ಕಾಫಿಯ ನಾಡು ಕಾಡು ಪ್ರಾಣಿಗಳ ತವರೂರು, ಮಲೆನಾಡಿಗೆ ಸೀಮಿತವಾಗಿದ್ದ ಕಾಡು ಪ್ರಾಣಿಗಳ ಉಪಟಳ ಬಯಲುಸೀಮೆಗೂ ಈ ವರ್ಷದಲ್ಲಿ ಹಬ್ಬಿತ್ತು. ಹಲವೆಡೆ ಪ್ರಾಣಿಗಳ- ಮಾನವ ನಡುವೆ ಸಂಘರ್ಷ ಆಗಿದ್ದು, ಇದಕ್ಕೆ ಮನುಷ್ಯ ಮಾತ್ರವಲ್ಲ, ಪ್ರಾಣಿಗಳು ಕೂಡ ಪ್ರಾಣ ಬಿಟ್ಟಿವೆ. ಒಟ್ಟಾರೆ ಜಿಲ್ಲೆಯ ಪಾಡಿಗೆ ಇದೊಂದು ಬ್ಯಾಡ್ ನ್ಯೂಸ್.
ಆರ್.ತಾರಾನಾಥ್
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಕಾಫಿಯ ನಾಡು ಕಾಡು ಪ್ರಾಣಿಗಳ ತವರೂರು, ಮಲೆನಾಡಿಗೆ ಸೀಮಿತವಾಗಿದ್ದ ಕಾಡು ಪ್ರಾಣಿಗಳ ಉಪಟಳ ಬಯಲುಸೀಮೆಗೂ ಈ ವರ್ಷದಲ್ಲಿ ಹಬ್ಬಿತ್ತು. ಹಲವೆಡೆ ಪ್ರಾಣಿಗಳ- ಮಾನವ ನಡುವೆ ಸಂಘರ್ಷ ಆಗಿದ್ದು, ಇದಕ್ಕೆ ಮನುಷ್ಯ ಮಾತ್ರವಲ್ಲ, ಪ್ರಾಣಿಗಳು ಕೂಡ ಪ್ರಾಣ ಬಿಟ್ಟಿವೆ. ಒಟ್ಟಾರೆ ಜಿಲ್ಲೆಯ ಪಾಡಿಗೆ ಇದೊಂದು ಬ್ಯಾಡ್ ನ್ಯೂಸ್.
ಕಾನೂನು ಸುವ್ಯವಸ್ಥೆ ದೃಷ್ಟಿಯಲ್ಲಿ ಹೇಳುವುದಾದರೆ ಜಿಲ್ಲೆಗೆ ಗುಡ್‌ನ್ಯೂಸ್ ಕೊಟ್ಟ ವರ್ಷ 2025. ಕಾರಣ ಸುಮಾರು 25 ವರ್ಷಗಳ ಕಾಲ ಮಲೆನಾಡಿನಲ್ಲಿ ಬೇರು ಬಿಟ್ಟಿದ್ದ ನಕ್ಸಲ್ ಹೋರಾಟ ಅಂತ್ಯ ಕಂಡ ವರ್ಷ. ಜನವರಿ 8 ರಂದು 6 ಮಂದಿ ನಕ್ಸಲೀಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರು ಶರಣಾದರು. ಏಕಾಂಗಿಯಾಗಿದ್ದ ಕೋಟಿಹೊಂಡ ರವಿ ಕೂಡ ಫೆ.2ರಂದು ಶರಣಾಗತಿ ಸಮಿತಿ ಮೂಲಕ ಜಿಲ್ಲಾಡಳಿತದ ಎದುರು ಶರಣಾದರು. ಒಟ್ಟಾರೆ ನಕ್ಸಲ್ ಹೋರಾಟ ಅಂತ್ಯ ಕಂಡ ವರ್ಷ ಇದಾಗಿದೆ.ಮಾರುಕಟ್ಟೆಯಲ್ಲಿ ಈ ವರ್ಷದಲ್ಲಿ ಕಾಫಿ ಸೇರಿದಂತೆ ಇತರೆ ಬೆಳೆಗಳಿಗೆ ಉತ್ತಮ ಬೆಲೆ ಇತ್ತು. ಆದರೆ, ಭಾರೀ ಮಳೆಯಿಂದಾಗಿ ಕಾಫಿ, ಅಡಕೆ, ಮೆಣಸು, ಭತ್ತ, ತೆಂಗು ಹಲವು ರೋಗಗಳಿಗೆ ತುತ್ತಾದವು. ಇದರಿಂದಾಗಿ ಪ್ರತಿ ವರ್ಷದಂತೆ ಈ ವರ್ಷವೂ ರೈತರಿಗೆ ನಿರಾಶದಾಯಕವಾಗಿತ್ತು.
ಕಾಡು ಪ್ರಾಣಿಗಳ ಉಪಟಳಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಅಂಚಿನ ಕೆಲ ಗ್ರಾಮಗಳಿಗೆ ಬರುತ್ತಿದ್ದ ಕಾಡಾನೆಗಳು ಎಲ್ಲೆಡೆ ಹಾವಳಿ ನಡೆಸಿದವು. ಮಡಬೂರು, ಮುತ್ತಿನಕೊಪ್ಪ, ಸಾತೋಳಿ, ದೊಡ್ಡಿನತಲೆ, ಮಾಕೋಡು, ಗೇರುಬೈಲು, ಸೂಸಲವಾನಿ, ಚೆನಮಣಿ, ಮಳಲಿ, ಬಣಗಿ, ಆರಂಬಳ್ಳಿ, ದ್ವಾರಮಕ್ಕಿ, ರಾವೂರು, ಲಿಂಗಾಪುರ ಗ್ರಾಮಗಳು, ಆಡುವಳ್ಳಿ, ಕರ್ಕೇಶ್ವರ, ಕಾನೂರು, ಸೀತೂರು ಸೇರಿ ಸುತ್ತಮುತ್ತಲ ಗ್ರಾಮಗಳಿಗೆ ಆನೆಗಳು ಬಂದವು. ರೈತರೊಬ್ಬರು ಮೃತಪಟ್ಟರೆ, ಮಡಬೂರು ಗ್ರಾಮ ವ್ಯಾಪ್ತಿಯಲ್ಲಿ ರೈತರೊಬ್ಬರು ಒಂಟಿ ಸಲಗದ ದಾಳಿಗೆ ಮೃತಪಟ್ಟರು. ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಕಾಡಾನೆ ಉಪಟಳದ ಜತೆಗೆ ಕಾಡು ಹಂದಿಗಳ ಉಪಟಳವೂ ಹೆಚ್ಚಾಯಿತು. ಉಪಟಳ ನೀಡುತ್ತಿದ್ದ ಎರಡು ಕಾಡಾನೆಗಳನ್ನು ಸೆರೆ ಹಿಡಿಯಲಾಯಿತು.
ಎಮ್ಮೆದೊಡ್ಡಿ ಪ್ರದೇಶದಲ್ಲಿ ಬೈಕ್ ಸವಾರರ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿತ್ತು. ಚಿರತೆಯನ್ನು ಗ್ರಾಮಸ್ಥರು ಆಟ್ಟಾಡಿಸಿದ್ದರು. ಅದೇ ದಿನ ಕೆರೆಯಲ್ಲಿ ಚಿರತೆಯೊಂದರ ಶವ ಪತ್ತೆಯಾಗಿತ್ತು.ಎಲ್ಲೆಂದರಲ್ಲಿ ಗೋಚರಿಸುತ್ತಿರುವ ಚಿರತೆಗಳು ರಾತ್ರಿ ವೇಳೆ ಊರಿನೊಳಗೆ ನುಗ್ಗಿ ಹಸು, ನಾಯಿ, ಕುರಿ ಸೇರಿ ಸಾಕು ಪ್ರಾಣಿಗಳನ್ನು ಕೊಲ್ಲುತ್ತಿವೆ. ಇದರಿಂದ ಜನರು ರಾತ್ರಿ ಮನೆಯಿಂದ ಹೊರ ಬರಲು ಭಯಪಡುವಂತಾಗಿತ್ತು. ಇದರ ನಡುವೆ ತರೀಕೆರೆ ತಾಲೂಕಿನ ಬೈರಾಪುರ ಬಳಿ ಚಿರತೆ ಸೆರೆ ಕಾರ್ಯಾಚರಣೆ ವೇಳೆ ಅರಣ್ಯ ಸಿಬ್ಬಂದಿ ಗುಂಡಿಗೆ ಚಿರತೆ ಬಲಿಯಾಯಿತು.
ಜನವರಿ- 8: ಮುಖ್ಯಮಂತ್ರಿ ಎದುರು 6 ಮಂದಿ (ಮುಂಡಗಾರು ಲತಾ, ವನಜಾಕ್ಷಿ, ಜಯಣ್ಣ, ಸುಂದರಿ, ವಸಂತ್, ಎ.ಡಿ. ಜಿಷಾ) ನಕ್ಸಲೀಯರು ಶರಣು
- 11: ಶೃಂಗೇರಿ ಶಾರದ ಪೀಠದ ಭಾರತೀತೀರ್ಥ ಸ್ವಾಮೀಜಿ ಅವರು ಸನ್ಯಾಸತ್ವ ಸ್ವೀಕರಿಸಿ ಐವತ್ತು ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ಆಯೋಜಿಸಿದ್ದ ಶಾಂಕರ ತತ್ವ ಪ್ರಸಾರ ಅಭಿಯಾನದಲ್ಲಿ ಸ್ತೋತ್ರ ತ್ರಿವೇಣಿಯ ಮಹಾಸಮರ್ಪಣೆ ನಡೆಯಿತು.- ಕೊಪ್ಪ ತಾಲೂಕಿನ ಜಯಪುರ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ನಕ್ಸಲೀಯರ ಬಂದೂಕು, ಗುಂಡು ವಶ.ಫೆಬ್ರವರಿ- 2: ನಕ್ಸಲ್ ಹೋರಾಟಗಾರ ಕೋಟೆಹೊಂಡ ರವಿ ಜಿಲ್ಲಾಡಳಿತದ ಮುಂದೆ ಶರಣಾದರು.- 6: ಕಾಡುಕೋಣ ದಾಳಿಗೆ ಕಳಸ ತಾಲೂಕಿನ ಲಲಿತಾದ್ರಿ ಗ್ರಾಮದ ರಘುಪತಿ ಮೃತಪಟ್ಟರು.- 8: ತಣಗೆಬೈಲು ವನ್ಯಜೀವಿ ವ್ಯಾಪ್ತಿಯ ಕತ್ತೆಖಾನ್ ಎಸ್ಟೇಟ್‌ನಲ್ಲಿ ಕಾಫಿ ತೋಟ ಕಾರ್ಮಿಕ ಮಹಿಳೆ ವಿನೋಬ ಬಾಯಿ ಅವರು ಆನೆ ದಾಳಿಗೆ ಮೃತಪಟ್ಟರು.
- 28: ನ್ಯಾಯಾಲಯದ ಆದೇಶದಂತೆ ವಿಧಾನ ಪರಿಷತ್ ಚುನಾವಣೆ ಮರು ಮತ ಎಣಿಕೆ ನಡೆಸಿದ ಜಿಲ್ಲಾಡಳಿತ. ನ್ಯಾಯಾಲಯಕ್ಕೆ ವರದಿ ಸಲ್ಲಿಸಿತು.ಮಾರ್ಚ್- 17: ಮಂಗನ ಕಾಯಿಲೆಗೆ ನರಸಿಂಹರಾಜಪುರ ತಾಲೂಕಿನ ಕಟ್ಟಿನಮನೆ ಗ್ರಾಮದ 65 ವರ್ಷದ ಮಹಿಳೆ ಮೃತಪಟ್ಟರು.ಏಪ್ರಿಲ್- 1: ತರೀಕೆರೆ ತಾಲೂಕಿನ ಕೆಮ್ಮಣ್ಣುಗುಂಡಿ ಸಮೀಪ ವಿದ್ಯುತ್ ಸ್ಪರ್ಶದಿಂದ ಕಾಡಾನೆ ಮೃತಪಟ್ಟಿತು.
- 2: ಖಾಂಡ್ಯ ಹೋಬಳಿ ಮಾಗಲು ಗ್ರಾಮದಲ್ಲಿ ವ್ಯಕ್ತಿ ಹಾರಿಸಿದ ಗುಂಡಿಗೆ ಮಗಳು, ಅತ್ತೆ ಮತ್ತು ನಾದಿನಿ ಮೃತಪಟ್ಟಿದ್ದರು. ಕೊನೆಗೆ ತಾನೂ ಗುಂಡು ಹಾರಿಸಿಕೊಂಡು ರತ್ನಾಕರ ಮೃತಪಟ್ಟರು.ಜೂನ್- 7: ಅತಿವೃಷ್ಟಿ ಪ್ರದೇಶಕ್ಕೆ ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.- 10: ಬಂಡಾಜೆಗೆ ಚಾರಣಕ್ಕೆ ಹೋಗಿದ್ದ ಬೆಂಗಳೂರಿನ ಆರು ವಿದ್ಯಾರ್ಥಿಗಳು ನಾಪತ್ತೆಯಾಗಿ ಆತಂಕ ಹುಟ್ಟಿಸಿದ್ದರು. ಮಧ್ಯರಾತ್ರಿ ಮರಳಿದರು.
- 14: ಚಿಕ್ಕಮಗಳೂರು ತಾಲೂಕುಮಟ್ಟದ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ ಕುವೆಂಪು ಕಲಾಮಂದಿರದಲ್ಲಿ ನಡೆಯಿತು.- 29: ಕೊಪ್ಪ ಪಟ್ಟಣದ ಮೂರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಶಮಿತಾ(15) ಶೌಚಾಲಯದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಳು. ಈ ಪ್ರಕರಣ ಮಲೆನಾಡಿನಲ್ಲಿ ಆತಂಕ ಹುಟ್ಟಿಸಿತ್ತು.ಜುಲೈ- 5: ನಗರಸಭೆ ನೂತನ ಅಧ್ಯಕ್ಷರಾಗಿ ಜೆಡಿಎಸ್-ಬಿಜೆಪಿ ಬೆಂಬಲಿತ ಬಿ.ಶೀಲಾ ದಿನೇಶ್ ಅವಿರೋಧವಾಗಿ ಆಯ್ಕೆಯಾದರು.
- 11: ಚಿಕ್ಕಮಗಳೂರು ತಿರುಪತಿ ನಡುವಿನ ರೈಲು ಸಂಚಾರಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣ ಚಾಲನೆ ನೀಡಿದರು.- 24: ನರಸಿಂಹರಾಜಪುರ ತಾಲೂಕು ಬನ್ನೂರು ಗ್ರಾಮದ ಬಳಿ ಕಾರ್ಮಿಕ ಮಹಿಳೆ ಅನಿತಾ (25) ಕಾಡಾನೆ ದಾಳಿಗೆ ಮೃತಪಟ್ಟರು.
- 25: ಪಿಕಪ್ ಜೀಪ್ ಸಮೇತ ಭದ್ರಾ ನದಿಗೆ ಬಿದ್ದು ಯುವಕ ಮೃತಪಟ್ಟಿದ್ದ.- 28: ಕಾಡಾನೆ ದಾಳಿಗೆ ಬಾಳೆಹೊನ್ನೂರು ಅಂಡುವಾನೆ ಗ್ರಾಮದ ಸುಬ್ಬೇಗೌಡ ಹಾಗೂ ಸುನೀತಾ ಮೃತಪಟ್ಟರು.ಸೆಪ್ಟಂಬರ್
- 7: ಆರತಿ ಕೃಷ್ಣ ಅವರು ವಿಧಾನ ಪರಿಷತ್ ಸದಸ್ಯರಾಗಿ ನೇಮಕಗೊಂಡರು.- 19: ಬಿಂಡಿಗ ದೇವಿರಮ್ಮ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯಿತು.ಅಕ್ಟೋಬರ್ - 31: ಶೃಂಗೇರಿ ತಾಲೂಕಿನ ಕರೆ ಗ್ರಾಮದ ಉಮೇಶಗೌಡ ಮತ್ತು ಹರೀಶ್ ಶೆಟ್ಟಿ ಎಂಬುವರು ಕಾಡಾನೆ ತುಳಿದು ಮೃತಪಟ್ಟರು.ನವೆಂಬರ್- 3: ಬೀರೂರು ಪಟ್ಟಣದಲ್ಲಿ ವೀರಶೈವ ಲಿಂಗಾಯತ ಪಂಚಪೀಠಾಧೀಪತಿಗಳ ಅಡ್ಡಪಲ್ಲಕ್ಕಿ ಉತ್ಸವ ನಡೆಯಿತು.
- 20: ಬೀರೂರು ಸಮೀಪದ ನವಿಲುಗುಡ್ಡದ ತೋಟದ ಮನೆ ಮುಂಭಾಗ ಆಟವಾಡುತ್ತಿದ್ದ ಐದು ವರ್ಷದ ಮಗುವನ್ನು ಚಿರತೆ ಎಳೆದುಕೊಂಡು ಹೋಗಿ ಸಾಯಿಸಿತ್ತು.- 28: ತರೀಕೆರೆ ತಾಲೂಕಿನ ಬೈರಾಪುರ ಗ್ರಾಮದ 11 ವರ್ಷದ ಬಾಲಕನ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿತು.- 29: ತರೀಕೆರೆ ತಾಲೂಕಿನ ಬೈರಾಪುರ ಬಳಿ ಚಿರತೆ ಸೆರೆ ಕಾರ್ಯಾಚರಣೆ ವೇಳೆ ಅರಣ್ಯ ಸಿಬ್ಬಂದಿ ಗುಂಡಿಗೆ ಚಿರತೆ ಬಲಿ.ಡಿಸೆಂಬರ್
- 3: ದತ್ತ ಜಯಂತಿ ಅಂಗವಾಗಿ ಚಿಕ್ಕಮಗಳೂರಿನಲ್ಲಿ ಶೋಭಾಯಾತ್ರೆ ನಡೆಯಿತು.- 22: ಕಡೂರು ತಾಲೂಕಿನ ಹಿರೇನಲ್ಲೂರು ಕಲ್ಲೇನಹಳ್ಳಿಯಲ್ಲಿ 3 ಕೃಷ್ಣಮೃಗಗಳು ಗುಂಡೇಟಿಗೆ ಬಲಿ