ಕನ್ನಡಪ್ರಭ ವಾರ್ತೆ ಮಂಡ್ಯ

ಹನ್ನೆರಡನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ತಾಲೂಕಿನ ಮಾರದೇವನಹಳ್ಳಿಯಲ್ಲಿರುವ ಶ್ರೀಸತ್ಯ ಸಾಯಿ ಶಾರದಾನಿಕೇತನಂ ಗುರುಕುಲದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಯೋಗಾಭ್ಯಾಸ ನಡೆಸಿದರು.

ಕಾರ್ಯಕ್ರಮದಲ್ಲಿ ಸೂರ್ಯ ನಮಸ್ಕಾರ, ತಾಡಾಸನ, ವೀರಭದ್ರಾಸನ, ಮತ್ಸ್ಯಾಸನ ಸೇರಿದಂತೆ ಹಲವು ಆಸನಗಳ ಪ್ರಾಯೋಗಿಕ ಪ್ರಯೋಜನಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿ, ನಂತರ ಆಸನ ಭಂಗಿಗಳನ್ನು ಅಭ್ಯಾಸ ಮಾಡಿಸಲಾಯಿತು. ನುರಿತ ಯೋಗಪಟುಗಳಾದ ವೆಂಕಟೇಶ್ ದಾಸನಗೌಡರ ಮತ್ತು ಆಚಾರ್ಯ ಮುಕುಲ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಅನೇಕ ಯೋಗ ಕೌಶಲ್ಯಗಳನ್ನು ಅತ್ಯಂತ ಶಿಸ್ತುಬದ್ಧವಾಗಿ ಪ್ರಸ್ತುತಪಡಿಸಿದರು.

ಅಭ್ಯಾಗತರನ್ನು ಉದ್ದೇಶಿಸಿ ಮಾತನಾಡಿದ ಗುರುಕುಲದ ನಿರ್ದೇಶಕ ಟಿ.ಸಿ.ಪ್ರವೀಣ್ ಕುಮಾರ್‌, ಭಾರತೀಯ ಯೋಗ ಪರಂಪರೆಯ ಕುರಿತು ಸವಿವರವಾಗಿ ಮಾತನಾಡಿದರು. ಮಹರ್ಷಿ ಪತಂಜಲಿ ಅವರು ಪ್ರತಿಪಾದಿಸಿದ ಅಷ್ಟಾಂಗ ಯೋಗದಿಂದ ಪ್ರಾರಂಭವಾದ ಈ ಯೋಗ ಪರಂಪರೆ ವಿಶ್ವವ್ಯಾಪಿಯಾಗಿ ದೇಹ-ಮನಸ್ಸು-ಆತ್ಮಗಳ ಸಮನ್ವಯ ಸಾಧನವಾಗಿದೆ. ಯೋಗ ಕೇವಲ ದೈಹಿಕ ವ್ಯಾಯಾಮವಲ್ಲ, ಅದು ಜೀವನ ಶೈಲಿ ಎಂದು ತಿಳಿಸಿದರು.

ಮಂಡ್ಯದ ಅಂಗ ಸಂಸ್ಥೆಯ ವಿದ್ಯಾರ್ಥಿಗಳು 50 ಅಂಕಿಯ ಮಾನವ ಕಲಾಕೃತಿಯಲ್ಲಿ ನಿಂತು ಸಾಮೂಹಿಕ ಯೋಗಾಭ್ಯಾಸವನ್ನು ಪ್ರದರ್ಶಿಸಿದರು.


ಸಂಸ್ಥೆಯ ಶಿಕ್ಷಕರಾದ ಶ್ರೀಸುಬ್ರಹ್ಮಣ್ಯಂ, ರಾಜು, ರಘು, ವೆಂಕಟೇಶ್, ಶ್ರೀನಿವಾಸ್ ಶೆಟ್ಟಿ, ಮತ್ತು ವಿದ್ಯಾರ್ಥಿ ನಿಲಯದ ಮುಖ್ಯಸ್ಥರಾದ ಕಾರ್ತಿಕ್ ಗೌಡ, ಬಾಬು, ಮನು ಇತರರಿದ್ದರು.

ಉತ್ಸಾಹದಿಂದ ಯೋಗ ಮಾಡಿದ ವಿದ್ಯಾರ್ಥಿಗಳುಮದ್ದೂರು:ತಾಲೂಕಿನ ಕೆ.ಹೊನ್ನಲಗೆರೆ ಆರ್.ಕೆ.ವಿದ್ಯಾಸಂಸ್ಥೆಯಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ಉತ್ಸಾಹದಿಂದ ಪಾಲ್ಗೊಂಡರು.

ಸಂಸ್ಥೆ ಕಾರ್ಯನಿರ್ವಾಹಕ ಅಧಿಕಾರಿ ಆರ್.ಕೀರ್ತನ ನಿಖಿಲ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯೋಗವನ್ನು ದೈನಂದಿನ ಭಾಗವಾಗಿ ಮಾಡಿಕೊಳ್ಳಬೇಕು. ಇದರಿಂದ ಮಾನಸಿಕ ಒತ್ತಡ ನಿವಾರಣೆ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.ಈ ವೇಳೆ ಸಂಸ್ಥಾಪಕ ಅಧ್ಯಕ್ಷ, ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ರಾಮಕೃಷ್ಣ, ವ್ಯವಸ್ಥಾಪಕ ನಿರ್ದೇಶಕ ಆರ್.ವಿನಯ್ ರಾಮಕೃಷ್ಣ, ಆಡಳಿತ ಅಧಿಕಾರಿ ಮರಿಸ್ವಾಮಿಗೌಡ, ಪ್ರಾಂಶುಪಾಲ ರಾಧಾ ಸತೀಶ್ ಬಾಬು, ರಮೇಶ,ಕಲ್ಯಾಣಿ ಪ್ರಭಾವತಿ ಹಾಗೂ ಶಿಕ್ಷಕರು ಭಾಗವಹಿಸಿದ್ದರು.