ಸೇವೆ ಕಾಯಮಾತಿಗಾಗಿ ಆಗ್ರಹಿಸಿ ಕಾರ್ಮಿಕರ ಪ್ರತಿಭಟನೆ

| Published : Oct 15 2025, 02:07 AM IST

ಸಾರಾಂಶ

ರಾಣಿಬೆನ್ನೂರು ತಾಲೂಕಿನ ಕವಲೆತ್ತು ಗ್ರಾಮದ ಹತ್ತಿರದ ಸಿಂಥೈಟ್ ಇಂಡಸ್ಟ್ರೀಸ್ ಕಾರ್ಖಾನೆಯಲ್ಲಿ ಕಳೆದ 18 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ 120 ಕಾರ್ಮಿಕರು ತಮ್ಮ ಸೇವೆಯನ್ನು ಕಾಯಂಗೊಳಿಸುವಂತೆ ಆಗ್ರಹಿಸಿ ಐಎನ್‌ಟಿಯುಸಿ ನೇತೃತ್ವದಲ್ಲಿ ಮಂಗಳವಾರ ಕಂಪನಿಯ ಮುಖ್ಯದ್ವಾರದ ಎದುರು ಪ್ರತಿಭಟನೆ ಕೈಗೊಂಡಿದ್ದಾರೆ.

ರಾಣಿಬೆನ್ನೂರು: ತಾಲೂಕಿನ ಕವಲೆತ್ತು ಗ್ರಾಮದ ಹತ್ತಿರದ ಸಿಂಥೈಟ್ ಇಂಡಸ್ಟ್ರೀಸ್ ಕಾರ್ಖಾನೆಯಲ್ಲಿ ಕಳೆದ 18 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ 120 ಕಾರ್ಮಿಕರು ತಮ್ಮ ಸೇವೆಯನ್ನು ಕಾಯಂಗೊಳಿಸುವಂತೆ ಆಗ್ರಹಿಸಿ ಐಎನ್‌ಟಿಯುಸಿ ನೇತೃತ್ವದಲ್ಲಿ ಮಂಗಳವಾರ ಕಂಪನಿಯ ಮುಖ್ಯದ್ವಾರದ ಎದುರು ಪ್ರತಿಭಟನೆ ಕೈಗೊಂಡಿದ್ದಾರೆ. ಕವಲೆತ್ತು ಗ್ರಾಪಂ ಮಾಜಿ ಅಧ್ಯಕ್ಷ, ಕಾರ್ಮಿಕ ಮುಖಂಡ ಅಷ್ಠಮೂರ್ತಿ ಓಲೇಕಾರ ಮಾತನಾಡಿ, 18 ವರ್ಷಗಳ ಹಿಂದೆ ಕಾರ್ಖಾನೆ ಆರಂಭಗೊಂಡ ಸಮಯದಲ್ಲಿ 270 ಕಾರ್ಮಿಕರನ್ನು ಏಜೆನ್ಸಿ ಮೂಲಕ ಕೆಲಸಕ್ಕೆ ನಿಯೋಜಿಸಲಾಗಿತ್ತು. ಹಂತ ಹಂತವಾಗಿ 3 ವರ್ಷಕ್ಕೊಮ್ಮೆಯಂತೆ ಈಗಾಗಲೆ 150 ಕಾರ್ಮಿಕರ ಸೇವೆಯನ್ನು ಕಾರ್ಖಾನೆಯು ಕಾಯಂಗೊಳಿಸಿದೆ. ಆದರೆ ಉಳಿದ 120 ಕಾರ್ಮಿಕರನ್ನು ಕಾಯಂಗೊಳಿಸಿಕೊಳ್ಳಲು ಹಿಂದೇಟು ಹಾಕುತ್ತಿರುವುದು ಅರ್ಥವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು. ಐಎನ್‌ಟಿಯುಸಿ ಅಧ್ಯಕ್ಷ ಆರ್.ಎಸ್.ತಿಪ್ಪೇಸ್ವಾಮಿ, ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಬಿ., ಕರಿಯಪ್ಪ ಎಂ.ಬಿ., ಸಿದ್ದೇಶ ಎನ್.ಬಿ., ಷಣ್ಮುಖ, ಟಿ.ಟಿ., ಮಾರುತಿ ಬಿ.ಕೆ., ಕುಬೇರಪ್ಪ ಎಂ.ಕೆ., ರಮೇಶ ಬಿ.ಕೆ., ಮಂಜುನಾಥ ಎಲ್.ಎಮ್., ರಾಜು ಹೆಚ್.ಎಲ್., ವೆಂಕಟೇಶ ಕೋಡೇರ, ವಸಂತಪ್ಪ ಪಿ.ವೈ., ಹರೀಶ ಎಸ್., ಹನುಮಕ್ಕ ಕೋಡೆರ, ಶಾರದಮ್ಮ ಕೋಡೇರ, ಸುಮಾ ಬಿ.ಎ., ಪ್ರೇಮ ಹಿರೇಮಠ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.