ಸಾರಾಂಶ
ದೆಹಲಿಯಲ್ಲಿ ಆ. 15ರಂದು ನಡೆಯುವ ಸ್ವಾತಂತ್ರ್ಯೋತ್ಸವಕ್ಕೆ ರಾಯಭಾರಿಯಾಗಿ ಆಯ್ಕೆಯಾಗಿರುವ ಯಶಸ್ವಿ ರೈ ಅವರನ್ನು ಗೌರವಿಸಲಾಯಿತು.
ನಾಪೋಕ್ಲು: ದೆಹಲಿಯಲ್ಲಿ ಆಗಸ್ಟ್ 15 ರಂದು ನಡೆಯುವ ಸ್ವಾತಂತ್ರ್ಯೋತ್ಸವಕ್ಕೆ ರಾಯಭಾರಿಯಾಗಿ ಆಯ್ಕೆಯಾಗಿರುವ ಯಶಸ್ವಿ ರೈ ಅವರನ್ನು ಕಾಂತೂರು ಗ್ರಾಮ ಪಂಚಾಯಿತಿ ವತಿಯಿಂದ ಸನ್ಮಾನಿಸಿ ಗೌರವಿಸಿ ಶುಭ ಹಾರೈಸಲಾಯಿತು.
ಕಾರ್ಯಕ್ರಮದಲ್ಲಿ ಪಂಚಾಯಿತಿ ಅಧ್ಯಕ್ಷ ಕುಶನ್ ರೈ, ಉಪಾಧ್ಯಕ್ಷರು ರೇಖಾ ಬಿ ಎಸ್, ಪಿ ಡಿ ಓ ಚಂದ್ರಮೌಳಿ, ಸದಸ್ಯರಾದ ವಿಜು ತಿಮ್ಮಯ, ಸೌಮ್ಯ ಸತೀಶ್, ರೀತಾ ಸುದರ್ಶನ್, ಸುಮಾ ಸುಂದರಿ, ಪುಷ್ಪ, ದಿವ್ಯ ಮಿತ್ತೂರ್, ಯಶ್ವಿನ್, ರಘು. ಹೀರ ಸುಬ್ಬಯ್ಯ. ಶೃತಿ, ಲತ, ಶರ್ಮಿಳಾ, ಮೀನಾಕ್ಷಿ ದೇವಯ್ಯ ಮತ್ತು ಸಿಬ್ಬಂದಿ ನಿರೂಪ, ಶಶಿ, ಲಿಖಿತ, ಕೋಮಲ, ದಿನೇಶ ಮತ್ತು ತಾಯಿ ಜಯಂತಿ ರೈ ಹಾಜರಿದ್ದರು. ಯಶಸ್ವಿ ರೈ ಕಾಂತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗ ಗ್ರಾಮದ ನಿವಾಸಿ ಜಯಂತಿ ಬಿ. ಬಿ ಮತ್ತು ಲವಕುಮಾರ್ ದಂಪತಿ ದ್ವಿತೀಯ ಪುತ್ರ.