ಗಂಗಾವತಿ ಭೀಮಪ್ಪನವರ ಸರ್ಕಾರಿ ಪ.ಪೂ.ಕಾಲೇಜ್‌ನ ಆವರಣದಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ರಾಮನಗರದ ರೈತರ ಓಣಿಯ ನಾಣಿಕೆರೆ ದೈವಸ್ಥರಿಂದ ಶನಿವಾರ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.
ಹಗರಿಬೊಮ್ಮನಹಳ್ಳಿ: ಪಟ್ಟಣದ ವೆಂಕಟೇಶ್ವರ ಜಾತ್ರೆಯ ಪ್ರಮುಖ ಆಕರ್ಷಣೆಯಾದ ಕುಸ್ತಿ ಪಂದ್ಯಾವಳಿಗಳು ಶನಿವಾರ ತಡ ರಾತ್ರಿಯವರೆಗೂ ನಡೆದು ಕುಸ್ತಿ ಪಟುಗಳ ಸೆಣಸಾಟ ನೋಡುಗರ ಮೈ ನವಿರೇಳಿಸುವಲ್ಲಿ ಯಶಸ್ವಿಯಾದವು.
ಗಂಗಾವತಿ ಭೀಮಪ್ಪನವರ ಸರ್ಕಾರಿ ಪ.ಪೂ.ಕಾಲೇಜ್‌ನ ಆವರಣದಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ರಾಮನಗರದ ರೈತರ ಓಣಿಯ ನಾಣಿಕೆರೆ ದೈವಸ್ಥರಿಂದ ಶನಿವಾರ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.ಈ ಬಾರಿಯ ಕುಸ್ತಿ ಪಂದ್ಯಾವಳಿಗೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪಟುಗಳನ್ನು ಆಹ್ವಾನಿಸಲಾಗಿತ್ತು. ಸಂಜೆ ಸೂರ್ಯ ಅಸ್ತಮಿಸಿ ನೀಲ ನಭ ರಂಗೇರುತ್ತಿದ್ದಂತೆಯೇ ಕುಸ್ತಿ ಕಣವೂ ರಂಗೇರಿತ್ತು. ಕಣದ ಸುತ್ತ ನೆರೆದಿದ್ದ ಸಹಸ್ರಾರು ಸಂಖ್ಯೆಯಲ್ಲಿದ್ದ ಜನರು ಪೈಲ್ವಾನರ ಪಟ್ಟುಗಳನ್ನು ತದೇಕ ಚಿತ್ತದಿಂದ ನೋಡುತ್ತಾ ಶಿಳ್ಳೆ ಕೇಕೇ ಹೊಡೆಯುತ್ತಾ ಕುಸ್ತಿ ಪಟುಗಳನ್ನು ನಿರಂತರವಾಗಿ ಹುರಿದುಂಬಿಸಿದರು.
ಮಹಾರಾಷ್ಟ್ರದ ಪುಣೆಯ ಚಾಂಪಿಯನ್ ಸತೀಶ್ ಮುದ್ದೆಯವರು, ಕಜಕಿಸ್ತಾನದ ಕಜಕಿ ಚಾಂಪಿಯನ್ ದೌಲೆಟಿಯಾರ್ ಅವರನ್ನು ಕೇವಲ ೧೦ ನಿಮಿಷದಲ್ಲಿ ಚಿತ್ ಮಾಡಿದರೆ, ಎರಡನೇ ಪಂದ್ಯದಲ್ಲಿ ಬ್ರೆಜಿಲ್ ದೇಶದ, ಬ್ರೆಜಿಲಿಯನ್ ಚಾಂಪಿಯನ್ ಫ್ರೇಡೆಲಾ ಲೀಮಾರವರು, ಹರಿಯಾಣ ಕೇಸರಿ ವಿಜೇತ ಪೈಲ್ವಾನ್ ಹರ್ಷ್ ಕುಮಾರ ಚೌದ್ರಿ ಅವರನ್ನು ಕ್ಷಣದಲ್ಲಿ ಮಣಿಸಿದರು.ಇಂದೋರ್‌ನ ಆದಾಯ ತೆರಿಗೆ ಇಲಾಖೆಯ ಅಧಿಕಾರಿ ಮುದಾಶೀರ್ ಮೂಸಾ, ಪಂಜಾಬ್‌ನ ಅಮಿತ್ ಶರ್ಮಾ ಅವರನ್ನು ಕೆಲವೇ ನಿಮಿಷದಲ್ಲಿ ಸೋಲಿಸಿ ನಗೆ ಬೀರಿದರು. ಇವರಿಬ್ಬರ ಕಾದಾಟ ಕುಸ್ತಿ ಪ್ರೇಮಿಗಳನ್ನು ನಿಂತಲ್ಲೇ ಕುಣಿದು ಕುಪ್ಪಳಿಸುವಂತೆ ಮಾಡಿದರು. ದಾವಣಗೆರೆಯ ಗೀರೀಶ್ ಅವರು ಕೊಲ್ಲಾಪುರದ ರಾಜ್‌ಪೂವಾರ್ ಅವರನ್ನು ಬರೋಬ್ಬರಿ ೧೫ನಿಮಿಷಗಳ ಕಾದಾಟದಲ್ಲಿ ಮಣಿಸಿ ಹೇಷಾರವಗೈದರು.ರಾಣಿಬೆನ್ನೂರಿನ ಕಿರಣ್ ಅವರು ಪಂಜಾಬ್‌ನ, ರೂಪೇಶ್ ಪಾಟೀಲ್‌ರನ್ನು ಸೋಲಿಸಿದರು. ಮಹಾರಾಷ್ಟçದ ಸೌರಾದ್ ಮತ್ತು ಹರಪನಹಳ್ಳಿಯ ಇರ್ಷಾದ್ ನಡುವೆ ನಡೆದ ಕದನ ಸಮಬಲ ಕಾಯ್ದುಕೊಂಡಿತು. ಹರಪನಹಳ್ಳಿಯ ಕೆಂಚಪ್ಪ ಕೂಡ ಗೆಲುವಿನ ನಗೆ ಬೀರಿದರು.
ನಾಣಿಕೇರಿಯ ಮುಖಂಡರಾದ ಬಾರಿಕರ ಬಾಪೂಜಿ, ಪತ್ರಕರ್ತ ಹುಳ್ಳಿ ಪ್ರಕಾಶ್, ತಿಗರಿ ಮಾರುತಿ, ಮಡಿವಾಳರ ಹುಲುಗಪ್ಪ, ಮಡಿವಾಳರ ಪ್ರಕಾಶ್, ಬಿ.ಸೋಮಣ್ಣ, ಗರಗದ ಪ್ರಕಾಶ್, ಹುಗ್ಗಿ ಹುಲುಗಪ್ಪ, ಹನುಮೇಶ್, ಕುರುಬರ ಬಸವರಾಜ, ದಾದಮ್ಮನವರ ಬಸವರಾಜ, ಬಡೆಲಡಕಿ ಕೃಷ್ಣಪ್ಪ, ಪೇಂಟರ್ ಬಾಬು ಮತ್ತು ಮುಗುಲಿ ಕನಕಪ್ಪ, ಅರಳಿಹಳ್ಳಿ ರಾಮಚಂದ್ರಪ್ಪ, ಕುರುಬರ ನಾಗಪ್ಪ, ಮರಡಿ ಯಮುನಪ್ಪ ನಿರ್ಣಾಯಕರಾಗಿದ್ದರು.