ಸುರತ್ಕಲ್ ನ ತಡಂಬೈಲ್ ನಲ್ಲಿ ನಡೆದ ತಡಂಬೈಲ್ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿಯ ದಶಮಾನೋತ್ಸವ ಸಂಭ್ರಮಾಚರಣೆ ಸಮಾರೋಪ ಕಾರ್ಯಕ್ರಮದಲ್ಲಿ ಆಶೀರ್ವಚನ
ಮೂಲ್ಕಿ: ತಡಂಬೈಲ್ ನ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿ 10 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದು ಯಕ್ಷ ಗುರು ವಾಸುದೇವರಾವ್ ಹಾಗೂ ಅವರ ತಂಡ ಸಾಧನೆಯ ಮೇರು ಶಿಖರವನ್ನು ತಲುಪಿದೆ. ಇಳಿ ವಯಸ್ಸಿನಲ್ಲೂ ಯಕ್ಷಕಲಾ ಸೇವೆ ಮಾಡುತ್ತಿರುವುದು ಶ್ಲಾಘನೀಯ ಎಂದು ಚಿತ್ರಾಪುರ ಮಠದ ಶ್ರೀ ವಿದ್ಯೆಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ಸುರತ್ಕಲ್ ನ ತಡಂಬೈಲ್ ನಲ್ಲಿ ನಡೆದ ತಡಂಬೈಲ್ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿಯ ದಶಮಾನೋತ್ಸವ ಸಂಭ್ರಮಾಚರಣೆ ಸಮಾರೋಪ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ಪ್ರೊ. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದು, ಈ ಸಂದರ್ಭ ತಂಡದ ಸ್ಥಾಪಕ ಸದಸ್ಯೆ ಅನುರಾಘವೇಂದ್ರ ರಾವ್, ಯಕ್ಷಗಾನ ಕಲಾಪೋಷಕರಾದ ಶಕುಂತಲಾ ರಮಾನಂದ ಭಟ್ ಅವರನ್ನು ಕಲಾ ಕ್ಷೇತ್ರಕ್ಕೆ ನೀಡಿದ ಸೇವೆಗಾಗಿ ಸನ್ಮಾನಿಸಲಾಯಿತು. ಯಕ್ಷ ಗುರು ಎಸ್. ವಾಸುದೇವ ರಾವ್, ಮಂಡಳಿ ಅಧ್ಯಕ್ಷೆ ಸುಲೋಚನಾ ವಿ. ರಾವ್ ಅವರಿಗೆ ಮಂಡಳಿ ಸದಸ್ಯರು ಗುರುವಂದನೆ ಸಲ್ಲಿಸಿದರು. ಇಡ್ಯ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರ ರಮಾನಂದ ಭಟ್, ರಾಜ್ಯ ಮಹಿಳಾ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ, ರಾಜ್ಯ ಯಕ್ಷಗಾನ ಅಕಾಡೆಮಿ ಸದಸ್ಯರಾಜೇಶ್ ಕುಳಾಯಿ, ಸೀತಾರಾಮ ಆಚಾರ್ಯ ಉಪಸ್ಥಿತರಿದ್ದರು. ವೃಂದಾ ಕೊನ್ನಾರ್ ಕಾರ್ಯಕ್ರಮ ನಿರೂಪಿಸಿದರು. ಸುಮಿತ್ರಾ ಕಲ್ಲೂರಾಯ ವಂದಿಸಿದರು. ಬಳಿಕ ತಡಂಬೈಲ್ ನ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿಯ ವರಿಂದ ತಾಳಮದ್ದಳೆ ನಡೆಯಿತು.ಹಿಮ್ಮೇಳದಲ್ಲಿ ಕಾವ್ಯಶ್ರೀ ಗುರುಪ್ರಸಾದ್, ಅಜೇರು ಶ್ರೀಪತಿ ನಾಯಕ್, ವೇಣುಗೋಪಾಲ ಭಟ್ ಮಾಂಬಾಡಿ, ಮುಮ್ಮೇಳದಲ್ಲಿ ಸುಮಿತ್ರ ಶಶಿಕಾಂತ ಕಲ್ಲೂರಾಯ, ವೃಂದಾ ಕೊನ್ನಾರ್, ಉಮಾ ದಿವಾಕರ್, ಸುಮತಿ ಕೆ.ಎನ್., ಸತ್ಯಭಾಮಾ ಕಾರಂತ ಭಾಗವಹಿಸಿದ್ದರು.