ಸಾರಾಂಶ
ರಾಜ್ಯ ಸರ್ಕಾರ ಯಾರದ್ದೋ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ ಮಾಡ್ತಾ ಇದೆ, ಯಾರದ್ದೋ ಮದುವೆಯಲ್ಲಿ ಉಂಡವನೆ ಜಾಣ ಎಂಬಂತೆ ವರ್ತಿಸುತ್ತಿದೆ ಎಂದು ಮಾಜಿ ಸಚಿವ ಸಿ.ಟಿ. ರವಿ ಆರೋಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುರಾಜ್ಯ ಸರ್ಕಾರ ಯಾರದ್ದೋ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ ಮಾಡ್ತಾ ಇದೆ, ಯಾರದ್ದೋ ಮದುವೆಯಲ್ಲಿ ಉಂಡವನೆ ಜಾಣ ಎಂಬಂತೆ ವರ್ತಿಸುತ್ತಿದೆ ಎಂದು ಮಾಜಿ ಸಚಿವ ಸಿ.ಟಿ. ರವಿ ಆರೋಪಿಸಿದ್ದಾರೆ.
ಕೇರಳದಲ್ಲಿ ಆನೆ ತುಳಿತಕ್ಕೆ ಬಲಿಯಾದ ವ್ಯಕ್ತಿಗೆ ಕರ್ನಾಟಕ ರಾಜ್ಯ ಸರ್ಕಾರ ಪರಿಹಾರ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುವಾಗ ಪ್ರತಿಕ್ರಿಯೆ ನೀಡಿದರು.ನಿಮ್ಮ ರಾಜಕೀಯ ಹಿತಾಸಕ್ತಿಗೆ ಕರ್ನಾಟಕದ ಹಣವನ್ನ ಕೇರಳಕ್ಕೆ ಕೊಡಲು ನಾಚಿಕೆ ಆಗಲ್ವ ಕೇರಳದಲ್ಲಿ ನಿಮ್ಮದೆ ಮೈತ್ರಿ ಕೂಟದ ಸರ್ಕಾರವಿದೆ, ಪರಿಹಾರ ಕೊಡಿಸೋ ಯೋಗ್ಯತೆ ಇಲ್ವಾ ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ನನ್ನ ತೆರಿಗೆ ನನ್ನ ಹಕ್ಕು ಅಂತ ಎದೆ ತಟ್ಕೊಂಡು ನಾಟಕ ಮಾಡ್ತಾರೆ. ರಾಜ್ಯಕ್ಕೆ ಸಂಬಂಧವಿಲ್ಲದ ಪ್ರಕರಣದಲ್ಲಿ 15 ಲಕ್ಷ ವ್ಯಯ ಏಕೆ ಎಂದು ಪ್ರಶ್ನಿಸಿರುವ ಅವರು, ಕೇರಳ ಕಾಂಗ್ರೆಸ್ ಸಂಸದನ ತಾಳಕ್ಕೆ ರಾಜ್ಯ ಕಾಂಗ್ರೆಸ್ ಏಕೆ ಕುಣಿಯುತ್ತಿದೆ. ತನ್ನ ಧಣಿಗಳ ಮನ ಮೆಚ್ಚಿಸಲು ಈ ರೀತಿ ಮಾಡ್ತಿದ್ಯಾ ಎಂದು ಹೇಳಿದರು.ನಕಲಿ ಗಾಂಧಿಗಳ ಹಿತರಕ್ಷಣೆಗೆ ಕನ್ನಡಿಗರ ಹಿತಾಸಕ್ತಿ ಬಲಿ ನೀಡಬೇಕೇ, ವೇಣುಗೋಪಾಲ್ ನಿಮ್ಮ ಸರ್ಕಾರದ ಕೊರಿಯರ್ ಬಾಯ್ ಎಂಬ ಕಾರಣಕ್ಕೋ, ಹೈಕಮಾಂಡ್ ತೆರಿಗೆ ವ್ಯವಹಾರಕ್ಕೆ ಅನುಕೂಲವಾಗಲೆಂದೋ ಎಂದ ಅವರು, ತುಘಲಕ್ ದರ್ಬಾರ್ ಅನ್ನೋದನ್ನ ಓದಿದ್ವಿ, ಕೇಳಿದ್ವಿ. ಸಿದ್ದರಾಮಯ್ಯನವರ ಆಡಳಿತದಲ್ಲಿ ನೋಡುತ್ತಿದ್ದೇವೆ ಎಂದು ಟೀಕಿಸಿದರು.