ಜೂ.21ರಂದು ನಡೆಯುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಗಂಗಾವತಿಯಲ್ಲಿ ಯೋಗ ಜಾಗೃತಿ ನಡಿಗೆ ನಡೆಯಿತು. ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯಿತು.

ಗಂಗಾವತಿ:

ಸರ್ವಯೋಗ, ಧ್ಯಾನ ಮತ್ತು ಅಧ್ಯಾತ್ಮ ಬಳಗ ಮತ್ತು ಸ್ಫೂರ್ತಿ ಆರ್ಯುವೇದಿಕ್ ಮೇಡಿಕಲ್ ಕಾಲೇಜು ಪ್ರಾಯೋಜಕತ್ವದಲ್ಲಿ ಜೂ.21ರಂದು 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಶುಕ್ರವಾರ ನಗರದಲ್ಲಿ ಯೋಗ ಜಾಗೃತಿ ನಡಿಗೆ ಕಾರ್ಯಕ್ರಮ ಜರುಗಿತು.

ಎಪಿಎಂಸಿ ಆವರಣದ ಚನ್ನಬಸವಸ್ವಾಮಿ ದೇವಸ್ಥಾನದಿಂದ ಪ್ರಾರಂಭಿಸಿ ಸಿಬಿಎಸ್ ವೃತ್ತ, ಗಾಂಧಿ ಸರ್ಕಲ್, ಬಸವಣ್ಣ ಸರ್ಕಲ್ ಮುಖಾಂತರವಾಗಿ ಕೊಟ್ಟೂರು ಬಸವೇಶ್ವರ ದೇವಸ್ಥಾನ ಆವರಣದ ವರೆಗೂ ಜಾಥಾ ಜರುಗಿತು. ಜಾಥಾದಲ್ಲಿ ಮಾಜಿ ಸಂಸದ ಶಿವರಾಮಗೌಡ, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಎಚ್.ಆರ್, ಶ್ರೀನಾಥ, ಅಧ್ಯಾತ್ಮ ಬಳಗದ ಸಂಚಾಲಕ ರಘುನಾಥ ಪವಾರ್, ಡಾ. ಎಸ್.ಬಿ. ಹಂದ್ರಾಳ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.

ಇಂದು ಯೋಗ ದಿನಾಚರಣೆ:

ಶನಿವಾರನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಬೆಳಿಗ್ಗೆ 5.45ಕ್ಕೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಯೋಗ ದಿನಾಚರಣೆ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಪರಣ್ಣ ಮನವಳ್ಳಿ, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಸಂಸದ ಎಸ್. ಶಿವರಾಮಗೌಡ, ಮಾಜಿ ವಿಪ ಸದಸ್ಯ ಎಚ್.ಆರ್. ಶ್ರೀನಾಥ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ವಿವಿಧ ಸಂಘಟನೆಗಳು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಪತಂಜಲಿ ಯೋಗ ಸಮಿತಿ ಒಳಗೊಂಡಂತೆ ವಿವಿಧ ಸಮಿತಿಗಳ ಸದಸ್ಯರು ಭಾಗವಹಿಸಲಿದ್ದರೆಂದು ಸಂಚಾಲಕರಾದ ರಘುನಾಥ ಪವರ್ ತಿಳಿಸಿದ್ದಾರೆ.