ಯಕ್ಷ ಮಿತ್ರ ಬಳಗ ಕುಶಾಲನಗರ, ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಉಡುಪಿ ಜಿಲ್ಲೆ ಸಿದ್ದಾಪುರದ ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನದ ಸುಪ್ರಸಿದ್ಧ ಕಲಾವಿದರಿಂದ ನಾಲ್ಕನೇ ವರ್ಷದ ಯಕ್ಷ ಪ್ರದರ್ಶನ ಪಾಪಣ್ಣ ವಿಜಯ ಗುಣ ಸುಂದರಿ ಮೀನಾಕ್ಷಿ ಕಲ್ಯಾಣ ಪ್ರಸಂಗ ಕುಶಾಲನಗರದ ಕಲಾಭವನದಲ್ಲಿ ನಡೆಯಿತು.

ಕುಶಾಲನಗರ: ಯಕ್ಷ ಮಿತ್ರ ಬಳಗ ಕುಶಾಲನಗರ, ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಉಡುಪಿ ಜಿಲ್ಲೆ ಸಿದ್ದಾಪುರದ ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನದ ಸುಪ್ರಸಿದ್ಧ ಕಲಾವಿದರಿಂದ ನಾಲ್ಕನೇ ವರ್ಷದ ಯಕ್ಷ ಪ್ರದರ್ಶನ ಪಾಪಣ್ಣ ವಿಜಯ ಗುಣ ಸುಂದರಿ ಮೀನಾಕ್ಷಿ ಕಲ್ಯಾಣ ಪ್ರಸಂಗ ಕುಶಾಲನಗರದ ಕಲಾಭವನದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟನೆ ಮಾಡಿದ ಜಿಲ್ಲಾ ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್, ಕಲೆ ಎನ್ನುವುದು ಬೇರೆ ಬೇರೆ ಪ್ರದೇಶಗಳಲ್ಲಿ, ಬೇರೆ ಬೇರೆ ಹೆಸರಿನಲ್ಲಿ ಪ್ರಾತಿನಿಧ್ಯ ವಹಿಸುತ್ತದೆ. ಆ ಹಿನ್ನೆಲೆಯಲ್ಲಿ ಕರಾವಳಿ ಪ್ರದೇಶಗಳಲ್ಲಿ ಯಕ್ಷಗಾನ ಜನರ ಪ್ರೋತ್ಸಾಹದೊಂದಿಗೆ ಪ್ರಭಾವ ಬೀರುತ್ತಿದೆ ಎಂದರು.

ಕಸಾಪ ತಾಲೂಕು ಘಟಕದ ಅಧ್ಯಕ್ಷ ನಾಗೇಶ್ ಕೆ.ಎಸ್. ಅಧ್ಯಕ್ಷತೆ ವಹಿಸಿದ್ದರು.

ಸನ್ಮಾನ ಕಾರ್ಯಕ್ರಮ: ಯಕ್ಷ ಮಿತ್ರ ಬಳಗದ ಗಿರೀಶ್ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಯಕ್ಷ ರಾಘವ ಜನಸಾಲೆ ಪ್ರತಿಷ್ಠಾನದ ನಿರ್ದೇಶಕರು, ಭಾಗವತ ರಾಘವೇಂದ್ರ ಆಚಾರ್ಯ, ರಾಮಕೃಷ್ಣ ಹೆಗಡೆ ಹಿಲ್ಲೂರು, ಕಲಾವಿದ ನೀಲ್ಕೋಡು ಶಂಕರ ಹೆಗಡೆ, ಕುಶಾಲನಗರದ ಮಹಿಳಾ ಉದ್ಯಮಿ ಚಿತ್ರ ರಮೇಶ್ ಅವರನ್ನು ಸನ್ಮಾನಿಸಲಾಯಿತು.

ಪಾಪಣ್ಣ ವಿಜಯ ಗುಣಸುಂದರಿ ಮತ್ತು ಮೀನಾಕ್ಷಿ ಕಲ್ಯಾಣ ಯಕ್ಷಗಾನ ಸುಮಾರು 5 ಗಂಟೆಗಳ ಕಾಲ ಪ್ರಸ್ತುತಗೊಂಡಿತು.ರವೀಂದ್ರನಾಥ ದೇವಾಡಿಗ, ಸುಬ್ರಮಣ್ಯ ಹೆಗಡೆ, ಪುರಂದರ ಮೂಡ್ಕಣಿ, ಕಾರ್ತಿಕ ಕಣ್ಣಿಮನೆ, ಪವನ್ ಸಾಣ್ಮನೆ, ಶಶಾಂಕ ಆಚಾರ್ಯ, ಪ್ರಜ್ವಲ್ ಮುಂಡಾಡಿ ಮತ್ತಿತರ ಕಲಾವಿದರು ಪ್ರೇಕ್ಷಕರನ್ನು ರಂಜಿಸಿದರು.