ಸಾರಾಂಶ
ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೊಸ ಪಕ್ಷ ಕಟ್ಟಲಿ, ಯಾರು ಬೇಡ ಎನ್ನುತ್ತಾರೆ ಎಂದು ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಎಸ್.ಎ. ರವೀಂದ್ರನಾಥ ಹೇಳಿದ್ದಾರೆ.
ದಾವಣಗೆರೆ: ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೊಸ ಪಕ್ಷ ಕಟ್ಟಲಿ, ಯಾರು ಬೇಡ ಎನ್ನುತ್ತಾರೆ ಎಂದು ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಎಸ್.ಎ. ರವೀಂದ್ರನಾಥ ಹೇಳಿದರು.
ನಗರದ ನೀರಾವರಿ ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಹುಟ್ಟಿದ ನಂತರ ಎಲ್ಲರಿಗೂ ಆ ಅಧಿಕಾರ ಇರುತ್ತದೆ. ಯಾರಾದರೂ ಗುಂಡು ಹೊಡೆಯುವಾಗ ಎದುರಿಗೆ ಯಾರಾದರೂ ಇರಬೇಕು. ಆದ್ದರಿಂದ ಯಡಿಯೂರಪ್ಪನವರ ಬಗ್ಗೆ ಯತ್ನಾಳ್ ಮಾತನಾಡುತ್ತಾ ಇರುತ್ತಾರೆ. ಯಾಕೆಂದರೆ, ಯಡಿಯೂರಪ್ಪ ಸುಮ್ಮನಿರುತ್ತಾರೆಂದೇ ಯತ್ನಾಳ್ ಮಾತನಾಡುತ್ತಾರೆ ಎಂದು ಕುಟುಕಿದರು.ಈಗ ಏನೇನು ನಡೆದಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಹಾಗಾಗಿ, ಅದರ ಬಗ್ಗೆ ಮಾತನಾಡಲು ನಾಚಿಕೆಯೇನೂ ಇಲ್ಲ. ಮುಂದಿನ ದಿನಗಳಲ್ಲಿ ಎಲ್ಲದರ ಬಗ್ಗೆಯೂ ಮಾತನಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ರವೀಂದ್ರನಾಥ ಪ್ರತಿಕ್ರಿಯಿಸಿದರು.
- - -ಕೋಟ್ದಾವಣಗೆರೆ ವಿಶ್ವವಿದ್ಯಾನಿಲಯದಿಂದ ತಮಗೆ ಗೌರವ ಡಾಕ್ಟರೇಟ್ ಬಂದಿರುವುದಕ್ಕೆ ಸಂತೋಷವಾಗಿದೆ. ಗೌರವ ಡಾಕ್ಟರೇಟ್ ಯಾಕೆ ಕೊಟ್ಟಿದ್ದಾರೋ ಗೊತ್ತಿಲ್ಲ. ಕೇಳಿ ತಿಳಿದುಕೊಳ್ಳುತ್ತೇನೆ. ಏನೇ ಕೊಟ್ಟರೂ ಸಂತೋಷ ಬರುವುದಿಲ್ಲವೆಂದರೆ ಏನರ್ಥ? ನನಗಂತೂ ಗೌರವ ಡಾಕ್ಟರೇಟ್ ನೀಡಿರುವುದಕ್ಕೆ ಸಂತೋಷವಾಗಿದೆಯೆಂದು ಹೇಳಲಿಚ್ಚಿಸುತ್ತೇನೆ. ಏನೇ ಬರಲಿ ಅದಕ್ಕೆ ಸಂತೋಷಪಡಬೇಕು.- ಎಸ್.ಎ.ರವೀಂದ್ರನಾಥ. ಬಿಜೆಪಿ ಹಿರಿಯ ನಾಯಕ
- - --1ಕೆಡಿವಿಜಿ2: ಎಸ್.ಎ.ರವೀಂದ್ರನಾಥ