ದೇವಿ ಆರಾಧನೆ ಮಾಡಿ ಪಾವನರಾಗಿ: ಶಾಂತಲಿಂಗ ಸ್ವಾಮೀಜಿ

| Published : Sep 29 2025, 01:05 AM IST

ಸಾರಾಂಶ

ಅಡವೀಂದ್ರಸ್ವಾಮಿ ಮಠದಲ್ಲಿ ಕಳೆದ ಹಲವಾರು ವರ್ಷಗಳಿಂದ ನವರಾತ್ರಿಯ ಸಂದರ್ಭದಲ್ಲಿ ಅನ್ನಪೂರ್ಣೇಶ್ವರಿಯ ವಿಶೇಷ ಪೂಜೆಯೊಂದಿಗೆ ಶಕ್ತಿದೇವಿಯ ಆರಾಧನೆ ಮಾಡಲಾಗುತ್ತಿದ್ದು, ಪ್ರಸಕ್ತ ವರ್ಷ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಸದಾಶಿವಯ್ಯ ಮದರಿಮಠ ಅವರ ತಂಡದ ನೇತೃತ್ವದಲ್ಲಿ ಅದ್ಧೂರಿಯಾಗಿ ಆಚರಣೆ ಮಾಡುತ್ತಿರುವುದು ಶ್ಲಾಘನೀಯ.

ಗದಗ: ಪರಂಪರೆಯಂತೆ ನವರಾತ್ರಿಯ ಸಂದರ್ಭದಲ್ಲಿ ಶಕ್ತಿದೇವಿಯ ಆರಾಧನೆ ಮಾಡುವ ಮೂಲಕ ದೈವಿಶಕ್ತಿಯನ್ನು ಪಡೆದು ಪಾವನರಾಗಬೇಕು ಎಂದು ನರಗುಂದ ದೊರೆಸ್ವಾಮಿ ಮಠ ಹಾಗೂ ಶಿರೋಳ ತೋಂಟದಾರ್ಯ ಶಾಖಾಮಠದ ಶಾಂತಲಿಂಗ ಸ್ವಾಮಿಗಳು ತಿಳಿಸಿದರು.ನಗರದ ಅಡವೀಂದ್ರಸ್ವಾಮಿ ಮಠದಲ್ಲಿ ನಡೆದ ದಸರಾ ಮಹೋತ್ಸವ ಮತ್ತು ಶ್ರೀದೇವಿ ಪುರಾಣ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಅಡವೀಂದ್ರಸ್ವಾಮಿ ಮಠದಲ್ಲಿ ಕಳೆದ ಹಲವಾರು ವರ್ಷಗಳಿಂದ ನವರಾತ್ರಿಯ ಸಂದರ್ಭದಲ್ಲಿ ಅನ್ನಪೂರ್ಣೇಶ್ವರಿಯ ವಿಶೇಷ ಪೂಜೆಯೊಂದಿಗೆ ಶಕ್ತಿದೇವಿಯ ಆರಾಧನೆ ಮಾಡಲಾಗುತ್ತಿದ್ದು, ಪ್ರಸಕ್ತ ವರ್ಷ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಸದಾಶಿವಯ್ಯ ಮದರಿಮಠ ಅವರ ತಂಡದ ನೇತೃತ್ವದಲ್ಲಿ ಅದ್ಧೂರಿಯಾಗಿ ಆಚರಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು. ಈ ವೇಳೆ ಅಡವೀಂದ್ರ ಸ್ವಾಮಿಮಠದ ಧರ್ಮದರ್ಶಿ ಮಹೇಶ್ವರ ಸ್ವಾಮೀಜಿ ಅವರ ಸಮ್ಮುಖದಲ್ಲಿ ಲಿಂ. ಶಿವಮೂರ್ತೆಪ್ಪ ಎಸ್. ಬಳಿಗಾರ ಅವರ ಭಾವಚಿತ್ರವನ್ನು ಅನಾವರಣಗೊಳಿಸಲಾಯಿತು. ಶ್ರೀದೇವಿಗೆ ಹಾಗೂ ಮುತೈದೆಯರಿಗೆ ಅರಿಶಿಣ, ಕುಂಕುಮ, ಬಳೆ ಸೇವೆ ನೆರವೇರಿಸಲಾಯಿತು.ಗಣ್ಯ ಉದ್ದಿಮೆದಾರರಾದ ವಿನಾಯಕ ಪಾಟೀಲ ಹಾಗೂ ಬಸವರಾಜ ಶಿವಪ್ಪ ಅಂಗಡಿ ಅವರಿಗೆ ಶ್ರೇಷ್ಠ ಉದ್ಯಮಶ್ರೀ ಪ್ರಶಸ್ತಿ, ಕೆಇಬಿ ನಿವೃತ್ತ ಅಧಿಕಾರಿ ಜಿ.ಎಂ. ಯಾನಮಶೆಟ್ಟಿ ಅವರಿಗೆ ಸಮಾಜಸೇವಾ ರತ್ನ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು. ತೆರಿಗೆ ಸಲಹೆಗಾರ ಶ್ರೀಶೈಲ ಎಸ್. ಬಳಿಗಾರ ಅವರಿಗೆ ಗುರುಶ್ರೀ ರಕ್ಷೆ ಸನ್ಮಾನಿಸಲಾಯಿತು. ಎಸ್.ಪಿ. ಸಂಶಿಮಠ, ಸದಾಶಿವಯ್ಯ ಮದರಿಮಠ, ಶರಣಬಸಪ್ಪ ಗುಡಿಮನಿ, ಸುವರ್ಣಾ ಮದರಿಮಠ ಮುಂತಾದವರು ಇದ್ದರು. ವಿಜಯಲಕ್ಷ್ಮೀ ಹೊಸಳ್ಳಿಮಠ ಸ್ವಾಗತಿಸಿದರು. ವಿ.ಎಂ. ಕುಂದ್ರಾಳಹಿರೇಮಠ ನಿರೂಪಿಸಿದರು. ಶ್ರೀಧರ ಧರ್ಮಾಯತ ವಂದಿಸಿದರು.