ಸಾರಾಂಶ
ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಎನ್‌ಎಸ್‌ಎಸ್ ಘಟಕ ಮತ್ತು ನೇಚರ್ ಕ್ಲಬ್ ‘ವಿಶ್ವ ಪರಿಸರ ದಿನ’ ಜಾಥಾ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಪರಿಸರ ರಕ್ಷಣೆ ಎಲ್ಲರ ಕರ್ತವ್ಯವಾಗಿದೆ ಎಂದು ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ.ರಘನಾಥ್ ಕೆ.ಎಸ್. ತಿಳಿಸಿದರು.ಅವರು ಕಾಲೇಜಿನ ಎನ್‌ಎಸ್‌ಎಸ್ ಘಟಕ ಮತ್ತು ನೇಚರ್ ಕ್ಲಬ್ ಆಯೋಜಿಸಿದ ‘ವಿಶ್ವ ಪರಿಸರ ದಿನ’ ಜಾಥಾ ಉದ್ಘಾಟಿಸಿ ಮಾತನಾಡಿದರು.
ಅಲ್ಲದೇ ಜಾಥಾದಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು ಎಂ.ಜಿ.ಎಂ. ಮೈದಾನದ ವರೆಗೂ ಪರಿಸರ ರಕ್ಷಣೆ ಘೋಷಣೆ ಕೂಗುತ್ತಾ ಮೈದಾನದ ಪರಿಸರದಲ್ಲಿ ಸಸಿಗಳನ್ನು ನೆಟ್ಟರು, ಅಲ್ಲದೇ ಕಾಲೇಜಿನ ಆವರಣದಲ್ಲೂ ಸಸಿಗಳನ್ನು ನೆಟ್ಟರು.ಜಾಥಾದಲ್ಲಿ ಕಾಲೇಜಿನ ನಿರ್ದೇಶಕಿ ಪ್ರೊ. ನಿರ್ಮಲಾ ಕುಮಾರಿ ಕೆ., ಪ್ರಾಧ್ಯಾಪಕರಾದ ಪ್ರೊ.ರೋಹಿತ್ ಎಸ್. ಅಮೀನ್, ಪ್ರೊ. ಸುರೇಖಾ ಕೆ., ಪ್ರೊ. ಪ್ರೀತಿ ಹರೀಶ್‌ರಾಜ್, ನೇಚರ್ ಕ್ಲಬ್‌ನ ಡಾ. ಶ್ರೀನಿವಾಸ್ ಪ್ರಸಾದ್ ಆರ್., ಪ್ರೊ.ಈರಪ್ಪ ಮೇದಾರ್, ಪ್ರೊ. ಚೈತ್ರಾ ಕುಮಾರಿ, ಪ್ರೊ.ಆಮೋಘ ಗಾಡ್ಕರ್, ಪ್ರೊ. ಆನ್ಸಿ ಪ್ಲೋರಾ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಕಾಲೇಜಿನ ಎನ್.ಎಸ್.ಎಸ್. ಅಧಿಕಾರಿ ಡಾ. ಸಿ.ಬಿ. ನವೀನ್ ಚಂದ್ರ ಸಂಯೋಜಿಸಿದ್ದರು. ಎನ್.ಎಸ್. ಎಸ್. ವಿದ್ಯಾರ್ಥಿ ಕಾರ್ಯದರ್ಶಿ ಭರತ್ ಹಾಗೂ ನೇಚರ್ ಕ್ಲಬ್ ವಿದ್ಯಾರ್ಥಿ ಕಾರ್ಯದರ್ಶಿ ಸೋನಾ ಜೇಮ್ಸ್ ಹಾಗೂ ಶ್ರೀ ಲಕ್ಷ್ಮೀ ಭಾಗವಹಿಸಿದ್ದರು.