ತರೀಕೆರೆ, ಕನ್ನಡ ಭಾಷಾ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಮೀಪದ ರಂಗೇನಹಳ್ಳಿಯಲ್ಲಿ ರಾಷ್ಟ್ರ ಮಟ್ಟದ ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿ ಕಾರ್ಯಾಗಾರ ಇದೇ 29 ಮತ್ತು 30 ರಂದು ಆಯೋಜನೆಗೊಂಡಿರುವುದು ತರೀಕೆರೆಗೆ ಹೆಮ್ಮೆ ತಂದಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರವಿ ದಳವಾಯಿ ತಿಳಿಸಿದ್ದಾರೆ.
29, 30 ರಂದು ರಾಷ್ಟ್ರ ಮಟ್ಟದ ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿ ಕಾರ್ಯಾಗಾರ
ಕನ್ನಡಪ್ರಭ ವಾರ್ತೆ, ತರೀಕೆರೆಕನ್ನಡ ಭಾಷಾ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಮೀಪದ ರಂಗೇನಹಳ್ಳಿಯಲ್ಲಿ ರಾಷ್ಟ್ರ ಮಟ್ಟದ ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿ ಕಾರ್ಯಾಗಾರ ಇದೇ 29 ಮತ್ತು 30 ರಂದು ಆಯೋಜನೆಗೊಂಡಿರುವುದು ತರೀಕೆರೆಗೆ ಹೆಮ್ಮೆ ತಂದಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರವಿ ದಳವಾಯಿ ತಿಳಿಸಿದ್ದಾರೆ.
ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾರ್ಯಾಗಾರದ ಮಾಹಿತಿ ನೀಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ತರೀಕೆರೆ ಸದ್ಗುರು ಜನಸೇವಾ ಫೌಂಡೇಶನ್ , ಅರಿವು ವೇದಿಕೆ, ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತರೀಕೆರೆ ತಾಲೂಕು ಕಸಾಪ ಸಹಯೋಗದಲ್ಲಿ ರಂಗೇನಹಳ್ಳಿ ಶ್ರೀ ಅಂಬಾಭವಾನಿ ಸಮುದಾಯ ಭವನದಲ್ಲಿ ಕಾರ್ಯಾಗಾರ ನಡೆಯಲಿದೆ ಎಂದು ಹೇಳಿದರು.ಆ. 29ರಂದು ಬೆಳಿಗ್ಗೆ 10.30ಕ್ಕೆ ಕರ್ನಾಟಕ ಸರ್ಕಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ಕಾರ್ಯಾಗಾರದ ಉದ್ಘಾಟಿಸಲಿದ್ದು, ತರೀಕೆರೆ ಶಾಸಕ ಜಿ.ಎಚ್.ಶ್ರೀನಿವಾಸ್ , ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಡಾ.ಸಂತೋಷ್ ಹಾನಗಲ್, ಚಿಕ್ಕಮಗಳೂರು ಜಿಪಂ ಮಾಜಿ ಅಧ್ಯಕ್ಷ ಎಚ್.ವಿಶ್ವನಾಥ್, ಚಿಕ್ಕಮಗಳೂರು ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ರಂಗ ಕರ್ಮಿ, ಶಿಬಿರದ ನಿರ್ದೇಶಕ ಪ್ರೊ.ರಾಜಪ್ಪ ದಳವಾಯಿ, ಕನ್ನಡ ಅಬಿವೃದ್ಧಿ ಪ್ರಾಧಿಕಾರ ಸದಸ್ಯರು ಮತ್ತು ವಿಮರ್ಶಕ ಡಾ.ರವಿಕುಮಾರ್ ನೀಹ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.ಅಂದು ಮಧ್ಯಾನ್ಹ 12 ರಿಂದ ನಡೆಯುವ ಮಾದ್ಯಮಗಳಲ್ಲಿ ಕನ್ನಡ ಬಳಕೆ ವಿಚಾರವಾಗಿ ಚರ್ಚೆ ಮತ್ತು ಉಪನ್ಯಾಸದಲ್ಲಿ ಹಿರಿಯ ಪತ್ರಕರ್ತ ಬಿ.ಎಂ.ಹನೀಫ್ ಪಾಲ್ಗೊಳ್ಳಲಿದ್ದು, ಮಧ್ಯಾನ್ಹ 2 ಗಂಟೆಗೆ ಶಿಕ್ಷಣದಲ್ಲಿ ಕನ್ನಡ ಭಾಷೆ ವಿಷಯವಾಗಿ ಶಿವಮೊಗ್ಗ ಭಾಷಾ ತಜ್ಞ ಹಾಗೂ ಪ್ರಾದ್ಯಾಪಕ ಮಲ್ಲಿಕಾರ್ಜುನ ಮೇಟಿ, ಶಿಕ್ಷಣ ಮತ್ತು ಸಮಾಜ ವಿಷಯ ಕುರಿತು ಬೆಂಗಳೂರು ರಂಗ ವಿಜ್ಞಾನಿ ಹಾಗೂ ಪ್ರಾಧ್ಯಾಪಕ ಸಿ.ಜಿ.ಲಕ್ಷ್ಮೀಪತಿ, ದಲಿತ ಅಭಿವ್ಯಕ್ತಿ ಹೋರಾಟದಲ್ಲಿ ಕನ್ನಡ ವಿಷಯವಾಗಿ ಕಥೆಗಾರ ತುಂಬಾಳಿ ರಾಮಯ್ಯ, ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಆ.30 ರಂದು ಬೆಳಿಗ್ಗೆ 9.30ಕ್ಕೆ ಸಂಸ್ಕೃತಿ ಚಿಂತಕ ಪ್ರೊ.ರೆಹಮತ್ ತರೀಕೆರೆ ಅವರು ನಡೆದಾಡುವ ಕನ್ನಡ ವಿಷಯ ಕುರಿತು. ವೈಚಾರಿಕ ಪ್ರಚಾರಕ ಎಚ್.ಆರ್.ಸ್ವಾಮಿ ಕನ್ನಡದ ಪರಂಪರೆಯಲ್ಲಿ ವೈಜ್ಞಾನಿಕ ಮನೋಧರ್ಮ, ಪ್ರಾದ್ಯಾಪಕ ಮತ್ತು ಸಾಹಿತ್ಯ ಚಿಂತಕರಾದ ಡಾ.ಸಬಿತಾ ಬನ್ನಾಡಿ ಸಾಹಿತ್ಯದ ಅಭಿವ್ಯಕ್ತಿಯಲ್ಲಿ ಕನ್ನಡ ವಿಷಯ ಕುರಿತು, ರಂಗಕಲಾ ಶಿಕ್ಷಕರು ಡಾ.ವೆಂಕಟೇಶ್ವರ ರಂಗಭೂಮಿಯಲ್ಲಿ ಕನ್ನಡ ವಿಷಯ ಕುರಿತು ಮಾತನಾಡಲಿದ್ದಾರೆ ಎಂದು ವಿವರಿಸಿದರು.ಅಂದು ಸಂಜೆ 5ಕ್ಕೆ ಸಮಾರೋಪ ಸಮಾರಂಭದಲ್ಲಿ ಹಿರಿಯ ಚಿಂತಕ ಡಾ.ಅಗ್ರಹಾರ ಕೃಷ್ಣಮೂರ್ತಿ ಸಮಾರೋಪ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮ ನಿರ್ದೇಶಕ ಡಾ.ರಾಜಪ್ಪ ದಳವಾಯಿ, ಡಾ.ರವಿಕುಮಾರ್ ನೀಹ, ಸದ್ಗುರು ಜನಸೇವಾ ಫೌಂಡೇಶನ್ ಅಧ್ಯಕ್ಷ ಟಿ.ಎನ್.ಜಗದೀಶ್ ಅಧ್ಯಕ್ಷತೆ, ಅರಿವು ವೇದಿಕೆ ಅದ್ಯಕ್ಷ ಕೆ.ಎಸ್.ಶಿವಣ್ಣ ಭಾಗವಹಿಸಲಿದ್ದಾರೆ ಎಂದರು.
ಸಾಹಿತ್ಯ ಸಂಸ್ಕೃತಿ ಕಾರ್ಯಾಗಾರದಲ್ಲಿ ಮೂಡಿಬಂದ ವಿಷಯಗಳನ್ನು ದಾಖಲಿಸಿ ಪುಸ್ತಕ ರೂಪದಲ್ಲಿ ಹೊರತರಲಾಗುವುದು. ಕಾರ್ಯಾಗಾರದಲ್ಲಿ ಬಾಗವಹಿಸಲಿಚ್ಚಿಸುವವರು ಆ.20 ರೊಳಗೆ ಹೆಸರು ನೋಂದಾಯಿಸಲು ಮನವಿ ಮಾಡಿದರು.ಕನ್ನಡಶ್ರೀ ಬಿ.ಎಸ್.ಭಗವಾನ್ ಮಾತನಾಡಿ ಕನ್ನಡ ಬಾಷೆ ಸಾಹಿತ್ಯ ಸಂಸ್ಕೃತಿ ಪೋಷಣೆ ಹಾಗೂ ಅಬಿವೃದ್ಧಿ ಕುರಿತು ಕಾರ್ಯಾಗಾರ ಏರ್ಪಡಿಸಿರುವುದು ಅತ್ಯಂತ ಸ್ತುತ್ಯಾರ್ಹ ಇದರ ಉಪಯೋಗ ಸರ್ವರೂ ಪಡೆಯಬೇಕೆಂದು ಮನವಿ ಮಾಡಿದರು.
ಸದ್ಗುರು ಜನಸೇವಾ ಫೌಂಡೇಶನ್ ಅಧ್ಯಕ್ಷ ಟಿ.ಎನ್.ಜಗದೀಶ್ ಮಾತನಾಡಿ ಕನ್ನಡ ನಾಡು ನುಡಿ ವೈಶಿಷ್ಟ್ಯಗಳನ್ನು ಬಿಂಬಿಸುವ ಕಾರ್ಯಾಗಾರ ದೇಶದ ಹೆಮ್ಮೆಯ ಪ್ರತೀಕ. ಕಾರ್ಯಕ್ರಮದ ಯಶಸ್ವಿಗೆ ಸರ್ವರೂ ಸಹಕರಿಸಬೇಕೆಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆ ನೆರವೇರಿಸಲಾಯಿತು. ಲಿಂಗದಹಳ್ಳಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಲಿಂಗರಾಜು ಉಪಸ್ಥಿತರಿದ್ದರು. ಹೆಚ್ಚಿನ ಮಾಹಿತಿಗೆ ಮೊ.9483087591 ರವಿ ದಳವಾಯಿ, 9036227197, ಟಿ.ಎನ್.ಜಗದೀಶ್, 9902143241 ಬಿ.ಎಸ್.ಭಗವಾನ್ ಅವರನ್ನು ಸಂಪರ್ಕಿಸಬಹುದು.
-12ಕೆಟಿಆರ್.ಕೆ 12ಃ
ತರೀಕೆರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಾಲೂಕು ಕಸಾಪ ಅಧ್ಯಕ್ಷ ರವಿ ದಳವಾಯಿ ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿ ಕಾರ್ಯಾಗಾರ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿದರು. ಕನ್ನಡಶ್ರೀ ಬಿ.ಎಸ್.ಭಗವಾನ್, ಸದ್ಗುರು ಜನಸೇವಾ ಫೌಂಡೇಶನ್ ಅಧ್ಯಕ್ಷ ಟಿ.ಎನ್. ಜಗದೀಶ್, ಲಿಂಗದಹಳ್ಲಿ ಹೋಬಳಿ ಕಸಾಪ ಅದ್ಯಕ್ಷ ಲಿಂಗರಾಜು ಇದ್ದರು.