ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಇದೇ ಮಾರ್ಚ್ ತಿಂಗಳಲ್ಲಿ ನಡೆದಿದ್ದ, 2023-24 ನೇ ಸಾಲಿನ ದ್ವಿತೀಯ ಪಿ.ಯು.ಸಿ ಫಲಿತಾಂಶ ಬುಧವಾರ ಪ್ರಕಟಗೊಂಡಿದ್ದು, ಇಲ್ಲಿನ ಪ್ರತಿಷ್ಠಿತ ಶ್ರೀರಾಚೋಟಿ ವೀರಣ್ಣ (ಆರ್.ವಿ.) ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮೂಲಕ ಪಾಲಕರು, ಕಾಲೇಜಿಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.ಒಟ್ಟು ಪರೀಕ್ಷೆಗೆ ಹಾಜರಾದ ವಿಜ್ಞಾನ ವಿಭಾಗದ 46 ವಿದ್ಯಾರ್ಥಿಗಳಲ್ಲಿ, ಉತ್ತಮ ಶ್ರೇಣಿ (ಡಿಸ್ಟಿಂಕ್ಷನ್) 14, ಪ್ರಥಮ ಶ್ರೇಣಿಯಲ್ಲಿ -25 ಹಾಗೂ ದ್ವಿತೀಯ ಶ್ರೇಣಿಯಲ್ಲಿ 6 ವಿದ್ಯಾರ್ಥಿಗಳು ಸೇರಿದಂತೆ, ಒಟ್ಟು ಕಾಲೇಜಿನ ಶೇ.98 ಫಲಿತಾಂಶ ವಿಜ್ಞಾನ ವಿಭಾಗದಲ್ಲಿ ಪಡೆದುಕೊಂಡಿರುತ್ತಾರೆ.
ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕರಿಷ್ಮಾ ರಾಜು ರಾಠೋಡ, 600ಕ್ಕೆ 558 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದರೆ, ವಾಣಿಜ್ಯ ವಿಭಾಗದಲ್ಲಿ ಒಟ್ಟು ಹಾಜರಾದ 20 ವಿದ್ಯಾರ್ಥಿಗಳಲ್ಲಿ, ಉತ್ತಮ ಶ್ರೇಣಿ (ಡಿಸ್ಟಿಂಕ್ಷನ್)-7, ಪ್ರಥಮ ಶ್ರೇಣಿಯಲ್ಲಿ - 12 ಒಟ್ಟು ಶೇಕಡಾ 95 ಫಲಿತಾಂಶ ವಾಣಿಜ್ಯ ವಿಭಾಗದಲ್ಲಿ ಪಡೆದುಕೊಂಡಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ ವಂಶಿಕಾ 562 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿರುತ್ತಾಳೆ.ಅದರಂತೆ, ಇದೇ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಸಕೀನಾ ಸಬಾ ಸಿದ್ಧೀಕಿ ಶೇ.92.83 ರಷ್ಟು, ಅಶ್ವಿನಿ ಹಾಗೂ ಚೇತನ್ ಶೇ.91.33 ರಷ್ಟು, ಪೂಜಾ 91.16 ರಷ್ಟು, ಶೇಖ್ ಸಾಬಿರ ಅಲಿ ಶೇ.91 ರಷ್ಟು, ರಾಜೇಶ ಚವ್ಹಾಣ್ ಶೇ. 90.16 ರಷ್ಟು, ರಾಧಾ ಶೇ.89.33 ರಷ್ಟು, ದೀಪ್ತಿ ಶೇ.88.83 ರಷ್ಟು, ಕರಿಷ್ಮಾ ಬಸು ಶೇ. 87.5, ಪಿಂಕಿ ಶೇ.87.5, ಶೃತಿ ಶೇ. 86.83 ರಷ್ಟು, ನಿತಿನ್ ನಾರಾಸಿಂಗ್ ಪವಾರ್ ಶೇ. 85.56 ರಷ್ಟು ಹಾಗೂ ಸೈಯ್ಯದ್ ಅದೀಬ್ -ಉರ್- ರೆಹಮಾನ್ ಶೇ. 85. 5ರಷ್ಟು ಅಂಕಗಳ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಈಶ್ವರ ಶೇ. 87.83, ಅನುಷಾ ಶೇ. 87.16, ವಿಜಯಲಕ್ಷ್ಮೀ ಶೇ. 87, ಶರತಕುಮಾರ ಶೇ. 88.83, ಪ್ರತಿಭಾ ಶೇ. 88.16 ಹಾಗೂ ಪವಿತ್ರಾ ಶೇ. 85 ರಷ್ಟು ಅಂಕಗಳ ಪಡೆದಿದ್ದಾರೆ.ವಿದ್ಯಾರ್ಥಿಗಳ ಉತ್ತಮ ಫಲಿತಾಂಶದ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಆರ್. ವಿ. ವಿದ್ಯಾಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಕಮಲಾ ಎನ್. ದೇವರಕಲ್, ಆಡಳಿತ ಮಂಡಳಿ, ಪ್ರಾಚಾರ್ಯರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.