ಸಾರಾಂಶ
ಯಮಹಾ ಆರ್‌ಎಕ್ಸ್-100 ಬೈಕ್ ಮೇಲಿದ್ದ ವ್ಯಾಮೋಹ ಹಾಗೂ ತನ್ನಿಂದ ಅಂತಹ ಬೈಕ್ ಕೊಳ್ಳಲು ಹಣ ಇಲ್ಲದ ಕಾರಣಕ್ಕೆ ಅದೇ ಬೈಕ್‌ಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿ, 3 ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.
- ಎಸ್‌ಒಜಿ ಕಾಲೋನಿ ಜಿ.ದರ್ಶನ್ ಆರೋಪಿ । 3 ಬೈಕ್‌ಗಳ ವಶ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಯಮಹಾ ಆರ್‌ಎಕ್ಸ್-100 ಬೈಕ್ ಮೇಲಿದ್ದ ವ್ಯಾಮೋಹ ಹಾಗೂ ತನ್ನಿಂದ ಅಂತಹ ಬೈಕ್ ಕೊಳ್ಳಲು ಹಣ ಇಲ್ಲದ ಕಾರಣಕ್ಕೆ ಅದೇ ಬೈಕ್‌ಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿ, 3 ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.ನಗರದ ಎಸ್‌ಒಜಿ ಕಾಲೋನಿ ವಾಸಿ, ತರಗಾರ ಕೆಲಸಗಾರ ಜಿ.ದರ್ಶನ್ (21) ಬಂಧಿತ ಆರೋಪಿ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.
ತರಳಬಾಳು ಬಡಾವಣೆ ನಿವಾಸಿ ನಾಗರಾಜ ಆರ್. ಅಂಗಡಿ ನ.8ರಂದು ರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಯಮಹಾ ಆರ್‌ಎಕ್ಸ್-135 ಬೈಕ್ ಕಳವಾಗಿತ್ತು. ಬೆಳಗ್ಗೆ ಎದ್ದು ನೋಡಿದಾಗ ಬೈಕ್ ಇರಲಿಲ್ಲ. ಬೈಕ್ ಪತ್ತೆ ಮಾಡಿಕೊಡುವಂತೆ ನಾಗರಾಜ ಅಂಗಡಿ ವಿದ್ಯಾನಗರ ಠಾಣೆ ಪೊಲೀಸರಿಗೆ ಮನವಿ ಮಾಡಿದ್ದರು.ಎಎಸ್‌ಪಿಗಳಾದ ವಿಜಯಕುಮಾರ ಎಂ. ಸಂತೋಷ, ಜಿ.ಮಂಜುನಾಥ, ಡಿವೈಎಸ್‌ಪಿ ಮಲ್ಲೇಶ ದೊಡ್ಮನಿ, ವಿದ್ಯಾನಗರ ಠಾಣೆ ನಿರೀಕ್ಷಕಿ ವೈ.ಎಸ್. ಶಿಲ್ಪಾ ಮಾರ್ಗದರ್ಶನದಲ್ಲಿ ಪಿಎಸ್ಐ ಜಿ.ಎನ್. ವಿಶ್ವನಾಥ, ಸಿಬ್ಬಂದಿ ಆರೋಪಿ ಜಿ.ದರ್ಶನ್‌ನನ್ನು ಬಂಧಿಸಿದರು. ₹3 ಲಕ್ಷ ಮೌಲ್ಯದ 3 ಯಮಹಾ ಆರ್‌ಎಕ್ಸ್ ಬೈಕ್‌ಗಳನ್ನು ಸಹ ವಶಕ್ಕೆ ಪಡೆಯಲಾಗಿದೆ.
ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಶೋಧ ನಡೆದಿದೆ. ಆರೋಪಿ ಬಂಧನದಿಂದ ವಿದ್ಯಾನಗರ ಠಾಣೆ ವ್ಯಾಪ್ತಿಯ 1 ಹಾಗೂ ಬಡಾವಣೆ ಠಾಣೆ ವ್ಯಾಪ್ತಿಯ 2 ಯಮಹಾ ಬೈಕ್ ಕಳವು ಪ್ರಕರಣ ಪತ್ತೆಯಾದಂತಾಗಿದೆ.ಸಿಬ್ಬಂದಿ ಶಂಕರ ಜಾಧವ್, ಎಂ.ಆನಂದ, ಬೋಜಪ್ಪ, ಚಂದ್ರಪ್ಪ, ಮಾರುತಿ, ಸೋಮಶೇಖರ, ರಾಘವೇಂದ್ರ, ಜಿಲ್ಲಾ ಪೊಲೀಸ್ ಕಚೇರಿಯ ರಾಘವೇಂದ್ರ, ರಾಮಚಂದ್ರ ಜಾಧವ್, ಶಾಂತ ರಾಜಕುಮಾರ ಹಾಗೂ ಅಧಿಕಾರಿಗಳ ಬಗ್ಗೆ ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ ಪ್ರಶಂಸಿದ್ದಾರೆ.
- - - -14ಕೆಡಿವಿಜಿ5:ದಾವಣಗೆರೆ ವಿದ್ಯಾನಗರ ಪೊಲೀಸರು ಎಸ್‌ಒಜಿ ಕಾಲೋನಿಯ ಜಿ.ದರ್ಶನ್ ಎಂಬಾತನ ಬಂಧಿಸಿ, ವಶಕ್ಕೆ ಪಡೆದಿರುವ ಯಮಹಾ ಬೈಕ್‌ಗಳು.