ನಾಟಕವು ದೇವರ ಮೇಲೆ ನಂಬಿಕೆ ಮುಖ್ಯ ಆದರೆ ಮೂಢನಂಬಿಕೆಯಲ್ಲ ಎಂಬುದನ್ನು ಸಾರುತ್ತದೆ.
ಕನ್ನಡಪ್ರಭ ವಾರ್ತೆ ಮೈಸೂರು
ಸಂಚಲನ ಮೈಸೂರು ದಶಮಾನೋತ್ಸವದ ನಾಟಕೋತ್ಸವದ 4ನೇ ದಿನವಾದ ಮಂಗಳವಾರ ಮಹಾಜನ ಕಾಲೇಜಿನ ಸಾರಂತ ರಂಗ ತಂಡವು ಊರ ಸುಟ್ಟರೂ ಹನುಮ್ಮಪ್ಪ ಹೊರಗ ನಾಟಕವನ್ನು ಮನೋಜ್ಞವಾಗಿ ಅಭಿನಯಿಸಿದರು.ನಗರದ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಹನುಮಂತ ಹಾಲಿಗೆರೆ ರಚನೆಯ ಕೆ.ಆರ್. ಸುಮತಿ ನಿರ್ದೇಶನದಲ್ಲಿ ಕಾಲೇಜು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು. ನಾಟಕವು ದೇವರ ಮೇಲೆ ನಂಬಿಕೆ ಮುಖ್ಯ ಆದರೆ ಮೂಢನಂಬಿಕೆಯಲ್ಲ ಎಂಬುದನ್ನು ಸಾರುತ್ತದೆ. ಹನುಮ ಎಂಬ ದೇವರ ವಿಗ್ರಹದ ಪ್ರತಿಷ್ಠಾಪನೆಗಾಗಿ ಎರಡು ಊರುಗಳ ಮಧ್ಯ ಜರಗುವ ಜಗಳ ಕಿತ್ತಾಟಗಳನ್ನು ಕಲಾವಿದರು ಸುಂದರವಾಗಿ ಅಭಿನಯಿಸಿ ತೋರಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ಸಾಮಾಜಿಕ ಹೋರಾಟಗಾರ ಅಹಿಂದ ಜವರಪ್ಪ, ಬಿಜಿಎಸ್ ಕಾಲೇಜಿನ ಪ್ರಾಂಶುಪಾಲ ಡಾ. ನಾಗರಾಜು, ರಂಗಕರ್ಮಿಗಳಾದ ಸುರೇಶ್ ಬಾಬು, ಕೆ.ಆರ್. ಸುಮತಿ, ದೀಪಕ್ ಮೈಸೂರು ಮೊದಲಾದವರು ಇದ್ದರು.