ಮುನಿಯಾಲು ಯೋಗ, ಪ್ರಕೃತಿ ಚಿಕಿತ್ಸಾ ಕಾಲೇಜಿನಲ್ಲಿ ಯೋಗ ದಿನಾಚರಣೆ

| Published : Jun 23 2024, 02:10 AM IST

ಮುನಿಯಾಲು ಯೋಗ, ಪ್ರಕೃತಿ ಚಿಕಿತ್ಸಾ ಕಾಲೇಜಿನಲ್ಲಿ ಯೋಗ ದಿನಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಯೋಗ ಪ್ರಾತ್ಯಕ್ಷಿಕೆಯ ನಂತರ ಪ್ರಕೃತಿ ಚಿಕಿತ್ಸಾ ಆಹಾರ ಪದ್ಧತಿಯ ಅನುಸಾರ ಮೊಳಕೆ ಕಾಳುಗಳ ಹಾಗೂ ಹಣ್ಣಿನ ಸಲಾಡ್ ಮತ್ತು ಲಿಂಬೆ ಜೇನಿನ ರಸವನ್ನು ಸಭಿಕರಿಗೆ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಕಾರ್ಕಳ

ಇಲ್ಲಿನ ಹರಿಖಂಡಿಗೆಯಲ್ಲಿರುವ ಮುನಿಯಾಲು ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನಲ್ಲಿ ಹತ್ತನೇ ಅಂತರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಆಯುಷ್ ಸಚಿವಾಲಯದ ಶಿಷ್ಟಾಚಾರದ ಅನುಸಾರ ಯೋಗ ಪ್ರಾತ್ಯಕ್ಷಿಕೆಯಲ್ಲಿ ಮುನಿಯಾಲ್ ಸಂಸ್ಥೆಯ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ, ಹರಿಖಂಡಿಗೆ ಹಾಗೂ ಎಳ್ಳಾರೆ ಶಾಲಾ ಮಕ್ಕಳು, ಶಿಕ್ಷಕರು ಮತ್ತು ಹರಿಖಂಡಿಗೆಯ ಗ್ರಾಮಸ್ಥರು ಸೇರಿ ಒಟ್ಟು ೧೨೬ ಜನ ಭಾಗಿಯಾಗಿದ್ದರು. ಡಾ. ದೀಕ್ಷಾ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಡಾ.ರಶ್ಮಿ ನೇತೃತ್ವ ವಹಿಸಿದ್ದರು. ಪ್ರಾತ್ಯಕ್ಷಿಕೆಯ ನಂತರ ಪ್ರಕೃತಿ ಚಿಕಿತ್ಸಾ ಆಹಾರ ಪದ್ಧತಿಯ ಅನುಸಾರ ಮೊಳಕೆ ಕಾಳುಗಳ ಹಾಗೂ ಹಣ್ಣಿನ ಸಲಾಡ್ ಮತ್ತು ಲಿಂಬೆ ಜೇನಿನ ರಸವನ್ನು ಸಭಿಕರಿಗೆ ವಿತರಿಸಲಾಯಿತು.

ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಮುಖ್ಯಸ್ಥ ಡಾ.ಎಂ. ವಿಜಯಭಾನು ಶೆಟ್ಟಿ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾದ ದೇವಿಶ್ರೀ ಮಹಾಲಸ ನಾರಾಯಣಿ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಗುರೂಜಿ ಶ್ರೀ ಸುರೇಶ್ ಜೆ ಪೈ ಮಾರ್ಗದರ್ಶನ ನೀಡಿದರು.

ಹೋಟೇಲ್ ಉದ್ಯಮಿ ದಾಮೋದರ ನಾಯಕ್, ಮುನಿಯಾಲ್ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ. ಸತ್ಯನಾರಾಯಣ ಬಿ., ಉಪ ಪ್ರಾಂಶುಪಾಲೆ ಡಾ.ಶುಭಾ, ಟ್ರಸ್ಟಿ ಶ್ರೀಮತಿ ಹೇಮಲತಾ ವಿ ಶೆಟ್ಟಿ ಉಪಸ್ಥಿತರಿದ್ದರು.

ಡಾ. ಮೇಘಾಶ್ರೀ ಯೋಗ ದಿನದ ಪೂರ್ವಭಾವಿ ಕಾರ್ಯಗಾರದ ವರದಿ ಮಂಡಿಸಿದರು. ಡಾ. ಚೈತ್ರ ಕಾರ್ಯಕ್ರಮ ನಿರೂಪಿಸಿದರು. ಡಾ. ಸ್ಪೂರ್ತಿ ಸ್ವಾಗತಿಸಿದರು ಹಾಗೂ ಡಾ. ಸುಕನ್ಯಾ ವಂದಿಸಿದರು.