ಸಹಕಾರ ಕ್ಷೇತ್ರ ಉಳಿಸಲು ಒಗ್ಗಟ್ಟಿನಿಂದ ಕೆಲಸ ಮಾಡಿ: ಶಾಸಕ ದರ್ಶನ್ ಪುಟ್ಟಣ್ಣಯ್ಯ

| Published : Nov 21 2024, 01:03 AM IST

ಸಹಕಾರ ಕ್ಷೇತ್ರ ಉಳಿಸಲು ಒಗ್ಗಟ್ಟಿನಿಂದ ಕೆಲಸ ಮಾಡಿ: ಶಾಸಕ ದರ್ಶನ್ ಪುಟ್ಟಣ್ಣಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚಿಗೆ ಸಹಕಾರ ಸಂಘಗಳ ಚುನಾಯಿತ ಪ್ರತಿನಿಧಿಗಳ ಅಸಹಕಾರದಿಂದ ಸಹಕಾರಿ ಕ್ಷೇತ್ರ ಅವಸಾನದತ್ತ ಸಾಗುತ್ತಿದೆ. ಇದು ಹೀಗೆ ಮುಂದುವರಿದರೆ ಮುಂದೊಂದು ದಿನ ಸಹಕಾರ ಕ್ಷೇತ್ರ ಕಣ್ಮರೆಯಾಗಲಿದೆ. ಸಹಕಾರ ಕ್ಷೇತ್ರದಲ್ಲಿ ನಾನು ಎನ್ನುವ ಬದಲು ನಾವು ಎಂಬುದಾಗಿ ಪರಿಗಣಿಸಿ ಕೆಲಸ ನಿರ್ವಹಿಸಬೇಕು. ಪ್ರತಿನಿಧಿಗಳು ಹಗಲಿರುಳು ಪ್ರಾಮಾಣಿಕವಾಗಿ ದುಡಿದರಷ್ಟೆ ಸಹಕಾರ ಸಂಘಗಳ ಅಭಿವೃದ್ದಿ ಜೊತೆಗೆ ಉಳಿಯುಲು ಸಾಧ್ಯವಾಗಲಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಗ್ರಾಮೀಣ ರೈತರು, ಜನರ ಬದುಕಿಗೆ ನೆರವಾಗಿರುವ ಸಹಕಾರ ಕ್ಷೇತ್ರವನ್ನು ಉಳಿಸಲು ಸಹಕಾರಿ ಬಂಧುಗಳು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಶಾಸಕ ದರ್ಶನ್‌ಪುಟ್ಟಣ್ಣಯ್ಯ ಹೇಳಿದರು.ತಾಲೂಕಿನ ಹರಳಹಳ್ಳಿಯ ಸಪ್ತಪದಿ ಕನ್ವೆನ್ಸನ್‌ ಹಾಲ್‌ನಲ್ಲಿ ಡಿಂಕಾ ಹಾಲು ಉತ್ಪಾದಕರ ಸಹಕಾರ ಸಂಘ, ಜಿಲ್ಲಾ ಸಹಕಾರ ಒಕ್ಕೂಟ ಹಾಗೂ ಸಹಕಾರ ಇಲಾಖೆ ಆಶ್ರಯದಲ್ಲಿ ನಡೆದ 71ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿಗೆ ಸಹಕಾರ ಸಂಘಗಳ ಚುನಾಯಿತ ಪ್ರತಿನಿಧಿಗಳ ಅಸಹಕಾರದಿಂದ ಸಹಕಾರಿ ಕ್ಷೇತ್ರ ಅವಸಾನದತ್ತ ಸಾಗುತ್ತಿದೆ. ಇದು ಹೀಗೆ ಮುಂದುವರಿದರೆ ಮುಂದೊಂದು ದಿನ ಸಹಕಾರ ಕ್ಷೇತ್ರ ಕಣ್ಮರೆಯಾಗಲಿದೆ ಎಂದು ಎಚ್ಚರಿಸಿದರು.

ಸಹಕಾರ ಕ್ಷೇತ್ರದಲ್ಲಿ ನಾನು ಎನ್ನುವ ಬದಲು ನಾವು ಎಂಬುದಾಗಿ ಪರಿಗಣಿಸಿ ಕೆಲಸ ನಿರ್ವಹಿಸಬೇಕು. ಪ್ರತಿನಿಧಿಗಳು ಹಗಲಿರುಳು ಪ್ರಾಮಾಣಿಕವಾಗಿ ದುಡಿದರಷ್ಟೆ ಸಹಕಾರ ಸಂಘಗಳ ಅಭಿವೃದ್ದಿ ಜೊತೆಗೆ ಉಳಿಯುಲು ಸಾಧ್ಯವಾಗಲಿದೆ ಎಂದರು.

ಮನ್ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳು ರೈತರಿಗೆ ಸಾಲ ನೀಡಲು ಹಿಂದೇಟು ಹಾಕುತ್ತಿವೆ. ಆದರೆ, ಸಹಕಾರ ಕ್ಷೇತ್ರದ ಬ್ಯಾಂಕುಗಳು ನ್ಯಾಯಯುತವಾಗಿ ರೈತರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುಲು ಸಹಾಯ ಮಾಡುತ್ತಿವೆ ಎಂದರು.

ರೈತರು ಸಹಕಾರ ಕ್ಷೇತ್ರವನ್ನು ನಿರ್ಲ್ಯಕ್ಷ ಮಾಡುತ್ತಿದ್ದಾರೆ.ಸಹಕಾರ ಕ್ಷೇತ್ರ ಉಳಿದರೆ ರೈತರ ಬದುಕು ಸಹ ಅಸನಾಗುತ್ತದೆ. ಹಾಗಾಗಿ ರೈತರು ಸಹಕಾರ ಕ್ಷೇತ್ರವನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ ಮಾತನಾಡಿ, ಎಂಡಿಸಿಸಿ ಬ್ಯಾಂಕ್ ಸಕಾಲದಲ್ಲಿ ಸಾಲ ಸೌಲಭ್ಯ ನೀಡಲು ಹಣಕಾಸಿನ ಅವಶ್ಯಕತೆ ಇದೆ. ಅಪೆಕ್ಸ್ ಬ್ಯಾಂಕ್ ಶೇ.10 ರಷ್ಟು ಹಾಗೂ ನಬಾರ್ಡ್ ಬ್ಯಾಂಕ್ ಶೇ.40 ರಷ್ಟು ನೀಡುತ್ತಿದೆ. ಆದರೆ ಇತ್ತೀಚೆಗೆ ಯಾವುದೇ ಅನುದಾನ ನೀಡುತ್ತಿಲ್ಲ ಎಂದರು.

ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಈ ರಾಜ್ಯದ ರೈತರ ಪ್ರತಿನಿಧಿಯಾಗಿ ವಿಧಾನಸಭೆ ಪ್ರವೇಶ ಮಾಡಿರುವುದರಿಂದ ರೈತರ ಪರ ಸದನದಲ್ಲಿ ಚರ್ಚಿಸಿ ರೈತರ ಬ್ಯಾಂಕ್ ಆಗಿರುವ ಸಹಕಾರ ಕ್ಷೇತ್ರದ ಬ್ಯಾಂಕುಗಳನ್ನು ಉಳಿಸಲು ಅವಕಾಶ ಕಲ್ಪಸಿಕೊಡಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಸಹಕಾರ ಸಂಘಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಡಿಂಕಾ ಡೇರಿ ಅಧ್ಯಕ್ಷ ಗಿರೀಶ್ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ಮಹರಾಣಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಸುರೇಶ್, ಮಹಾಮಂಡಳ ನಿರ್ದೇಶಕ ಎಸ್.ಎಲ್.ಮೋಹನ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಗುರುಸ್ವಾಮಿ, ಪಿ.ಚಲುವರಾಜು, ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕರಾದ ವಡ್ಡರಹಳ್ಳಿ ನಿಂಗೇಗೌಡ, ಕೆ.ಎಸ್.ಪ್ರೇಮ, ಜಿಲ್ಲಾ ಹಾಪ್‌ಕಾಮ್ಸ್ ನಿರ್ದೇಶಕ ಪುಟ್ಟಬಸವೇಗೌಡ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಡಿ.ಎನ್.ಸೋಮಶೇಖರ್, ಇಪ್ಕೋ ಕ್ಷೇತ್ರಾಧಿಕಾರಿ ಲಕ್ಷ್ಮೀಶ, ಡಿಸಿಸಿ ಬ್ಯಾಂಕ್ ಸಿಇಒ ವನಜಾಕ್ಷಿ, ಉಪನಿರ್ದೇಶಕ ಎಚ್.ಆರ್.ನಾಗಭೂಷಣ್, ಸಹಕಾರ ಅಭಿವೃದ್ದಿ ಅಧಿಕಾರಿ ಆರ್.ನಿರ್ಮಲ, ಮುಖಂಡ ಬಿ.ಜೆ.ಸ್ವಾಮಿ, ಮನ್ಮುಲ್ ಉಪ ವ್ಯವಸ್ಥಾಪಕ ಆರ್.ಪ್ರಸಾದ್, ಡಿಂಕಾ ಡೇರಿ ಕಾರ್ಯದರ್ಶಿ ಡಿ.ಎಂ.ಶಿವಪ್ಪ, ಮನ್ಮುಲ್ ಆಡಳಿತ ಮಂಡಳಿ ಹಾಗೂ ಡಿಂಕಾ ಡೇರಿ ಆಡಳಿತ ಮಂಡಳಿ ನಿರ್ದೇಶಕರು ಉಪಸ್ಥಿತರಿದ್ದರು.