ಕನ್ನಡಪ್ರಭ ವಾರ್ತೆ ಹಲಗೂರು

ಪ್ರತಿಯೊಬ್ಬರೂ ತಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಂಡು ದಿನನಿತ್ಯ ಯೋಗಾಭ್ಯಾಸ ಮಾಡಬೇಕು ಎಂದು ಜೆಜೆ ಪಬ್ಲಿಕ್ ಶಾಲೆ ಮೇಲ್ವಿಚಾರಕ ವಿಕಾಸ್ ತಿಳಿಸಿದರು.

ಚನ್ನಪಟ್ಟಣ ರಸ್ತೆಯ ಜೆ.ಜೆ.ಪಬ್ಲಿಕ್ ಶಾಲಾ ವರಣದಲ್ಲಿ ಜೂನ್ 21ರಂದು ನಡೆಯುವ ಯೋಗ ದಿನಾಚರಣೆ ಅಂಗವಾಗಿ ಮಕ್ಕಳಿಗೆ ಯೋಗ ಅಭ್ಯಾಸ ಮತ್ತು ಅದರ ಮಹತ್ವವನ್ನು ತಿಳಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯೋಗ ಅಮೂಲ್ಯವಾದದ್ದು. ಯೋಗ ನಮ್ಮ ಆರೋಗ್ಯ ವೃದ್ಧಿ ಮಾಡುವ ಸನಾತನ ಸಂಸ್ಕೃತಿಯ ಒಂದು ಪದ್ಧತಿ. ಇದು ನಮಗೆ ಸುಸ್ಥಿರ ಆರೋಗ್ಯ ನೀಡುತ್ತದೆ. ಉತ್ತಮ ಆರೋಗ್ಯಕ್ಕಾಗಿ ಯೋಗ ಎಂಬ ಘೋಷ ವಾಕ್ಯದೊಡನೆ 2026ರ ಈ ಬಾರಿ ಉತ್ತಮ ಉತ್ಸಾಹಕ್ಕಾಗಿ ಯೋಗ ಎಂಬ ಧ್ಯೇಯ ವಾಕ್ಯದೊಡನೆ ಆಚರಿಸೋಣ ಎಂದರು.

ಸುಸ್ಥಿರ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮತೋಲನೆಗಾಗಿ ನಾವು ಯೋಗ ಮಾಡಬೇಕು. ಯೋಗವನ್ನು ಪರಿಚಯಿಸಿದವರು ಪತಂಜಲಿ ಮಹರ್ಷಿಗಳು. ಪ್ರತಿದಿನ ಅವರನ್ನು ಸ್ಮರಿಸುತ್ತಾ ಪ್ರಣಾಮಗಳನ್ನು ಸಲ್ಲಿಸುತ್ತಾ ಅರ್ಧ ಗಂಟೆ ಯೋಗ ಮಾಡುವುದರಿಂದ ನಾವು ಉತ್ತಮ ಆರೋಗ್ಯವನ್ನು ಗಳಿಸಬಹುದು ಎಂದರು.


ಇದೇ ವೇಳೆ ವಿದ್ಯಾರ್ಥಿಗಳಿಂದ ಯೋಗ ಅಭ್ಯಾಸದ ಮೂಲಕ ಪತಾಂಜಲಿ ಮಹರ್ಷಿಗಳ ಚಿತ್ರವನ್ನು ನಿರ್ಮಿಸಿದ್ದು ಮೆಚ್ಚುಗೆಗೆ ಪಾತ್ರವಾಗಿತ್ತು. ಶಾಲೆ ಸಂಸ್ಥಾಪಕ ಕೆ.ಜೆ.ಸೋಮಶೇಖರ್, ಪ್ರಾಂಶುಪಾಲ ಕೆ.ಎನ್.ಲಲಿತಾಂಬ ಸೋಮಶೇಖರ್, ದೈಹಿಕ ಶಿಕ್ಷಕರಾದ ರಾಜಶೇಖರ್ ಮೂರ್ತಿ, ಸಹ ಶಿಕ್ಷಕರಾದ ಶಿವಮಣಿ, ವಿಕಾಸ್, ನೇತ್ರ, ತ್ರಿವೇಣಿ, ಸೀಮಾ, ಮಧು, ಹೇಮಾ, ಪುಷ್ಪ, ಸುದರ್ಶನ್, ಸುಮಂತ್ ಸೇರಿದಂತೆ ಇತರರು ಇದ್ದರು.