ಸಾರಾಂಶ
ಅನೇಕ ತ್ಯಾಗ ಬಲಿದಾನ ಹಾಗೂ ರಾಷ್ಟ್ರೀಯ ಸ್ವಯಂ ಸೇವಕರ ಅವಿರತ ಶ್ರಮದಿಂದಾಗಿ ಬಿಜೆಪಿ ಬಲಾಢ್ಯ ಪಕ್ಷವಾಗಿ ಹೊರಹೊಮ್ಮಿದೆ ಎಂದು ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ನಾಗರಾಜ ಲಕ್ಕುಂಡಿ ಹೇಳಿದರು.
ಕನ್ನಡಪ್ರಭ ವಾರ್ತೆ ಶಿರಹಟ್ಟಿ
ಪ್ರತಿಯೊಬ್ಬ ಕಾರ್ಯಕರ್ತರು ನಮ್ಮ ಪಕ್ಷದ ಸಂಸ್ಥಾಪನೆಯ ಮೂಲ ಉದ್ದೇಶವನ್ನರಿಯಬೇಕು. ಹಿರಿಯರ ತಪಸ್ಸು, ಕನಸು ಈಡೇರಿಸುವ ಪರ್ವ ಕಾಲದ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಸ್ಥಾನಗಳ ಗುರಿ ತಲುಪಲು ಎಲ್ಲರೂ ಸಮರ್ಪಣಾ ಭಾವದಿಂದ ಶ್ರಮಿಸಬೇಕು ಎಂದು ಶಿರಹಟ್ಟಿ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಹಾಗೂ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ನಾಗರಾಜ ಲಕ್ಕುಂಡಿ ಹೇಳಿದರು.ಶನಿವಾರ ಪಟ್ಟಣದ ಪಕ್ಷದ ಕಾರ್ಯಾಲಯದಲ್ಲಿ ಜರುಗಿದ ಬಿಜೆಪಿ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದರು. ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಕಾರ್ಯಕರ್ತರನ್ನು ಹೊಂದಿದ ಏಕೈಕ ಪಕ್ಷ ಬಿಜೆಪಿಯಾಗಿದ್ದು, ಅನೇಕ ತ್ಯಾಗ ಬಲಿದಾನ ಹಾಗೂ ರಾಷ್ಟ್ರೀಯ ಸ್ವಯಂ ಸೇವಕರ ಅವಿರತ ಶ್ರಮದಿಂದಾಗಿ ಬಲಾಢ್ಯ ಪಕ್ಷವಾಗಿ ಹೊರಹೊಮ್ಮಿದೆ. ಅಂತಹ ಪಕ್ಷದಲ್ಲಿ ಗುರುತಿಸಲ್ಪಟ್ಟ ನಾವೆಲ್ಲರೂ ಧನ್ಯರು ಎಂದರು.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಕ್ಕೀರೇಶ ರಟ್ಟಿಹಳ್ಳಿ, ಪಪಂ ಸದಸ್ಯ ಸಂದೀಪ ಕಪ್ಪತ್ತನವರ, ಬಿ.ಡಿ. ಪಲ್ಲೇದ, ಜಿಲ್ಲಾ ಕಾರ್ಯದರ್ಶಿ ಫಕ್ಕೀರೇಶ ರಟ್ಟಿಹಳ್ಳಿ, ಮಹಿಳಾ ಮಂಡಲ ಅಧ್ಯಕ್ಷೆ ನಂದಾ ಪಲ್ಲೇದ, ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಅಕ್ಬರಸಾಬ ಯಾದಗಿರಿ, ನಗರ ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಪಾಶ್ಚಾಪುರ, ಯಲ್ಲಪ್ಪ ಇಂಗಳಗಿ, ರಾಜು ಕಪ್ಪತ್ತನವರ, ಪರಶುರಾಮ ಡೊಂಕಬಳ್ಳಿ, ಮುತ್ತಣ್ಣ ಕಲಾದಗಿ, ಮಹೇಶ ಕಲ್ಲಪ್ಪನವರ, ವೀರಣ್ಣ ಅಂಗಡಿ, ಅಶೋಕ ವರವಿ, ಬಸವರಾಜ ವಡವಿ, ಸುರೇಶ ಹವಳದ ಮತ್ತಿತರರು ಉಪಸ್ಥಿತರಿದ್ದರು.