಳಗಾವಿಯ ಬಡ ಮತ್ತು ಸಾಧಾರಣ ಮಟ್ಟದ ವಿದ್ಯಾರ್ಥಿಗಳು ಪಡೆಯುವಂತಾಗಲಿ.

-ಸಮೃದ್ಧಿ ಮೋರೆ, ಎಂಬಿಬಿಎಸ್ ಸೀಟ್ ದಕ್ಕಿಸಿಕೊಂಡ ವಿದ್ಯಾರ್ಥಿನಿ.