ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಪಕ್ಷದಿಂದ ಉಚ್ಚಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳರು ಮರಳಿ ಮತ್ತೆ ಬಿಜೆಪಿಗೆ ಬರುವರು ಎಂದು ಶಾಸಕ ರಮೇಶ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.ಪಕ್ಷದ ಹಿರಿಯ ನಾಯಕ ಯತ್ನಾಳ ಅವರನ್ನು ಏಕೆ ಪಕ್ಷದ ಹೈಕಮಾಂಡ್ ಉಚ್ಚಾಟನೆ ಮಾಡಿದೆ ನನಗೆ ಗೊತ್ತಿಲ್ಲ. ಅವರ ಉಚ್ಚಾಟನೆಯ ಯತ್ನ ಒಂದು ತಿಂಗಳಿಂದ ನಡೆದಿತ್ತು. ನಮಗೆ ಮೊದಲೇ ಸುದ್ದಿ ಇತ್ತು. ಹೈಕಮಾಂಡ್ ಜೊತೆಗೆ ನಿನ್ನೆ ರಾತ್ರಿ ಮಾತನಾಡಿದ್ದೇನೆ. ಪಕ್ಷಕ್ಕೆ ಯತ್ನಾಳ ನ್ಯಾಯುತವಾಗಿ ದುಡಿದಿದ್ದಾರೆ. ಇದು ವಿರೋಧಿ ಬಣಕ್ಕೂ ಎಚ್ಚರಿಕೆ ಗಂಟೆಯಾಗಿದ್ದು, ಯತ್ನಾಳ್ ಮತ್ತೆ ಬಿಜೆಪಿಗೆ ವಾಪಸ್ ಬರುತ್ತಾರೆ ಎಂದರು.ಪಕ್ಷ ತೆಗೆದುಕೊಂಡಿರುವ ನಿರ್ಣಯ ಪ್ರಶ್ನಿಸುವ ದೊಡ್ಡ ವ್ಯಕ್ತಿ ನಾನಲ್ಲ. ಶುಕ್ರವಾರ ಎಲ್ಲ ನಾಯಕರು ಬೆಂಗಳೂರಿನಲ್ಲಿ ಚರ್ಚೆ ಮಾಡುತ್ತೇವೆ. ಯತ್ನಾಳ ಕಡೆಯಿಂದ ಹೈಕಮಾಂಡ್‌ಗೆ ಪತ್ರ ಬರೆಸುತ್ತೇವೆ. ಪುನಃ ಮರುಪರಿಶೀಲನೆ ಮಾಡುವಂತೆ ಮನವಿ ಮಾಡುತ್ತೇವೆ. ಉಚ್ಚಾಟನೆಯಾಗಲು ಯಾರ ಕೈವಾಡ ಇದೆ ಎನ್ನುವುದನ್ನು ನಾನು ಹೇಳುವುದಿಲ್ಲ ಎಂದು ತಿಳಿಸಿದರು. ಯತ್ನಾಳ್ ಅವರು ಏಕಾಂಗಿಯಲ್ಲ. ನಾವು ಅವರ ಜೊತೆಗೆ ಗಟ್ಟಿಯಾಗಿ ನಿಂತಿದ್ದೇವೆ. ಅವರ ಪರ ನಾವಿದ್ದೇವೆ. ನಮ್ಮ ಬೆನ್ನು ನಮಗೆ ಕಾಣುವುದಿಲ್ಲ. ನಮ್ಮಲ್ಲಿ ತಪ್ಪುಗಳಿದ್ದರೇ ಸರಿಪಡಿಸಿಕೊಳ್ಳುತ್ತೇವೆ. ಹೈಕಮಾಂಡ್ ನಾಯಕರಿಗೆ ಉಚ್ಚಾಟನೆ ವಾಪಸ್ ಪಡೆಯುವಂತೆ ಮನವಿ ಮಾಡುತ್ತೇವೆ. ನಾವೆಲ್ಲರೂ ಒಗ್ಗಟ್ಟಿನಿಂದ ಪಕ್ಷ ಕಟ್ಟುತ್ತೇವೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇವೆ. ನಾವು ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವುದಿಲ್ಲ.
-ರಮೇಶ ಜಾರಕಿಹೊಳಿ, ಶಾಸಕರು.