ಸಾರಾಂಶ
ಕೊಳ್ಳೇಗಾಲ ತಾಲೂಕಿನ ಮುಳ್ಳೂರು ಗ್ರಾಮ ಹೊರವಲಯದಲ್ಲಿ ಶಿವರಾವಳೇಶ್ವರ ಸ್ವಾಮಿ, ಮಹಾಗಣಪತಿ, ರಾಕಸಮ್ಮ ದೇವಿಗೆ ವಿಶೇಷ ಪೂಜೆ ಜರುಗಿತು. ಶಾಸಕ ಕೃಷ್ಣಮೂರ್ತಿ ಇನ್ನಿತರ ಗಣ್ಯರು ದೇಗುಲಕ್ಕೆ ಬೇಟಿ ನೀಡಿದರು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶಿವರಾವಳೇಶ್ವರ ಸ್ವಾಮಿ, ಪಟ್ಟಣದ ಇತಿಹಾಸ ಪ್ರಸಿದ್ಧ ಮರಳೇಶ್ವರ ದೇಗುಲದಲ್ಲಿ ರಾಕಸಮ್ಮ ದೇವಾಲಯ ಮತ್ತು ಮಹಾಗಣಪತಿ ದೇವಸ್ಥಾನದಲ್ಲಿ ಗುರುವಾರ ವಿಶೇಷ ಪೂಜೆ ಜರುಗಿತು.ಪಟ್ಟಣದ ಈಶ್ವರನ ದೇಗುಲದಲ್ಲಿ ರುದ್ರಾಭಿಷೇಕ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಇನ್ನಿತರ ಪೂಜಾ ಕೈಂಕರ್ಯಗಳು ಬೆಳಗ್ಗೆಯಿಂದ ರಾತ್ರಿತನಕ ನಡೆಯಿತು. ಅದೇ ರೀತಿ ಗುರುವಾರ ಪಟ್ಟಣದ ಹೊರವಲಯದ ಮುಳ್ಳೂರು ರಸ್ತೆಯಲ್ಲಿರುವ ದೇವಸ್ಥಾನದಲ್ಲಿ ಶಿವರಾವಳೇಶ್ವರ ಸ್ವಾಮಿ, ರಾಕಸಮ್ಮದೇವಿ, ಗಣಪತಿ ಸ್ವಾಮಿಗೆ ತೋಮಾಲೆ ಸೇವೆ ಮಾಡುವ ಮೂಲಕ ವಿಶೇಷ ಪೂಜೆ, ತಂಪು ಉತ್ಸವ ಸೇರಿದಂತೆ ಇನ್ನಿತರೆ ಸೇವಾ ಕೈಂಕರ್ಯಗಳು ಜರುಗಿತು.
ರಾಕಸಮ್ಮ ದೇವಸ್ಥಾನಕ್ಕೆ ಶಾಸಕ ಎ.ಆರ್.ಕೃಷ್ಣಮೂರ್ತಿ, ನಗರಸಭೆ ಅಧ್ಯಕ್ಷೆ ರೇಖಾ, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಮಾಜಿ ಅಧ್ಯಕ್ಷ ಬಸ್ತಿಪುರ ಶಾಂತರಾಜು ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ದೇವಸ್ಥಾನದ ಬಳಿ ಸಮುದಾಯದ ಭವನ ನಿರ್ಮಾಣ ಮಾಡಲು ನೆರವು ನೀಡುವಂತೆ ಮುಖಂಡರು ಶಾಸಕರಿಗೆ ಮನವಿ ಸಲ್ಲಿಸಿದರು.ರಾಕಸಮ್ಮ ದೇವಿಗೆ ವಾದ್ಯ ಸಮೇತ ತಂಬಿಟ್ಟು ತರುವ ಮೂಲಕ ದೇವಸ್ಥಾನ ಪ್ರದಕ್ಷಿಣೆ ಮಾಡಿ ತಂಪು ಸೇವೆ ಸಲ್ಲಿಸಿದರು. ಬಳಿಕ ದೇವಸ್ಥಾನಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಪೂಜಾ ಕೈಂಕರ್ಯಗಳನ್ನು ಪ್ರಧಾನ ಅರ್ಚಕ ಜಗದೀಶ್ ಶಾಸ್ತ್ರೀ ನೆರವೇರಿಸಿದರು.
ಈ ಸಂಧರ್ಭದಲ್ಲಿ ನಗರಸಭೆ ಮಂಜುನಾಥ್, ಧರಣೇಶ್, ನಾಗಣ್ಣ, ಪ್ರಕಾಶ್, ರಾಘವೇಂದ್ರ, ನಾಮನಿರ್ದೇಶನ ಸದಸ್ಯರು ದೇವಾನಂದ, ದೊಡ್ಡ ಯಜಮಾನ ಚಿಕ್ಕಮಾಳಿಗೆ, ಯಜಮಾನರಾದ ರಾಜಶೇಖರಮೂರ್ತಿ, ಶಿವಪ್ಪ,ಸನತ್ ಕುಮಾರ್, ಸಿದ್ದಾರ್ಥ, ಮಾಜಿ ಯಜಮಾನರು ಶಿವರಾಜು, ಸುರೇಶ್, ಮಹದೇವಸ್ವಾಮಿ, ಲಿಂಗರಾಜು, ಪ್ರಭು ಇನ್ನಿತರರಿದ್ದರು.