ಎಂಡಿಎಯಲ್ಲಿ ನಡೆದಿರುವ ಹಗರಣದ ತನಿಖೆ ಸಿಬಿಐಗೆ ವಹಿಸಲು ಯದುವೀರ್ ಒತ್ತಾಯ

| Published : Jul 10 2024, 12:40 AM IST

ಎಂಡಿಎಯಲ್ಲಿ ನಡೆದಿರುವ ಹಗರಣದ ತನಿಖೆ ಸಿಬಿಐಗೆ ವಹಿಸಲು ಯದುವೀರ್ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

, ಈಗಾಗಲೇ ಈ ಪ್ರಕರಣವನ್ನು ಸಿಬಿಐಗೆ ವಹಿಸಲು ತಿಳಿಸಿದ್ದೇನೆ. ಈ ಪ್ರಕರಣ ತುಂಬಾ ಗಂಭೀರವಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಎಂಡಿಎ) ನಡೆದಿರುವ ಹಗರಣದ ತನಿಖೆಯನ್ನು ರಾಜ್ಯ ಸರ್ಕಾರವು ಸಿಬಿಐಗೆ ವಹಿಸಲಿ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಒತ್ತಾಯಿಸಿದರು.

ಮೈಸೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಈ ಪ್ರಕರಣವನ್ನು ಸಿಬಿಐಗೆ ವಹಿಸಲು ತಿಳಿಸಿದ್ದೇನೆ. ಈ ಪ್ರಕರಣ ತುಂಬಾ ಗಂಭೀರವಾಗಿದೆ. ಇದರ ಜೊತೆಗೆ ಅನೇಕ ಪ್ರಭಾವಿಗಳ ಹೆಸರು ಕೂಡ ಕೇಳಿ ಬಂದಿದೆ. ಹೀಗಾಗಿ, ಈ ಪ್ರಕರಣವನ್ನು ನಿಸ್ಪಕ್ಷಪಪಾತವಾಗಿ ತನಿಖೆ ಮಾಡಬೇಕು ಎಂದರು.

ನಾವು ಕೂಡ ಇದರ ಬಗ್ಗೆ ಧ್ವನಿ ಎತ್ತುತ್ತೇವೆ. ಎಂಡಿಎ ಇರೋದು ಸಾರ್ವಜನಿಕರ ಒಳಿತಿಗಾಗಿ. ನಿವೇಶನ ವಂಚಿತ ಜನರಿಗೆ ನಿವೇಶನ ಕೊಡುವುದಕ್ಕೆ. ನಾನು ಎಂಡಿಎ ಸಭೆಯಲ್ಲಿ ಭಾಗಿಯಾದಾಗ ಇದರ ಬಗ್ಗೆ ಮಾತನಾಡುತ್ತೇನೆ ಎಂದು ಅವರು ತಿಳಿಸಿದರು.