ಎಂಪಿ ಚುನಾವಣೆ: ಮೈ ಮರೆಯದೆ ಕೆಲಸ ಮಾಡಿ: ವಿಧಾನ ಪರಿಷತ್ ಉಪಸಭಾಪತಿ ಪ್ರಾಣೇಶ್

| Published : Mar 26 2024, 01:02 AM IST

ಎಂಪಿ ಚುನಾವಣೆ: ಮೈ ಮರೆಯದೆ ಕೆಲಸ ಮಾಡಿ: ವಿಧಾನ ಪರಿಷತ್ ಉಪಸಭಾಪತಿ ಪ್ರಾಣೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಹಾಸನದ ಎಂ.ಜಿ. ರಸ್ತೆ ಬಳಿ ಇರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ಸೋಮವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಚುನಾವಣೆ ನಿರ್ವಹಣಾ ಸಮಿತಿ ಸಭೆ ಉದ್ಘಾಟಿಸಿ ವಿಧಾನ ಪರಿಷತ್ ಉಪಸಭಾಪತಿ ಪ್ರಾಣೇಶ್ ಮಾತನಾಡಿದರು.

ಜಿಲ್ಲಾ ಚುನಾವಣೆ ಸಮಿತಿ ಸಭೆ । ಮೋದಿಯನ್ನು ಮತ್ತೆ ಪ್ರಧಾನಿ ಮಾಡುವ ಗುರಿಕನ್ನಡಪ್ರಭ ವಾರ್ತೆ ಹಾಸನ

ಕೆಲವು ದಿನಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಯಾರೂ ಕೂಡ ಮೈಮರೆತು ಕೆಲಸ ಮಾಡದೆ, ಎಚ್ಚೆತ್ತುಕೊಂಡು ಕೆಲಸ ಮಾಬೇಕ ಎಂದು ವಿಧಾನ ಪರಿಷತ್ ಉಪಸಭಾಪತಿ ಪ್ರಾಣೇಶ್ ಹೇಳಿದರು.

ನಗರದ ಎಂ.ಜಿ. ರಸ್ತೆ ಬಳಿ ಇರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ಸೋಮವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಚುನಾವಣೆ ನಿರ್ವಹಣಾ ಸಮಿತಿ ಸಭೆ ಉದ್ಘಾಟಿಸಿ ಮಾತನಾಡಿ, ‘ಎಲ್ಲದಕ್ಕೂ ಪರಿಹಾರವಿದೆ. ಯಾವುದೇ ಭಿನ್ನಾಭಿಪ್ರಾಯ ಇದ್ದರೂ ಸರಿ ಮಾಡುವ ಕೆಲಸ ಮಾಡಲಾಗುವುದು. ಮೋದಿ ಅವರನ್ನು ಪ್ರಧಾನಿ ಮಾಡುವುದು ನಮ್ಮ ಗುರಿ. ವ್ಯವಸ್ಥೆ ಅಡಿಯಲ್ಲಿ ನಿರ್ವಹಣಾ ಸಮಿತಿ ಮಾಡಲಾಗಿದೆ. ಈ ಬಾರಿ ಚುನಾವಣೆ ಗೆಲ್ಲಲೇಬೇಕು. ಭಾಷಣದ ವೇದಿಕೆಯು ಕೆಲಸ ಮಾಡುವ ವೇದಿಕೆ ಆಗಬೇಕು’ ಎಂದು ಹೇಳಿದರು.

‘ನಾನು ಮೂರನೇ ಬಾರಿ ಹಾಸನ ಜಿಲ್ಲಾ ಉಸ್ತುವಾರಿಯಾಗಿ ಚುನಾವಣೆಯನ್ನು ನಿಭಾಯಿಸುತ್ತಿದ್ದೇನೆ. ಚುನಾವಣೆಯಲ್ಲಿ ಸೋಲು-ಗೆಲುವು ಎಂಬುವುದು ಸಹಜ. ಅದರೊಳಗೆ ಇಲ್ಲಿ ಎರಡು ಚುನಾವಣೆ ಸೋತಿದ್ದು, ಈ ಬಾರಿ ವಿಶ್ವಾಸವಿದೆ. ನರೇಂದ್ರ ಮೋದಿ ನೇತೃತ್ವದಲ್ಲಿ ಚುನಾವಣೆ ನಡೆಯುತ್ತಿದ್ದು, ನಾವು ಗೆದ್ದೇ ಗೆಲ್ಲುತ್ತೇವೆ. ಚುನಾವಣೆಯಲ್ಲಿ ಮೈಮರೆಯುವ ಕೆಲಸ ಮಾಡಬಾರದು. ನಮ್ಮ ಗುರಿ ಎಂದರೆ ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿಯಾಗಿ ಮಾಡುವುದಾಗಿದೆ’ ಎಂದು ಹೇಳಿದರು.

ಬಿಜೆಪಿ ಮುಖಂಡ ರಾಮದಾಸ್ ಮಾತನಾಡಿ, ಹಾಸನ ಜಿಲ್ಲೆಯಲ್ಲಿ ಶಿವಪ್ಪ ಸುಶೀಲಪ್ಪ ಪಕ್ಷವನ್ನು ನಿರಂತರವಾಗಿ ಕಟ್ಟಿ ಮೊದಲ ಬಾರಿಗೆ ಬಿಜೆಪಿ ಗೆಲ್ಲಿಸಿದ್ದರು. ಮೈತ್ರಿಯಿಂದ ಬೇರೆ ಅಭ್ಯರ್ಥಿ ಪರ ಪ್ರಚಾರ ಮಾಡಬೇಕೆಂದು ಕಾರ್ಯಕರ್ತರಲ್ಲಿ ಇರಬಹುದು. ಮೋದಿ ಕೊಟ್ಟಿರುವ ಯೋಜನೆಯನ್ನು ಮನೆ ಮನೆಗೆ ತಲುಪಿಸಬೇಕಾಗಿದೆ. ಕೋವಿಡ್ ವೇಳೆ ಮೋದಿ ಅವರು ನೀಡಿದ ವ್ಯಾಕ್ಸಿನ್ ಪಡೆದಿದ್ದಾರೆ. ಭಾರತದ ಭವಿಷ್ಯಕ್ಕಾಗಿ ಮತ ಕೇಳಬೇಕಾಗಿದೆ. ಮೋದಿ ಬರಬೇಕು ಎಂದು ಕೇಳುವುದು ಸಹಜ. ಎಲ್ಲಾ ಚುನಾವಣೆಯಲ್ಲಿಯೂ ಇಲ್ಲಿಗೆ ಬರಬೇಕೆಂದು ನಿರೀಕ್ಷೆ ಮಾಡಬೇಡಿ. ಅವರು ಕೂಡ ಒಬ್ಬ ಮನುಷ್ಯ. ೧೮ ಗಂಟೆಗಳ ಕಾಲ ಕೆಲಸ ಮಾಡುವ ಮೋದಿಗೂ ಕೂಡ ಆಯಾಸ ಆಗುತ್ತದೆ ಎಂದು ಹೇಳಿದರು.

೩೭೦ ಎನ್ನುವುದು ಮ್ಯಾಜಿಕ್ ನಂಬರ್. ವಿಶೇಷ ಎಂದರೆ ಜಮ್ಮು ಕಾಶ್ಮೀರದ ವಿಧಿ ೩೭೦ ಆಗಿದೆ. ಈ ಬಾರಿ ಈ ಸಂಖ್ಯೆಯಲ್ಲಿ ಮತ ಕಾಣಿಕೆ ಆಗಿ ಕೊಡಬೇಕಾಗಿದೆ. ಲೋಕಸಭಾ ಚುನಾವಣೆ ನಂತರ ಜಿಪಂ, ತಾಪಂ, ನಗರಸಭೆ ಚುನಾವಣೆ ಬರಲಿದೆ. ರಾಮ ಮಂದಿರ ನಿರ್ಮಾಣ ಮಾಡಿ ಮಾತು ಉಳಿಸಿಕೊಂಡು ಬಂದಿದ್ದೇವೆ. ಇವತ್ತಿನಿಂದ ನಿರಂತರವಾಗಿ ಚುನಾವಣೆ ಪ್ರಚಾರವನ್ನು ಮಾಡೋಣ ಎಂದು ಹೇಳಿದರು.

ಸಭೆಯಲ್ಲಿ ಆಲೂರು ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಬಿಜೆಪಿ ಮಾಜಿ ಅಧ್ಯಕ್ಷ ರೇಣುಕುಮಾರ್, ಪ್ರಸನ್ನಕುಮಾರ್, ಅಮಿತ್ ಶೆಟ್ಟಿ ಇದ್ದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ನಿರೂಪಿಸಿದರು. ನೇತ್ರಾ ಪ್ರಾರ್ಥಿಸಿದರು.ಹಾಸನದಲ್ಲಿ ಜಿಲ್ಲಾ ಚುನಾವಣೆ ನಿರ್ವಹಣಾ ಸಮಿತಿ ಸಭೆ ಉದ್ಘಾಟನೆಗೂ ಮುನ್ನ ಬಿಜೆಪಿ ಸಂಸ್ಥಾಪಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.