ವನ್ಷಿಕಾ ಹಿತಾನ್ಯ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಸೇರ್ಪಡೆ

| Published : Dec 21 2024, 01:20 AM IST

ವನ್ಷಿಕಾ ಹಿತಾನ್ಯ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಸೇರ್ಪಡೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಇಂಡಿಯನ್ ಟಿವಿ ಸಿಇಒ ಎಸ್. ರಾಜು ಮತ್ತು ಕೆ.ಆರ್. ಪೂಜಾಶ್ರೀ ಪುತ್ರಿಯಾದ ವನ್ಷಿಕಾ ಹಿತಾನ್ಯ, ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ಭಾರತ್ ವಿಭೂಷಣ್ ಪಡೆದು ದಾಖಲೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಅಗಾಧ ಬುದ್ಧಿಶಕ್ತಿ ಪ್ರದರ್ಶಿಸುವ ಮೈಸೂರಿನ 1 ವರ್ಷದ ಪುಟಾಣಿ ವನ್ಷಿಕಾ ಹಿತಾನ್ಯ ಅವರು ನ್ಯಾಷನಲ್ ಬುಕ್ ಆಫ್ ರೆಕಾರ್ಡ್‌ ನಲ್ಲಿ ದಾಖಲೆ ಮಾಡಿದ್ದಾರೆ.

ನಗರದ ಇಂಡಿಯನ್ ಟಿವಿ ಸಿಇಒ ಎಸ್. ರಾಜು ಮತ್ತು ಕೆ.ಆರ್. ಪೂಜಾಶ್ರೀ ಪುತ್ರಿಯಾದ ವನ್ಷಿಕಾ ಹಿತಾನ್ಯ, ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ಭಾರತ್ ವಿಭೂಷಣ್ ಪಡೆದು ದಾಖಲೆ ಮಾಡಿದ್ದಾರೆ.

ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ತನ್ನ ಅಗಾಧ ಬುದ್ಧಿಶಕ್ತಿಯಿಂದ ದೇಹದ ಅಂಗಾಂಗಗಳನ್ನು ಗುರುತಿಸುವುದು, ಪ್ರಾಣಿಗಳು, ಹಣ್ಣುಗಳು, ತರಕಾರಿಗಳು, ಬಣ್ಣಗಳನ್ನು ವನ್ಷಿಕಾ ಹಿತಾನ್ಯ ಗುರುತಿಸುತ್ತಾರೆ. ಅಲ್ಲದೆ, ರಾಷ್ಟ್ರೀಯ ನಾಯಕರನ್ನು ಗುರುತಿಸುವುದು, ಪ್ರಾಣಿಗಳ ಧ್ವನಿ ಅನುಕರಣೆ ಸೇರಿದಂತೆ ಇಂಗ್ಲಿಷ್ ರೈಮಿಂಗ್‌ ಹಾಡುಗಳಿಗೆ ನೃತ್ಯ ಮಾಡುತ್ತಾರೆ. ವಯಸ್ಸಿಗೆ ಮೀರಿದ ಪ್ರತಿಭೆ ಇರುವ ವನ್ಷಿಕಾ ಹಿತಾನ್ಯ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಮುಡಿಗೇರಿಸಿಕೊಂಡಿದ್ದಾರೆ. ಅಷ್ಟೆ ಅಲ್ಲದೆ, ಇನ್ ಜೀನಿಯಸ್ ಚಾರ್ಮ್ ಆಫ್‌ ವರ್ಲ್ಡ್ ರೆಕಾ ರ್ಡ್ ಹಾಗೂ ಇನ್ ಫ್ಲುಯೆನ್ಸರ್ಸ್ ಬುಕ್ ಆಫ್ ರೆಕಾರ್ಡ್ ಕೂಡ ಪಡೆದಿದ್ದಾರೆ.

ಕೆ.ಜಿ. ಕೊಪ್ಪಲು ಎಂ. ಸೋನಿ ಕರಿಗೌಡರ ಮರಿ ಮೊಮ್ಮಗಳಾದ ವನ್ಷಿಕಾ ಹಿತಾನ್ಯ ಸಾಧನೆಯನ್ನು ಇಡೀ ಕುಟುಂಬವೇ ಸಂಭ್ರಮಿಸಿದೆ.