ಮಿಲಾಗ್ರಿಸ್ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ

| Published : Jun 15 2024, 01:10 AM IST

ಮಿಲಾಗ್ರಿಸ್ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು ಐಕ್ಯೂಎಸಿ ಸಹಯೋಗದಲ್ಲಿ ಇಕೋ ಕ್ಲಬ್ ಹಾಗೂ ಎನ್‌ಎಸ್‌ಎಸ್ ಘಟಕದ ವತಿಯಿಂದ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಕಲ್ಯಾಣಪುರ

ಇಲ್ಲಿನ ಮಿಲಾಗ್ರಿಸ್ ಕಾಲೇಜು ಐಕ್ಯೂಎಸಿ ಸಹಯೋಗದಲ್ಲಿ ಇಕೋ ಕ್ಲಬ್ ಹಾಗೂ ಎನ್‌ಎಸ್‌ಎಸ್ ಘಟಕದ ವತಿಯಿಂದ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅನಿಲ್ ದಾಂತಿ ಮಾತನಾಡಿ, ಮಾನವ ಸ್ವಾರ್ಥವು ಯುದ್ಧಕ್ಕಿಂತ ಹೆಚ್ಚು ಅಪಾಯಕಾರಿಯಾಗಿದೆ. ಪ್ಲಾಸ್ಟಿಕ್ ಬಳಕೆಯಿಂದ ಆಗುವ ತೊಂದರೆಗಳನ್ನು ವಿವರಿಸಿ, ಯುವಜನರು ಪರಿಸರವನ್ನು ಪೋಷಿಸಿ ಸಂರಕ್ಷಿಸಬೇಕು ಎಂದು ಕರೆನೀಡಿದರು.

ಕಾಲೇಜಿನ ಐಕ್ಯೂಎಸಿ ಸಂಯೋಜಕ ಡಾ.ಜಯರಾಮ ಶೆಟ್ಟಿಗಾರ್ ಮಾತನಾಡಿ, ಪ್ರತಿಯೊಬ್ಬರ ಒಳಿತಿಗಾಗಿ ಕಾಣುವ ಮತ್ತು ಕಾಣದ ಜೀವಿಗಳಿಗೆ ತಾಯಿ ಮತ್ತು ಮನೆಯಾಗಿರುವ ಭೂಮಿ ತಾಯಿಯನ್ನು ಪ್ರೀತಿಸಬೇಕು ಮತ್ತು ಕಾಳಜಿ ವಹಿಸಬೇಕು ಎಂದು ಹೇಳಿದರು.

ಕಾಲೇಜಿನಲ್ಲಿ ರಚಿಸಲಾದ ಮಿಯಾವಾಕಿ ಅರಣ್ಯದಲ್ಲಿ ಎನ್‌ಎಸ್‌ಎಸ್ ಸ್ವಯಂಸೇವಕರು ಗಿಡಗಳನ್ನು ನೆಟ್ಟು ಕಳೆ ಕಿತ್ತು ಶ್ರಮದಾನ ಮಾಡಿದರು.

ಎನ್‌ಎಸ್‌ಎಸ್ ಅಧಿಕಾರಿ ಅನುಪಮಾ ಜೋಗಿ, ಇಕೋ ಕ್ಲಬ್ ಸಂಚಾಲಕಿ ರೇಖಾ ಯು., ಪ್ರಾಧ್ಯಾಪಕರಾದ ಡಾ. ಸುರೇಖಾ ಭಟ್, ಶುಭಲತಾ, ಡಾ. ನಿತ್ಯಾನಂದ ಶೆಟ್ಟಿ, ಅಪರ್ಣಾ, ಕಾವ್ಯಾ ಪೈ, ಮಂಜುಳಾ, ಪ್ರತಿಮಾ, ಚಂದ್ರಿಕಾ, ಅಮೃತಾ ಲೂಯಿಸ್, ದುಲಾರಿ ಮೋಹನ್, ರವಿನಂದನ್ ಭಟ್ ಉಪಸ್ಥಿತರಿದ್ದರು.

ಬಿಎ ಪ್ರಥಮ ವರ್ಷದ ನಿಲೋಫರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಭೂಮಿಕಾ ವಂದಿಸಿದರು.