ಕೋರಣೇಶ್ವರ ಜಾತ್ರೆಯಲ್ಲಿ ಗಡಿನಾಡು ಪೈಲ್ವಾನರ ಜಂಗಿ ಕುಸ್ತಿ

| Published : May 20 2024, 01:32 AM IST

ಸಾರಾಂಶ

ಕೋರಣೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದ ಕರ್ನಾಟಕ, ಮಹಾರಾಷ್ಟ್ರ ಗಡಿನಾಡಿನ ಪ್ರಸ್ತಿದ್ಧ ಪೈಲ್ವಾನರಿಂದ ನಡೆದ ಜಿದ್ದಾ ಜಿದ್ದಿನ ಪಂದ್ಯಾವಳಿ ಕುಸ್ತಿ ಪ್ರೀಯರ ಗಮನ ಸೆಳೆಯಿತು.

ಕನ್ನಡಪ್ರಭ ವಾರ್ತೆ ಆಳಂದ

ತಾಲೂಕಿನ ಪ್ರಸಿದ್ಧ ಜಾತ್ರೆಯಾದ ಕೋರಣೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದ ಕರ್ನಾಟಕ, ಮಹಾರಾಷ್ಟ್ರ ಗಡಿನಾಡಿನ ಪ್ರಸ್ತಿದ್ಧ ಪೈಲ್ವಾನರಿಂದ ನಡೆದ ಜಿದ್ದಾ ಜಿದ್ದಿನ ಪಂದ್ಯಾವಳಿ ಕುಸ್ತಿ ಪ್ರೀಯರ ಗಮನ ಸೆಳೆಯಿತು.

ಕುಸ್ತಿಯಲ್ಲಿ ವಿವಿಧ ಭಾಗಗಳಿಂದ 100ಕ್ಕೂ ಹೆಚ್ಚು ಪೈಲ್ವಾನರು ಭಾಗವಹಿಸಿ ತಮ್ಮ ಭರ್ಜರಿ ಪ್ರದರ್ಶನ ನೀಡಿದರು. ಅಲ್ಲದೆ ಗ್ರಾಮಸ್ಥರು ಸೇರಿದಂತೆ ನೆರೆಹೊರೆಯ ಗ್ರಾಮಗಳಿಂದ ಆಗಮಿಸಿದ್ದ ಕುಸ್ತಿ ಪ್ರೀಯರು ಕುಸ್ತಿ ವೀಕ್ಷಿಸಿ ಇದೇ ಮೊದಲು ಬಾರಿಗೆ ಅತ್ಯುತ್ತಮ ಕುಸ್ತಿ ಪಂದ್ಯಾವಳಿ ಜರುಗಿದೆ ಎಂದು ಸಾಲೇಗಾಂವ ಚಂದುರಾಯ ಕಂಠೆಕೂರೆ ಮತ್ತು ರಾಜು ವಾಡೆ ಹೇಳಿದ್ದಾರೆ.

ಕುಸ್ತಿ ವಿಜೇತ ಪೈಲ್ವಾನರಿಗೆ 111 ರು.ಗಳಿಂದ 11 ಸಾವಿರ ರು.ಗಳವರೆಗೆ ಸರಣಿಯಾಗಿ ಬಹುಮಾನ ನೀಡಲಾಯಿತು. ಕೊನೆಯ ಕುಸ್ತಿ ಎರಡು ತಂಡಗಳಲ್ಲಿ 10 ಸಾವಿರ ರೂಪಾಯಿ ಬಹುಮಾನದ ಸ್ಪಧೆಯಲ್ಲಿ ಮಹಾರಾಷ್ಟ್ರದ ಸದಲಾಪೂರದ ವಿಕಾಸ ಬನಸೊಡೆ ಹಾಗೂ ಮಂಗಳವೇಡ ಗ್ರಾಮದ ಸಾರಪ ಘೋಡಕೆ ಪೈಲ್ವಾನರ ಭರ್ಜರಿ ಪ್ರದರ್ಶನದಲ್ಲಿ ವಿಜೇತರಿಗೆ ಬಹುಮಾನ ನೀಡಲಾಯಿತು.

15 ಸಾವಿರ ರು.ಗಳ ಬಹುಮಾನದ ಕೊನೆಯ ಕುಸ್ತಿ ಮಂಗಳವೇಡ ಬೀರು ಬನಸೋಡೆ ಮತ್ತು ವಳಗಾಂವ ವಾಡಿಯ ಜೀವನ ಭುಜಬಳ ನಡುವೆ ಕುಸ್ತಿಯ ಬಹುಹೊತ್ತು ನಡೆದಾಗ ಕೊನೆಯಲ್ಲಿ ಸಮಗೊಳಿಸಿ ಬಹುಮಾನ ಹಂಚಲಾಯಿತು.

ಟ್ರಸ್ಟ್ ಕಮೀಟಿ ಅಧ್ಯಕ್ಷ ಭೀಮರಾವ್ ಢಗೆ, ಉಪಾಧ್ಯಕ್ಷರಾದ ಅಶೋಕ ಸಾವಳೇಶ್ವರ ಮತ್ತು ಕರಬಸಪ್ಪ ಸುಲ್ಯಾನಪೂರೆ, ಹಿರಿಯ ಶಿವಲಿಂಗಪ್ಪ ಬಂಗರಗೆ, ಕರಬಸಪ್ಪ ಸುಲ್ತಾನಪೂರೆ, ಮಲ್ಲಿನಾಥ ಹೆಬಳಿ, ಪ್ರಮುಖ ಸಂಜೀವನ್ ದೇಶಮುಖ, ಶಿವಬಸಪ್ಪ ಶಿವಶಟ್ಟಿ, ಮಹಾದೇವ ಎಸ್. ವಾಡೆ, ಮಲ್ಲಿನಾಥ ಎನ್. ಹೆಬಳೆ, ವಸಂತ ಈ ಬಂಗರಗೆ, ಗಾಂಧಿ ಕೆ. ಸುಲ್ತಾನಪುರ ಸೇರಿದಂತೆ ಅನೇಕ ಹಿರಿಯ ಮತ್ತು ಕಿರಿಯ ಮುಖಂಡರ ನೇತೃತ್ವದಲ್ಲಿ ಕುಸ್ತಿ ಪಂದ್ಯ ಜರುಗಿತು.

ಜಾತ್ರೆಯಲ್ಲಿ ಅಂಗಡಿ ಮುಗ್ಗಂಟು ತೆರೆದುಕೊಂಡಿದ್ದು ವ್ಯಾಪಾರ ವೈಹಿವಾಟು ಮಕ್ಕಳ ಆಟಿಕೆ ಸಾಮಾನು ಖರೀದಿ ಭರ್ಜರಿಯಾಗಿದೆ. ಜಾತ್ರೆಗೆ ಆಗಮಿಸಿದ್ದ ಭಕ್ತಾದಿಗಳಿಗೆ ವಾರಗಟ್ಟಲೆ ನಿರಂತರ ದಾಸೋಹ ದೇವರ ದರ್ಶನಕ್ಕೆ ಅವಕಾಶ ಜಾತ್ರೆ ವಿಶೇತೆಯಿಂದ ಕೂಡಿತು.