ಸಾರಾಂಶ
ರಾಮ,ಆಂಜನೇಯ ದೇವಸ್ಥಾನಗಳಲ್ಲಿ ಪೂಜೆ । ತಾಲೂಕಿನ ಹಲವೆಡೆ ಪ್ರಸಾದ ವಿತರಣೆ
ಕನ್ನಡಪ್ರಭ ವಾರ್ತೆ ಮಾಗಡಿಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ತಾಲೂಕಿನ ಪ್ರಮುಖ ಶ್ರೀರಾಮ ಹಾಗೂ ಆಂಜನೇಯ ಸ್ವಾಮಿ ಮಂದಿರದಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಪಟ್ಟಣದ ಕಲ್ಯಾಗೇಟ್ ನಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರದ ಪವಿತ್ರ ಮಂತ್ರಾಕ್ಷತೆ ಅಭಿಯಾನ ಸಮಿತಿಯಿಂದ ವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ, ಪ್ರಸಾದ ವಿನಿಯೋಗ, ಮಜ್ಜಿಗೆ, ಪಾನಕ ವಿತರಣೆ, ಅಯೋಧ್ಯೆ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ನೇರ ಪ್ರಸಾರವನ್ನು ದೊಡ್ಡ ಎಲ್ಇಡಿ ಪರದೆ ಮೂಲಕ ಪ್ರಸಾರ ಮಾಡಲಾಯಿತು.
ಸಂಜೆ ಆರ್ಯ ವೈಶ್ಯ ಸಮಾಜದಿಂದ ರಾಮಾರಾಧನೆ, ಹನುಮಾನ್ ವಿಲಾಸ ಶಾಲಾ ಕಿ ನಾಟಕ, ಹರಗುರು ಚರಮೂರ್ತಿಗಳಿಂದ ದೀಪೋತ್ಸವ ಹಾಗೂ ಪ್ರಸಾದ ವಿನಿಯೋಗ ನೆರವೇರಿಸಲಾಯಿತು.ಮಂತ್ರಾಕ್ಷತೆ ಅಭಿಯಾನ ಸಮಿತಿಯಿಂದ ತಾಲೂಕಿನಲ್ಲಿ ಒಟ್ಟು 300ಕ್ಕೂ ಹೆಚ್ಚು ಗ್ರಾಮಗಳಲ್ಲಿ 1250 ಕರಸೇವಕರು ಹಾಗೂ 250 ಮಹಿಳಾ ಕರಸೇವಕರಿಂದ 35 ಸಾವಿರ ಮನೆಗಳಿಗೆ ಮಂತ್ರಾಕ್ಷತೆ ವಿತರಿಸಲಾಗಿದ್ದು ಕರಸೇವಕರಾದ ಶಿವಕುಮಾರ್, ಶಿವಣ್ಣ, ವೀರೇಂದ್ರ ಕುಮಾರ್ ರವರನ್ನು ಸಮಿತಿಯಿಂದ ಸನ್ಮಾನಿಸಲಾಯಿತು.
108 ಲೀಟರ್ ಹಾಲಿನ ಅಭಿಷೇಕ:ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಮನ ಮೂರ್ತಿಗೆ ಬೆಳಗ್ಗೆ 108 ಲೀ. ಹಾಲಿನ ಅಭಿಷೇಕ ನೆರವೇರಿಸುವ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು ನಂತರ ಭಕ್ತರಿಗೆ ಕೋಸಂಬರಿ, ಪಾನಕ ವಿತರಿಸಲಾಯಿತು. ತಾಲೂಕಿನ ಕಲ್ಲೂರು ಆಂಜನೇಯ ಸ್ವಾಮಿ ದೇವಾಲಯ, ಕಲ್ಯಾ ಗ್ರಾಮದ ಶ್ರೀರಾಮ ಮಂದಿರ, ಅಗಲಕೋಟೆ ಹ್ಯಾಂಡ್ ಪೋಸ್ಟ್ ವೃತದಲ್ಲಿ, ಚಕ್ರಬಾವಿ ಗ್ರಾಮದ ಶ್ರೀರಾಮ ಮಂದಿರ, ಅರಳುಕುಪ್ಪೆ ಸೇರಿ ತಾಲೂಕಿನಾದ್ಯಂತ ರಾಮನ ಭಜನೆ, ಅನ್ನಸಂತರ್ಪಣೆ ಏರ್ಪಡಿಸಿ ರಾಮನ ಸ್ಮರಣೆ ಮಾಡಲಾಯಿತು.
------ಪೋಟೋ 22ಮಾಗಡಿ1: ಮಾಗಡಿಯ ಏಳು ಕುದುರೆ ಆಂಜನೇಯ ಸ್ವಾಮಿ ದೇವಸ್ಥಾನ ಸಮಿತಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ಧೂರಿಯಾಗಿ ರಾಮನ ಮೆರವಣಿಗೆ ನಡೆಸಲಾಯಿತು.
----ಫೋಟೋ 22ಮಾಗಡಿ2: ಮಾಗಡಿ ಪಟ್ಟಣದ ಕಲ್ಯಾಗೇಟ್ ನಲ್ಲಿ ಅಯೋಧ್ಯೆ ಶ್ರೀರಾಮ ಮಂದಿರ ಪವಿತ್ರ ಮಂತ್ರಾಕ್ಷತೆ ಅಭಿಯಾನ ಸಮಿತಿಯಿಂದ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
----ಫೋಟೋ 22ಮಾಗಡಿ3: ಮಾಗಡಿ ಪಟ್ಟಣದ ಏಳು ಕುದುರೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸ್ವಾಮಿಗೆ ವಿಶೇಷ ಬೆಣ್ಣೆ ಅಲಂಕಾರ ಮಾಡಲಾಯಿತು.