ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಶರಣ ಸಾಹಿತ್ಯ ಪರಿಷತ್ತು ತನ್ನ ಉದ್ದೇಶಗಳನ್ನು ಪ್ರಸಾರ ಮಾಡಬೇಕು ಎಂದು ಬಸವಕುಮಾರ ಮಹಾಸ್ವಾಮಿಗಳು ಕಿವಿ ಮಾತು ಹೇಳಿದರು.ಅವರು ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಡಾ. ಸಿದ್ಧರಾಮ ಬೆಲ್ದಾಳ ಶರಣರ ಸಮ್ಮೆಳನಾಧ್ಯಕ್ಷತೆಯಲ್ಲಿ ನಡೆದ 13ನೇ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಯಾದಗಿರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಯಾದಗಿರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ಧಪ್ಪ ಎಸ್. ಹೊಟ್ಟಿ ಮಾತನಾಡಿ, ಸಮ್ಮೇಳನದಲ್ಲಿ ಚಿಂತನಾಗೋಷ್ಠಿ, ಶರಣರು ನಡೆದು ಬಂದ ನಾಟಕ, ಬಸವಣ್ಣನವರ ನಾಟಕ ಪ್ರದರ್ಶನ, ಚಿತ್ರದುರ್ಗ ಶ್ರೀ ಮಠದ ಜಯದೇವ ಮಹಾಸ್ವಾಮಿಗಳ ಕುರಿತ ನಾಟಕವನ್ನು ಅದ್ಭುತವಾಗಿ ಪ್ರದರ್ಶಿಸಿದ್ದಾರೆ ಎಂದು ಹೇಳಿದರು.ಶಸಾಪ ಜಿಲ್ಲಾ ಗೌರವ ಅಧ್ಯಕ್ಷ ಗುರಮಠಕಲ್ ಖಾಸಾಮಠದ ಸ್ವಾಮೀಜಿ, ಡಾ. ಭೀಮರಾಯ ಲಿಂಗೇರಿ. ಡಾ. ಎಸ್. ಎಸ್. ನಾಯಕ. ಬಸವರಾಜ ಅರಳಿ ಮೋಟ್ನಳ್ಳಿ. ಆರ್. ಮಹಾದೇವಪ್ಪ ಅಬ್ಬೆತುಮಕೂರ, ಸೋಮಶೇಖರ್ ಮಣ್ಣೂರ, ನಾಗೇಂದ್ರ ಜಾಜಿ, ನೂರಂದಪ್ಪ ಲೇವಡಿ, ವೀರಭದ್ರಯ್ಯ ಜಾಕಾಮಠ, ಚೆನ್ನಯ್ಯ ಸ್ವಾಮಿ ಮಳಮಗಿ ಮಠ, ಶರಣಪ್ಪ ಗುಳಗಿ, ಈಶಪ್ಪಗೌಡ ಮಾಲಿ ಪಾಟೀಲ, ಅಯ್ಯಣ್ಣಗೌಡ ಕ್ಯಾಸಪನಳ್ಳಿ, ಸ್ವಾಮಿದೇವ ದಾಸನಕೇರಿ, ಶೇಖರ ಅರಳಿ, ಸೂರ್ಯಕಾಂತ ಕರದಳ್ಳಿ, ನಾಗಪ್ಪ ಸಜ್ಜನ. ಚೆನ್ನಪ್ಪ ಸಾಹುಕಾರ ಠಾಣಗುಂದಿ ಇದ್ದರು.
----------ಫೋಟೊ: 13ನೇ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಆಯೋಜಿಸಿದ್ದ ಚಿತ್ರದುರ್ಗ ಶ್ರೀ ಮಠದ ಬಸವಕುಮಾರ ಮಹಾಸ್ವಾಮಿಗಳಿಗೆ ಯಾದಗಿರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಸನ್ಮಾನಿಸಲಾಯಿತು.
31ವೈಡಿಆರ್11