ರೈತ ಸಂಘಟನೆಗಳಿಂದ ವಿಶ್ವ ರೈತರ ದಿನಾಚರಣೆ

| Published : Jan 20 2025, 01:33 AM IST

ಸಾರಾಂಶ

World Farmers' Day celebration by farmer organizations

-ಪ್ರಗತಿಪರ ರೈತರ ಪಾದಪೂಜೆ, ಸಂಘಟನೆಗಳ ಪ್ರಮುಖರಿಗೆ ಸನ್ಮಾನ

----

ಕನ್ನಡಪ್ರಭ ವಾರ್ತೆ ಯಾದಗಿರಿ

ನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಸಂಘಟನೆಯಿಂದ ವಿಶ್ವ ರೈತರ ದಿನ ಆಚರಿಸಲಾಯಿತು. ಮಹಲ್ ರೋಜಾದ ಮಲ್ಲಿಕಾರ್ಜುನ್ ಮುತ್ಯಾ ಮಹಾರಾಜ್ ಅವರು ಸಾನ್ನಿಧ್ಯವಹಿಸಿದ್ದರು. ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಗರಸಭೆ ಮಾಜಿ ಅಧ್ಯಕ್ಷೆ ನಾಗರತ್ನ ಅನಪುರ ಮತ್ತು ಬಸ್ಸುಗೌಡ ಬಿಳ್ಹಾರ್‌ ನೇಗಿಲ ಪೂಜೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಸೇನೆ ರಾಜ್ಯಾಧ್ಯಕ್ಷ ಶಾಂತಗೌಡ ಚನ್ನಪಟ್ಟಣ, ರಾಜ್ಯ ಉಪಾಧ್ಯಕ್ಷ ಲಕ್ಷ್ಮಿಕಾಂತ್ ಎ. ಪಾಟೀಲ್ ಮದ್ದರಕಿ, ಉತ್ತರ ಕರ್ನಾಟಕ ಅಧ್ಯಕ್ಷ ಮಲ್ಲು ಬಿ. ಯಾದಗಿರಿ, ಕಲ್ಯಾಣ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಭೀಮರೆಡ್ಡಿ ಯರಗೋಳ ವೇದಿಕೆಯಲ್ಲಿದ್ದರು. ನೇತೃತ್ವವನ್ನು ಜಿಲ್ಲಾಧ್ಯಕ್ಷ ಮಹಾವೀರ ಲಿಂಗೇರಿ ವಹಿಸಿದ್ದರು. ಈ ಸಂದರ್ಭದಲ್ಲಿ ವಿಶ್ವ ರೈತ ದಿನಾಚರಣೆ ಪ್ರಯುಕ್ತ ಪ್ರಗತಿಪರ ರೈತರಿಗೆ ಪಾದಪೂಜೆ ಮತ್ತು ಸರ್ವ ಸಂಘಟನೆಯ ಹೋರಾಟಗಾರರಿಗೆ ವಿಶೇಷ ಸನ್ಮಾನ ಜರುಗಿತು.

ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಪದಾಧಿಕಾರಿ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಕುಂಬಾರ್, ಜಿಲ್ಲಾ ಉಪಾಧ್ಯಕ್ಷ ಶುಭಾಷ್ ನಡುವಿನಕೆರಿ, ನಿಂಗಪ್ಪ ಗುಡಗುಡಿ, ಶ್ರೀನಿವಾಸ್ ಚಾಮನಹಳ್ಳಿ, ರವಿ ರಾಥೋಡ್, ಸೈದಪ್ಪ, ಭವಾನಿ ಶಂಕರ್ ಇದ್ದರು.

----

18ವೈಡಿಆರ್24

ಯಾದಗಿರಿ ನಗರದಲ್ಲಿ ರೈತ ಸಂಘ ಹಾಗೂ ರೈತ ಸೇನೆ ಸಂಘಟನೆಯ ವತಿಯಿಂದ ವಿಶ್ವ ರೈತರ ದಿನಾಚರಣೆ ಆಚರಿಸಲಾಯಿತು.