ಸಾರಾಂಶ
ಸತತ 4ನೇ ಬಾರಿಗೆ ಯಶ್‌ಪಾಲ್ ಸುವರ್ಣ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.  ಉಪಾಧ್ಯಕ್ಷರಾಗಿ ದೇವಪ್ಪ ಕಾಂಚನ್ ಪುನರಾಯ್ಕೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಅವಿಭಜಿತ ದಕ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನಿಗೆ 2024-29 ನೇ ಸಾಲಿಗೆ ಅಧ್ಯಕ್ಷರಾಗಿ, ಸತತ 4ನೇ ಬಾರಿಗೆ ಅವಿರೋಧವಾಗಿ ಯಶ್‌ಪಾಲ್ ಎ ಸುವರ್ಣ ಪುನರಾಯ್ಕೆಯಾಗಿದ್ದಾರೆ, ಉಪಾಧ್ಯಕ್ಷರಾಗಿ ದೇವಪ್ಪ ಕಾಂಚನ್ ಅವರು ಆಯ್ಕೆಯಾಗಿದ್ದಾರೆ.ಬುಧವಾರ ಫೆಡರೇಶನಿನ ಆಡಳಿತ ಮಂಡಳಿಯ ಸಭೆಯಲ್ಲಿ ಮಂಗಳೂರು ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಸುಧೀರ್ ಕುಮಾರ್ ಅವರು ಚುನಾವಣಾಧಿಕಾರಿಯಾಗಿ ಚುನಾವಣೆ ನಡೆಸಿಕೊಟ್ಟರು.
ಯಶ್‌ಪಾಲ್ ಸುವರ್ಣ 2009 ರಲ್ಲಿ ಫೆಡರೇಶನಿನ ಅಧ್ಯಕ್ಷತೆಯನ್ನು ವಹಿಸಿಕೊಂಡ ಬಳಿಕ ಫೆಡರೇಶನಿನ ವ್ಯವಹಾರಗಳನ್ನು ವಿಸ್ತರಿಸಿ, ನೂತನ ಬ್ಯಾಂಕಿಂಗ್ ವಿಭಾಗ ಆರಂಭಿಸಿ ರಾಜ್ಯ ಕೇಂದ್ರ ಸರ್ಕಾರಗಳ ಹಲವಾರು ಯೋಜನೆಗಳನ್ನು ಸಂಸ್ಥೆಯಿಂದ ಅನುಷ್ಠಾನಗೊಳಿಸಿ 46 ಕೋಟಿ ರು.ಗಳ ವ್ಯವಹಾರವನ್ನು 350 ಕೋಟಿ ಮೀರುವಂತೆ ಮಾಡಿದ್ದಾರೆ.ಹಿಂದೆ ಹಲವು ವರ್ಷಗಳಿಂದ ನಷ್ಟದಲ್ಲಿದ್ದ ಫೆಡರೇಶನ್ ಯಶ್‌ಪಾಲ್ ಸುವರ್ಣ ಅಧ್ಯಕ್ಷರಾಗಿ ನೇತೃತ್ವ ವಹಿಸಿಕೊಂಡ ಬಳಿಕ ನಿರಂತರವಾಗಿ ಲಾಭ ಗಳಿಸುತ್ತ 15 ವರ್ಷಗಳಲ್ಲಿ ಸುಮಾರು 60 ಕೋಟಿ ಲಾಭವನ್ನು ದಾಖಲಿಸಿದೆ.
ಫೆಡರೇಶನ್ ಗೆ 2023 ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಮೀನುಗಾರಿಕೆ ಇಲಾಖೆಯ ರಾಷ್ಟ್ರೀಯ ಅತ್ಯುತ್ತಮ ಮೀನುಗಾರಿಕಾ ಮಹಾಮಂಡಲ ಪ್ರಶಸ್ತಿ, 2020ನೇ ಸಾಲಿನ ರಾಜ್ಯ ಮಟ್ಟದ ಅತ್ಯುತ್ತಮ ಮೀನುಗಾರಿಕಾ ಮಹಾಮಂಡಲ ಪ್ರಶಸ್ತಿ ಸಹಿತ, ಸಹಕಾರ ಕ್ಷೇತ್ರದ ಸಾಧನೆಯನ್ನು ಗುರುತಿಸಿ 2022 ನೇ ಸಾಲಿನ ರಾಜ್ಯ ಮಟ್ಟದ ಸಹಕಾರ ರತ್ನ ಪ್ರಶಸ್ತಿಗೆ ಯಶ್‌ಪಾಲ್ ಸುವರ್ಣ ಭಾಜನರಾಗಿದ್ದಾರೆ.;Resize=(128,128))
;Resize=(128,128))
;Resize=(128,128))
;Resize=(128,128))