ಸಾರಾಂಶ
ಆಲಮಟ್ಟಿ: ಯಲಗೂರೇಶ್ವರ ದೇವಸ್ಥಾನ ಸಮಿತಿ ನೀಡುವ ಪ್ರತಿಷ್ಠಿತ ಯಲಗೂರೇಶ ಅನುಗ್ರಹ ಪ್ರಶಸ್ತಿಗೆ ಈ ಬಾರಿ ಹಿರಿಯ ಪತ್ರಕರ್ತ ದಿ.ರಾಮ ಮನಗೂಳಿ ಭಾಜನರಾಗಿದ್ದು, ಮರಣೋತ್ತರವಾಗಿ ಪ್ರಶಸ್ತಿ ನೀಡಲಾಗುತ್ತಿದೆ.2ನೇ ದಿನ ತೆಂಗಿನ ತೋಟದಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಸಮಿತಿ ಅಧ್ಯಕ್ಷ ಅನಂತ ಓಂಕಾರ ಘೋಷಿಸಿದರು. ಮನಗೂಳಿ ಆಯ್ಕೆಗೆ ಸೇರಿದ್ದ ಜನರು ಹರ್ಷೋದ್ಘಾರ ಕೂಗುವ ಮೂಲ ಸಹಮತ ವ್ಯಕ್ತಪಡಿಸಿದರು. ಮಾತನಾಡಿದ, ದೇವಾಲಯ ಸಮಿತಿ ಸದಸ್ಯ ಗೋಪಾಲ ಗದ್ದನಕೇರಿ, ರಾಮ ಮನಗೂಳಿ ಯಲಗೂರ ಕ್ಷೇತ್ರದ ಅಭಿವೃದ್ಧಿಗೆ ಪರೋಕ್ಷವಾಗಿ ಸಾಕಷ್ಟು ಶ್ರಮಿಸಿದ್ದಾರೆ. ಪ್ರಗತಿಪರ ಹೋರಾಟಕ್ಕೆ ಸದಾ ಸಾಥ್ ನೀಡುತ್ತಾ, ಸರ್ವಧರ್ಮದವರ ಏಳಿಗೆಯನ್ನು ಬಯಸಿದ ರಾಮಣ್ಣ ಅವರ ಅಕಾಲಿಕ ನಿಧನ ಯಲಗೂರು ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದರು. ನರಸಿಂಹ ಆಲೂರ, ಪ್ರಮೋದ ಕುಲಕರ್ಣಿ ಅವರು ರಾಮ ಮನಗೂಳಿ ಅವರ ಬಗ್ಗೆ ಮಾತನಾಡಿದರು.ಸಂಗೀತ ಕಾರ್ಯಕ್ರಮ: ಶನಿವಾರ ಆರಂಭಗೊಂಡಿದ್ದ ಸಂಗೀತ ಕಾರ್ಯಕ್ರಮ ಭಾನುವಾರ ಸಂಜೆ ಪೂರ್ಣಗೊಂಡಿತು. ಭಾನುವಾರ ಬೆಳಿಗ್ಗೆ 10 ಕ್ಕೆ ಉಸ್ತಾದ್ ಶಫಿಕ್ ಖಾನ್ ಸಿತಾರ್ ಸೇರಿ ಹಲವರಿಂದ ಸಂಗೀತ ಕಾರ್ಯಕ್ರಮ ನಡೆದವು,ಭಾನುವಾರ ಸಂಜೆ ಯಲಗೂರೇಶನ ರಥೋತ್ಸವ ಸಹಸ್ರಾರು ಜನರ ಸಮ್ಮುಖದಲ್ಲಿ ಅದ್ಧೂರಿಯಾಗಿ ಜರುಗಿತು. ದೇವಸ್ಥಾನದ ಹೊರ ಆವರಣದಿಂದ ಯಲಗೂರ ವೃತ್ತದವರೆಗೆ ರಥೋತ್ಸವ ಜರುಗಿತು.ಎಲ್ಲೆಡೆ ಉತ್ತತ್ತಿ ತೂರುವ ದೃಶ್ಯ, ಗೋವಿಂದ ಗೋವಿಂದ ನಾಮಸ್ಮರಣೆ ಕೇಳಿ ಬಂತು. ರಥೋತ್ಸವಕ್ಕೂ ಮುನ್ನ ಸಾರವಾಡದ ಗೊಂಬೆಗಳ ಕುಣಿತದ ಪ್ರದರ್ಶನವೂ ನಡೆಯಿತು. ಅದಕ್ಕೆ ಅನ್ನದಾಸೋಹ ಸಮಿತಿಯ ಅಧ್ಯಕ್ಷ ಶ್ಯಾಮ ಪಾತರದ ಚಾಲನೆ ನೀಡಿದರು.