ದೊಡ್ಡಬಳ್ಳಾಪುರ: ತಾಲೂಕಿನ ಮೆಳೆಕೋಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಯಾನ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಡಾ. ನಾಗಮೋಹನದಾಸ್ ಬರೆದಿರುವ ಸಂವಿಧಾನ ಓದು ಪುಸ್ತಕ ವಿತರಿಸಲಾಯಿತು
ದೊಡ್ಡಬಳ್ಳಾಪುರ: ತಾಲೂಕಿನ ಮೆಳೆಕೋಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಯಾನ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಡಾ. ನಾಗಮೋಹನದಾಸ್ ಬರೆದಿರುವ ಸಂವಿಧಾನ ಓದು ಪುಸ್ತಕ ವಿತರಿಸಲಾಯಿತು.
ಯಾನ ಸಂಸ್ಥೆ ಅಧ್ಯಕ್ಷೆ ನಂದಿನಿ ಮಂಜುನಾಥ್ ಮಾತನಾಡಿ, ಬ್ರಿಟಿಷರ ಆಳ್ವಿಕೆಯಿಂದ ಮುಕ್ತಗೊಂಡ ಸ್ವತಂತ್ರ ದೇಶವನ್ನು ನಡೆಸಲು ರೂಪಿಸಿದ ಕಾನೂನು ನಿಯಮಾವಳಿಗಳ ಪುಸ್ತಕ ಸಂವಿಧಾನವಾಗಿದೆ. ಇದನ್ನು ದೇಶದ ಪ್ರತಿಯೊಬ್ಬ ನಾಗರಿಕನು ತಿಳಿಯಬೇಕು. ಹಕ್ಕು ಕರ್ತವ್ಯಗಳನ್ನು ಅರಿತು ಪಾಲಿಸಬೇಕು. ದೇಶದ ಭಾವಿ ಪ್ರಜೆಗಳಾದ ವಿದ್ಯಾರ್ಥಿಗಳು ಸಮಾಜದಲ್ಲಿ ನಡೆಯುವ ಅನ್ಯಾಯದ ವಿರುದ್ಧ ಪ್ರಶ್ನಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕಾದರೆ ಮೊದಲಿಗೆ ಸಂವಿಧಾನದ ಜ್ಞಾನ ಪಡೆದುಕೊಳ್ಳಬೇಕು ಎಂದರು.ಶಿಕ್ಷಕ ಮೋಹನ್ ಕುಮಾರ್ ಮಾತನಾಡಿ, ಇಂದಿನ ಪೀಳಿಗೆಗೆ ಸಂವಿಧಾನದ ಜ್ಞಾನ ನೀಡುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಯುವ ತಂಡವು ತಾಲೂಕಿನ ಗ್ರಾಮಾಂತರ ಶಾಲೆಯೊಂದನ್ನು ಆಯ್ಕೆ ಮಾಡಿ ಪುಸ್ತಕ ವಿತರಿಸಿದೆ ಎಂದರು.
ಮುಖ್ಯೋಪಾಧ್ಯಾಯ ಗಿರಿರಂಗಯ್ಯ, ಯಾನ ಸಂಸ್ಥೆ ಸದಸ್ಯ ದಯಾನಂದ್, ಸಂದೀಪ್, ಸಹ ಶಿಕ್ಷಕರು ಸೇರಿದಂತೆ ಶಾಲಾ ಸಿಬ್ಬಂದಿ ಹಾಗು ಮಕ್ಕಳು ಉಪಸ್ಥಿತರಿದ್ದರು.26ಕೆಡಿಬಿಪಿ6- ದೊಡ್ಡಬಳ್ಳಾಪುರ ತಾಲೂಕಿನ ಮೆಳೇಕೋಟೆ ಗ್ರಾಮದಲ್ಲಿ ಯಾನ ಸಂಸ್ಥೆಯಿಂದ ಗಣರಾಜ್ಯೋತ್ಸವ ಅಂಗವಾಗಿ ವಿದ್ಯಾರ್ಥಿಗಳಿಗೆ ಸಂವಿಧಾನ ಓದು ಪುಸ್ತಕಗಳನ್ನು ವಿತರಿಸಲಾಯಿತು.