ಹುಳಿಯಾರು: ವಿಶ್ವ ಪರಿಸರ ದಿನದಂದು ಗಿಡಗಳನ್ನು ಬೆಳೆಸಲು ಸಾವಿರಾರು ಜನ ಮುಂದಾದರೆ, ಇಲ್ಲಿನ ಆಸ್ಪತ್ರೆ ಆವರಣದಲ್ಲಿ ಮರಗಳ ಮಾರಣಹೋಮ ನಡೆಸಿದ್ದಾರೆ. ಈ ಮರಗಳನ್ನು ಕತ್ತರಿಸಲು ಶಾಸಕರು ಹೇಳಿದ್ದಾರೆ ಎಂದು ಉತ್ತರ ನೀಡುತ್ತಿದ್ದಾರೆ ಎಂಥ ವಿಪರ್ಯಾಸ ನೋಡಿ.

ವಿಶ್ವ ಪರಿಸರ ದಿನದಂದೇ ಮರಗಳ ಮರಣಹೋಮ ನಡೆದಿದ್ದು, ಇದು ಅಭಿವೃದ್ಧಿಯೋ, ವಿನಾಶವೋ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.ಹುಳಿಯಾರು ಆಸ್ಪತ್ರೆ ಆವರಣದಲ್ಲಿ ಬಹಳಷ್ಟು ವರ್ಷಗಳಿಂದ ಜನಸಾಮಾನ್ಯರು ಹಾಗೂ ರೋಗಿಗಳಿಗೆ ಉತ್ತಮ ಗಾಳಿ ನೆರಳು ನೀಡುತ್ತ ಉಸಿರು ನೀಡುವ ಮರಗಳನ್ನು ಕಡಿಯಲಾಗಿದೆ. ಆಸ್ಪತ್ರೆಯ ಆವರಣದ ತಡೆಗೋಡೆಯ ಪಕ್ಕದ ಮರಗಳನ್ನು ಕಡಿಯಬೇಡಿ ಎಂದು ಬೇಡಿಕೊಂಡರೂ ಸಹ ಬಿಡದ ಮರಗಳ ಮಾರಣಹೋಮ ನಡೆಸಿದರು.

ಮರಗಳನ್ನು ಕಡಿಯಲು ನಿಮ್ಮ ಬಳಿ ಆದೇಶವಿದ್ದರೆ ಕೊಡಿ ಎಂದರೂ ಸಹ ಅದಕ್ಕೆ ಆದೇಶ ಕಾಪಿ ನೀಡಲಿಲ್ಲ. ಅರಣ್ಯ ಇಲಾಖೆಯ ಅಧಿಕಾರಿಗಳನ್ನು ದೂರವಾಣಿ ಕರೆ ಮಾಡಿ ಆದೇಶ ಪ್ರತಿ ಕೇಳಿದರೂ ಸಹ ಅವರೂ ಆದೇಶದ ಕಾಪಿ ಕಳಿಸದೆ ಬರಿ ಮಾತಲ್ಲಿ ಮರ ಕಡಿಯಲು ಹರಾಜು ಹಾಗಿದೆ ಎಂಬ ಉತ್ತರ ನೀಡಿದರು.