ಸಾರಾಂಶ
ಅಂಗೈಯಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ದೇಹವನ್ನು ದಂಡಿಸುವ ಸರಳ ವಿಧಾನವೇ ಯೋಗವಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಕೆ.ರಾಮಕೃಷ್ಣ ಹೇಳಿದರು.
ಚಿಂತಾಮಣಿ: ಅಂಗೈಯಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ದೇಹವನ್ನು ದಂಡಿಸುವ ಸರಳ ವಿಧಾನವೇ ಯೋಗವಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಕೆ.ರಾಮಕೃಷ್ಣ ಹೇಳಿದರು.
ನಗರದ ರಾಯಲ್ ವಿದ್ಯಾ ಸಂಸ್ಥೆಯಲ್ಲಿ ೧೧ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿ, ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ ಎಂಬ ಧ್ಯೇಯ ವಾಕ್ಯವನ್ನು ಹೊಂದಿದ್ದು ಯೋಗದ ಗುರಿಗಳು ಮತ್ತು ಉದ್ದೇಶಗಳು ಬಹುಮುಖ್ಯವಾಗಿವೆ. ದೈಹಿಕ ಮಾನಸಿಕ ಮತ್ತು ಆಧ್ಯಾತ್ಮಿಕ ಯೋಗ ಕ್ಷೇಮವನ್ನು ಒಳಗೊಳ್ಳುತ್ತದೆ. ಯೋಗ ಭಾರತದ ಸಾಂಸ್ಕೃತಿಕ ಆಸ್ತಿ. ಯೋಗಕ್ಕೆ ೫೦೦೦ ವರ್ಷಗಳ ಇತಿಹಾಸವಿದ್ದರೂ ಇತ್ತೀಚಿನವರೆಗೆ ಅನಾಥರಂತೆ ಅಸ್ತಿತ್ವದಲ್ಲಿತ್ತು ಆದರೆ ವಿಶ್ವ ಸಂಸ್ಥೆ ೨೦೧೪ರಲ್ಲಿ ಅಧಿಕೃತ ಮಾನ್ಯತೆ ನೀಡಿದ ಮೇಲೆ ಇದರ ವ್ಯಾಪ್ತಿ ಇಡೀ ಪ್ರಪಂಚಕ್ಕೆ ಪಸರಿಸಿತು ಎಂದರು..ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಸಾಮೂಹಿಕ ಯೋಗ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಕೆ.ಆರ್. ಪ್ರೇಮಲತಾ ಎಲ್ಲಾ ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು .